New talents “Rana Rakshasa” praised by Censor Board

ಹೊಸ ಪ್ರತಿಭೆಗಳ “ರಣ ರಾಕ್ಷಸ” ಸೆನ್ಸಾರ್ ಮಂಡಳಿಯಿಂದ ಪ್ರಶಂಸೆ - CineNewsKannada.com

ಹೊಸ ಪ್ರತಿಭೆಗಳ “ರಣ ರಾಕ್ಷಸ” ಸೆನ್ಸಾರ್ ಮಂಡಳಿಯಿಂದ ಪ್ರಶಂಸೆ

ಚಂದನವನಕ್ಕೆ ಹೊಸ ಪ್ರತಿಭೆಗಳ ಆಗಮನ ಆರೋಗ್ಯಕರ ಬೆಳವಣಿಗೆಯಾಗಿದೆ. ಅದೇ ಸಾಲಿನಲ್ಲಿ ‘ರಣ ರಾಕ್ಷಸ’ ಚಿತ್ರವೊಂದು ಸದ್ದಿಲ್ಲದೆ ಸೆನ್ಸಾರ್‍ನಿಂದ ಪ್ರಶಂಸೆ ಪಡೆದುಕೊಂಡಿದೆ. ಮೊನ್ನೆಯಷ್ಟೇ ನಾಯಕ ಮತ್ತು ನಿರ್ಮಾಪಕ ಹೆಚ್.ಪಿ.ನರಸಿಂಹಸ್ವಾಮಿ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ನಾಂದಿ ಹಾಕಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕರು ತಂದೆ ರಂಗಭೂಮಿ ಕಲಾವಿದರು. ಅವರ ಬಳುವಳಿಯಿಂದಲೇ ನನಗೂ ಚಿಕ್ಕ ವಯಸ್ಸಿಗೆ ಅಭಿನಯದ ಗೀಳು ಹುಟ್ಟಿಕೊಂಡಿತು. ನಂತರ ಉದ್ಯಮದಲ್ಲಿ ಯಶಸ್ಸು ಕಂಡು ಚಿತ್ರಮಂದಿರ ಮಾಲೀಕನಾದೆ. ಇದೆಲ್ಲಾದರ ಅನುಭವದಿಂದ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ.

‘ರಣ ರಾಕ್ಷಸ’ ಚಿತ್ರ ತಂದೆ ಮಗಳ ಸಂಬಂಧವನ್ನು ಹೇಳಲಿದೆ. ‘ಚಿಟ್ಟೆಮ್ಯಾನ್’ ಫ್ಯಾಂಟಸಿ ಕಥೆ. ‘ಡಾನ್ ಶಿವ’ ಹೆಸರೇ ಹೇಳುವಂತೆ ಇದೊಂದು ಭೂಗತಲೋಕದ ಅಂಶಗಳನ್ನು ಒಳಗೊಂಡಿದೆ. ಕೊನೆಯ ಸಿನಿಮಾ ‘ಕೊರಗಜ್ಜ’ ಚಿತ್ರವು ‘ಕಾಂತಾರ’ದಂತೆ ಮೂಡಿಬರಲಿದ್ದು, ಶೂಟಿಂಗ್ ಹಂತದಲ್ಲಿದೆ.

ಈ ಸಿನಿಮಾದ ಒಂದು ಹಾಡಿಗೆ ಸಾಹಿತ್ಯ ಬರೆದು ಹಾಡಿದ್ದೇನೆ. ನಾಲ್ಕರ ಪೈಕಿ ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದೇನೆ. ಎಲ್ಲಾ ಸಿನಿಮಾಗಳಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಸದ್ಯಕ್ಕೆ ‘ರಣ ರಾಕ್ಷಸ’ ಜನರಿಗೆ ತೋರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

ರಚನೆ,ಚಿತ್ರಕಥೆ,ಸಂಭಾಷಣೆ,ಸಂಗೀತ ಹಾಗೂ ನಿರ್ದೇಶನ ಮುರಳಿಪ್ರಸಾದ್ ಅವರದಾಗಿದೆ. ತಾರಾಗಣದಲ್ಲಿ ಪುಣ್ಯಗೌಡ, ದತ್ತ, ದಿಲೀಪ್ ಮುಂತಾದವರು ನಟಿಸಿದ್ದಾರೆ. ಸಂಕಲನ ಭಾರ್ಗವ ನಿರ್ವಹಿಸಿದ್ದಾರೆ.

ಬೆಂಗಳೂರು, ಹೆಸರುಘಟ್ಟ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶ್ರೀ ಲಕ್ಷೀ ನರಸಿಂಹಸ್ವಾಮಿ ಎಂಟರ್‍ಟೈನ್‍ಮೆಂಟ್ಸ್ ಅಡಿಯಲ್ಲಿರುವ ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin