ನಿರ್ಮಾಪಕರ ಸಂಘದಿಂದ ವಾರ್ತಾ ಇಲಾಖೆ ಆಯುಕ್ತರ ಭೇಟಿ: ಮನವಿ
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಹಂಚಿಕೆಯಾಗಿದ್ದ ಕಟ್ಟಡದ ಅನುದಾನ, ಚಲನಚಿತ್ರಗಳ ಸಹಾಯಧನ, ರಾಜ್ಯ ಪ್ರಶಸ್ತಿ ನೀಡುವುದು ಹಾಗು ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಏಕ ಗವಾಕ್ಷಿ ಯೋಜನೆ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ ರಾಮಮೂರ್ತಿ ನೇತೃತ್ವದ ನಿಯೋಗ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಅನುಚೇತನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ

ನಿಯೋಗದಲ್ಲಿ ಜಂಟಿ ಕಾರ್ಯದರ್ಶಿ ರಮೇಶ್ ಯಾದವ್, ಹಿರಿಯ ನಿರ್ಮಾಪಕರಾದ ಸಾ. ರಾ ಗೋವಿಂದು, ಡಿಕೆ ಪ್ರವೀಣ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದೆ
ನಿರ್ಮಾಪಕ ಸಂಘದ ಬೇಡಿಕೆಗೆ ಪ್ರತಿಕ್ರಿಯಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಅನುಚೇತನ್
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ಕಾಮಗಾರಿಗೆ ಹಂಚಿಕೆಯಾಗಿದ್ದ ರೂ.2.00 ಕೋಟಿ ಅನುದಾನದ ಪೈಕಿ, ಬಾಕಿ ಇರುವ ರೂ.1.50 ಕೋಟಿ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಅಧ್ಯಕ್ಷ ಎಂ.ಜಿ ರಾಮಮೂರ್ತಿ ಮಾಹಿತಿ ನೀಡಿದ್ದಾರೆ
2018-19 ಮತ್ತು 2019-20 ನೇ ಸಾಲಿನಲ್ಲಿ ಕೆಲವು ಚಿತ್ರಗಳಿಗೆ ಸಹಾಯಧನ ಬಾಕಿ ಇದ್ದು 2020-21 ನೇ ಸಾಲಿನಲ್ಲಿ ರೂ.6.00 ಕೋಟಿ ಸಹಾಯಧನ ಬಾಕಿ ಉಳಿದಿದೆ. ಅದನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎನ್ನುವ ಭರವಸೆ ನಿಡಿದ್ಧಾರೆ. ಜೊತೆಗೆ 2021-22 ಮತ್ತು 2022-23 ನೇ ಸಾಲಿನ ಸಹಾಯಧನ ಸಮಿತಿ ರಚನೆ ಮಾಡಿ ಈ ವರ್ಷದಲ್ಲಿಯೇ ಬಿಡುಗಡೆ ಮಾಡಲಾಗುವುದು ಎನ್ನುವ ಅಭಯ ನೀಡಿದ್ದಾರೆ ಎಂದು ಹೇಳಿದ್ದಾರೆ
ರಾಜ್ಯ ಪ್ರಶಸ್ತಿಗಳನ್ನು ಮುಂದಿನ 3 ತಿಂಗಳುಗಳಲ್ಲಿ ನೀಡಲಾಗುವುದು .ಏಕ ಗವಾಕ್ಷಿ ಪದ್ಧತಿಯನ್ನು ಜಾರಿಗೆ ತರಲು ಎಲ್ಲಾ ಸಿದ್ಧತೆಗಳು ಆಗಿದ್ದು ಶೀಘ್ರುದಲ್ಲಿ ಜಾರಿಗೆ ತರಲಾಗುವುದು .ಬುಕ್ ಮೈ ಶೋ ಮಾದರಿ ಆನ್ಲೈನ್ ಟಿಕೆಟ್ ಹಾಗೂ ಓಟಿಟಿ ಕುರಿತ ಅನುಷ್ಠಾನದ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಭರವಸೆ ನೀಡಿದ್ದಾರೆ ಎಂದಿದು ಮಾಹಿತಿ ನೀಡಿದ್ದಾರೆ

