ಪಿ.ಸಿ ಶೇಖರ್- ನಕುಲ್ ಗೌಡ ಕಾಂಬಿನೇಷನ್ ನ “ಬ್ಯಾಡ್” ಚಿತ್ರದ ಟೀಸರ್ ಬಿಡುಗಡೆ
ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ, ಪಿ.ಸಿ.ಶೇಖರ್ ನಿರ್ದೇಶನದ ಹಾಗೂ “ಪ್ರೀತಿಯ ರಾಯಭಾರಿ” ಖ್ಯಾತಿಯ ನಕುಲ್ ಗೌಡ ನಾಯಕನಾಗಿ ನಟಿಸಿರುವ “ಬ್ಯಾಡ್” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಬಿಡುಗಡೆ ಮಾಡಿ ಶುಭ ಹಾರೈಸಿದರು
ನಿರ್ದೇಶಕ ಪಿ.ಸಿ ಶೇಖರ್ ಮಾತನಾಡಿ ನಿರ್ದೇಶನದ ಹನ್ನೊಂದನೇ ಚಿತ್ರ ಇದೊಂದು ವಿಭಿನ್ನ ಚಿತ್ರಕಥೆಯುಳ್ಳ ಚಿತ್ರ. ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ಈ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಚಿತ್ರ ಇದೇ ತಿಂಗಳ 28 ರಂದು ತೆರೆಗೆ ಬರಲಿದೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಬಂದಿದೆ. ಯಾವುದೇ ಕೊರತೆಯಿಲ್ಲದೆ ಹಾಗೆ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದರು.

ನಿರ್ಮಾಪಕ ಎಸ್ ಆರ್ ವೆಂಕಟೇಶ್ ಗೌಡ ಮಾತನಾಡಿ ಪಿ.ಸಿ.ಶೇಖರ್ ಅವರ ನಿರ್ದೇಶನದ ಹಿಂದಿನ ಚಿತ್ರಗಳು ಚೆನ್ನಾಗಿತ್ತು. ಅವರ ನಿರ್ದೇಶನದ ನಮ್ಮ “ಬ್ಯಾಡ್ ” ಚಿತ್ರ ಸಹ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದರು,
ನಾಯಕ ನಕುಲ್ ಗೌಡ ಮಾತನಾಡಿ ಹಿಂದಿನ “ಪ್ರೀತಿಯ ರಾಯಭಾರಿ” ಚಿತ್ರದಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ. ಪಿ.ಸಿ.ಶೇಖರ್ ನಿರ್ದೇಶನದಲ್ಲಿ ಈ ಚಿತ್ರ ಚೆನ್ನಾಗಿ ಬಂದಿದೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಆಗದಂತಹ ಚಿತ್ರವಿದು. ನನ್ನ ಪಾತ್ರ ಕೂಡ ವಿಭಿನ್ನವಾಗಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದು ಹೇಳಿದರು

ನಟಿ ಅಪೂರ್ವ ಭಾರದ್ವಾಜ್ ಮಾತನಾಡಿ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರುಪಾತ್ರಗಳಲ್ಲಿ ನಾನು ಒಂದು ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಚಿತ್ರದಲ್ಲಿ ನಟಿಸಿರುವ ಅಶ್ವಿನಿ, ಪದ್ಮ ಶಿವಮೊಗ್ಗ, ಮಂಜುನಾಥ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.

