“Nishiddha” quietly completes shooting; ready to hit the screens

“ನಿಷಿದ್ಧ” ಸದ್ದಿಲ್ಲದೆ ಚಿತ್ರೀಕರಣ ಪೂರ್ಣ; ತೆರೆಗೆ ಬರಲು ಸಿದ್ದ - CineNewsKannada.com

“ನಿಷಿದ್ಧ” ಸದ್ದಿಲ್ಲದೆ ಚಿತ್ರೀಕರಣ ಪೂರ್ಣ; ತೆರೆಗೆ ಬರಲು ಸಿದ್ದ

ಕನ್ನಡ ಚಿತ್ರರಂಗದಲ್ಲಿ ಕೆಲ ಚಿತ್ರಗಳು ಸದ್ದು ಮಾಡಿಕೊಂಡು ಬಂದರೆ ಕೆಲ ಚಿತ್ರಗಳು ಸದ್ದಿದಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ಬರುತ್ತಿವೆ, ಆ ಸಾಲಿಗೆ ಹೊಸಬರ “ ನಿಷಿದ್ಧ” ಚಿತ್ರ ಸೇರ್ಪಡೆ.

ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ, ಉದ್ಯಮಿ ಸಿ.ಬಿ.ಬೋಪಯ್ಯ ಬಂಡವಾಳ ಹೂಡಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಸುಸಮಯ ದಿನೇಶ್ ಆಕ್ಷನ್ ಕಟ್ ಹೇಳಿದ್ದಾರೆ.

ನಿರ್ದೇಶಕ ಸುಸಮಯ ದಿನೇಶ್ ಮಾತನಾಡಿ ಕೆಲವೊಮ್ಮೆ ಇಂತಹ ಕೆಲಸ ಮಾಡಬಾರದು ಎಂಬ ನಿಷೇದವಿದ್ದರೂ ಹಠ ಮಾಡಿ ಅದನ್ನು ಮಾಡಲು ಹೋದಾಗ ಭಿನ್ನ ಭಿನ್ನ ಅವಘಡಗಳಿಗೆ ಸಿಲುಕುತ್ತೇವೆ. ನಾಲ್ಕು ನಿರುದ್ಯೋಗಿ ಯುವಕರು ಇಂತಹುದೇ ವಿಷಯಗಳ ಹಿಂದೆ ಹೋದಾಗ ಕಷ್ಟಕ್ಕೆ ಸಿಲುಕುತ್ತಾರೆ. ಅದರಿಂದ ಮುಂದೆ ಅಗಬಹುದಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಊಹಿಸಲಾಗದ ದೃಶ್ಯಗಳು ಹಾಗೂ ಅಂದುಕೊಂಡಂತ ಸನ್ನಿವೇಶಗಳು ಬಾರದೆ ನೋಡುಗರ ಕುತೂಹಲ ಕೆರಳಿಸುತ್ತದೆ. ಕಷ್ಟಪಟ್ಟು ಇಷ್ಟದಿಂದ ಹಾರರ್ ಸಿನಿಮಾ ಸಿದ್ದಪಡಿಸಿದ್ದೇವೆ ಎಂದರು

ನಾಯಕಿಯರಾದ ಶ್ವೇತಾಪೂಜಾರಿ ಮತ್ತು ಶೃತಿ ರಮೇಶ್ ಮಾತನಾಡಿ ಚಿತ್ರದಲ್ಲಿ ನಾಯಕ ಅಂಜನ್ ತಮ್ಮಯ್ಯನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ನಟಿಸಿದ್ದೇವೆ. ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಿ ಎಂದು ಹೇಳಿದರು

ನಾಯಕನಿಗೆ ಮಾರ್ಗದರ್ಶನ ನೀಡುವ ಪಾತ್ರದಲ್ಲಿ ಶಿವಕುಮಾರ್ ಆರಾಧ್ಯ. ಇವರೊಂದಿಗೆ ದಿನೇಶ್.ಹೆಚ್.ಸಿ, ಲಾಲುಸಾಬ್, ಮಂಜುನಾಥ್ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಸಂಗೀತ ಮನುರಾಜ್, ಛಾಯಾಗ್ರಹಣ ನಿರಂಜನ್ ಬೋಪಣ್ಣ, ಸಂಕಲನ ಸುನಯ್.ಎಸ್.ಜೈನ್, ಸಾಹಸ ರಾಕೆಟ್ ವಿಕ್ರಂ, ನೃತ್ಯ ರಾಮುಕುಮಾರ್-ಗೌರಿಶಂಕರ್ ಅವರದಾಗಿದೆ. ಮಡಕೇರಿ, ಕುಮಟೂರು ಪುರಾತನ ಏರ್ಮಾಡು ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದೇ ತಿಂಗಳು ಸಿನಿಮಾವನ್ನು ಜನರಿಗೆ ತೋರಿಸಲು ವಿತರಕ ಕುಮಾರ್ ಯೋಜನೆ ಹಾಕಿಕೊಂಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin