ಆರ್. ಚಂದ್ರು ಕನಸಿನ “ತಾಜ್ ಮಹಲ್” ಚಿತ್ರಕ್ಕೆ 17 ವರ್ಷಗಳ ಸಂಭ್ರಮ”: ಸ್ಟಾರ್ ಮೇಕರ್ ನ ಕಹಾನಿ
ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ ಚಿತ್ರ “ತಾಜ್ ಮಹಲ್” , ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಅವರನ್ನು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲಿ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ಚಿತ್ರ ಇದು., ಈ ಚಿತ್ರ ಬಿಡುಗಡೆಯಾಗಿ 17 ವರ್ಷ ಕಂಡಿದೆ, ಈ ನಡುವೆ ಆರ್, ಚಂದ್ರು ನಡೆದು ಬಂದ ಹಾದಿ ಬಲು ರೋಚಕ.

ರಾಜ್ಯ ಗಡಿ ಪ್ರದೇಶದ ಚಿಕ್ಕಬಳ್ಳಾಪುರ ಜಿಲ್ಲೆಯ ಕೇಶವಾರ ಗ್ರಾಮದ ರೈತ ಕುಟುಂಬದಿಂದ ಬಂದ ಆರ್, ಚಂದ್ರು, ಸಾಮಾನ್ಯ ರೈತಕುಟುಂಬದಲ್ಲಿ ಬಂದ ಛಲಗಾರ. ತಾಜ್ ಮಹಲ್ ಚಿತ್ರದ ಬಳಿಕ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್, ಲವ್ಲಿ ಸ್ಟಾರ್ ಪ್ರೇಮ್, ರಾಯಲ್ ಸ್ಟಾರ್ ಅಜಯ್ ರಾವ್ ಮುಂತಾದ ತಾರೆಗಳ ಜೊತೆಗೆ ಸಿನಿಮಾ ಮಾಡಿ ಇದೀಗ ಜಾಗತಿಕ ಮಟ್ಟದ ಸಿನಿಮಾ ಕೈಗೆತ್ತಿಕೊಂಡಿದ್ದಾರೆ
ನಟರಾದ ಅಜಯ್ ರಾವ್ ಹಾಗೂ ನಟಿ ಪೂಜಾ ಗಾಂಧಿ ಜೋಡಿಯಲ್ಲಿ ತಾಜ್ ಮಹಾಲ್ ನಂತರ ಪ್ರೇಮ್ ಕಹಾನಿ, ಮೈಲಾರಿ, ಕೋ ಕೋ, ಚಾರ್ಮಿನಾರ್, ಬ್ರಹ್ಮ, ಲಕ್ಷ್ಮಣ, ಕನಕ, ಐ ಲವ್ ಯೂ ಹಾಗೂ ಕಬ್ಜ ಚಿತ್ರಗಳನ್ನು ನಿಮ್ಮ ಮುಂದಿಟ್ಟೆ. ಎಲ್ಲಾ ಚಿತ್ರಗಳನ್ನೂ ಪ್ರೋತ್ಸಾಹಿಸಿದ ಫಲವಾಗಿ ಸಾಮಾನ್ಯ ಕುಟುಂಬದ ಚಂದ್ರು ಸ್ಟಾರ್ ಮೇಕರ್ ಆಗಿ ಬೆಳದುಬಂದ ಪರಿ ಬಲು ರೋಚಕ.
ತಾಜ್‍ಮಹಲ್ ಚಿತ್ರಕ್ಕೆ 17 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರ್ ಚಂದ್ರು ಮನಸ್ಸಿಗೆ ಮುಟ್ಟುವ ಪತ್ರ ಬರೆಯುವ ಮೂಲಕ ಪ್ರೇಕ್ಷಕರಿಗೆ ಸಿನಿಮಾ ಪಯಣದಲ್ಲಿ ಬೆಂಬಲಿಸಿದವರನ್ನು ನೆನಪು ಮಾಡಿದ್ದಾರೆ
ಸರಿಯಾಗಿ ಹದಿನೇಳು ವರ್ಷಗಳ ಹಿಂದೆ. ಇದೇ ದಿನದ ಬೆಳಗ್ಗೆ ಮನಸ್ಸಿನಲ್ಲಿ ತಳಮಳ, ಸಂಭ್ರಮ, ಕುತೂಹಲ, ಕಾತುರ, ಬೆರಗಿನ ಕ್ಷಣಗಳು. ಮೊದಲ ಬಾರಿಗೆ ಅಪ್ಪನ ಹೆಗಲೇರಿ ಸಂತೆಗೆ ಬಂದ ಮಗುವಿನಂತಾಗಿದ್ದೆ ಅಂದು ನಾನು, ಅಚ್ಚರಿಯಿಂದ ಕಾಯುತ್ತಿದ್ದೆ. ಗಡಿಯಾದ ಮುಳ್ಳುಗಳು ಬೆಳಗ್ಗಿನ ಗಡಿ ದಾಟಿತ್ತು. ಅಲ್ಲಿ ತೆರೆ ಮೇಲೆ ನನ್ನ ಕನಸಿನ ಮೊದಲ ಶೋ ಪೂರ್ಣಗೊಂಡಿತ್ತು. ನನ್ನ ತಳಮಳ ದೂರವಾಯಿತು. ಸಂಭ್ರಮ ಹೆಚ್ಚಾಯಿತು.
ಆಗಸದಲ್ಲಿ ಕಪ್ಪು ಮೋಡಗಳು ಸರಿದು ತಿಳಿ ನೀಲಿ, ಬಿಳಿ ಮೋಡಗಳು ಆಗಮಿಸಿದಂತೆ ಮೆಚ್ಚುಗೆ, ಪ್ರಶಂಸೆ, ಹೊಗಳಿಕೆಯ ಮಾತುಗಳು ಕಿವಿ ಮೇಲೆ ಬೀಳುತ್ತಿದ್ದರೆ ಏನು ಹೇಳಬೇಕು ಅಂತ ಗೊತ್ತಿಲ್ಲದೆ ಎಲ್ಲವನ್ನು ಬೆರಗಿನಿಂದ ನೋಡುತ್ತಿದ್ದೆ.ಇಷ್ಟೆಲ್ಲಾ ಭಾವನೆ, ಸಂಭ್ರಮ, ಆನಂದಕ್ಕೆ ಇಡಬಹುದಾದ ಒಂದೇ ಒಂದು ಹೆಸರು; “ತಾಜ್ ಮಹಾಲ್”. ಈ ಸಿನಿಮಾ ತೆರೆ ಕಂಡು ಇಂದಿಗೆ ಸರಿಯಾಗಿ 17 ವರ್ಷಗಳಾಗುತ್ತಿವೆ.ಅಂದು ನಾನು ಪ್ರೀತಿಯಿಂದ ಕಟ್ಟಿದ ತಾಜ್ ಮಹಾಲ್‍ಗೆ ನೀವು ತೋರಿದ ಪ್ರೀತಿ, ಅಭಿಮಾನ, ಅಕ್ಕರೆಯೇ ಈ ನಿಮ್ಮ ಚಂದ್ರು, ಈ ನಮ್ಮ ಚಂದನವನದಲ್ಲಿ ಪ್ರಖರವಾಗಿ ಉದಯಿಸಿಲು ಕಾರಣವಾಯಿತು ಎಂದು ಮಾಹಿತಿ ಹಂಚಿಕೊಂಡಿದ್ಧಾಎ

ಮುಖ್ಯವಾಗಿ ಹಳ್ಳಿ ಸೊಗಡಿನ ಕಥೆಯನ್ನು ಮೊದಲ ಚಿತ್ರದಲ್ಲೇ ಹೇಳಿದೆ ಎನ್ನುವ ತೃಪ್ತಿ ಇದೆ. ಯಾಕೆಂದರೆ ಹಳ್ಳಿ ಎಂಬುದು ನನ್ನ-ನಿಮ್ಮ ಬಹುತೇಕರ ಬದುಕಿನ ಮೂಲ. ಅಪ್ಪನ ಪ್ರೀತಿ, ಅಮ್ಮನ ವಾತ್ಸಲ್ಯ, ಮಕ್ಕಳ ಜವಾಬ್ದಾರಿ, ಪ್ರೀತಿ-ಪ್ರೇಮ ಮತ್ತು ಕನಸು ಸಾಧಿಸುವ ಯುವಕ… ಇವಿಷ್ಟು ಪಾತ್ರಧಾರಿಗಳ ಮೂಲಕ ನಾನು ಹೇಳಿದ ತಾಜ್ ಮಹಲ್, ಕಲ್ಪನೆಯಿಂದ ಕೂಡಿದ ವಾಸ್ತವ ಚಿತ್ರವೂ ಹೌದು. ಸಹಜತೆಗೆ ಹತ್ತಿರವಾಗಿದ್ದ ಹಾರ್ಟ್ ಫುಲ್ಲಾಗಿ ಮೂಡಿ ಬಂದಿದ್ದ ಆರ್ಟ್ ಎಂದರೆ “ತಾಜ್ ಮಹಾಲ್”. ಈ ಚಿತ್ರಕ್ಕಾಗಿ ನನ್ನ ಜೊತೆಗೆ ಕೆಲಸ ಮಾಡಿದ ತಂತ್ರಜ್ಞರು, ನಿರ್ಮಾಪಕರು, ಕಲಾವಿದರನ್ನು ನಾನು ಈ ಸಂದರ್ಭದಲ್ಲಿ ಮರೆಯಲು ಸಾಧ್ಯವಿಲ್ಲ.
ಚಂದ್ರು ಕಟ್ಟಿದ ತಾಜ್‍ಮಹಲ್
“ಯಾರು ಈ ಚಂದ್ರು ಏನಿದೆ ಈ ತಾಜ್ ಮಹಲ್‍ನಲ್ಲಿ” ಎನ್ನುತ್ತಲೇ ಮೊದಲಿಗೆ ಹಾಡುಗಳು ಚೆನ್ನಾಗಿವೆ ಎಂದು ಮಚ್ಚಿಕೊಂಡ್ರಿ, ನಂತರ ಸಿನಿಮಾ ನೋಡಿ ಭಾವುಕರಾಗಿ ಸಂಭ್ರಮಿಸಿದ್ರಿ, ಸ್ಯಾಂಡಲ್‍ವುಡ್‍ನಲ್ಲಿ ಆರ್ ಚಂದ್ರು ಕಟ್ಟಿದ ತಾಜ್ ಮಹಲ್ ಎಂದು ಗೌರವದಿಂದ ಕೊಂಡಾಡಿದ್ರಿ. ನಿಮ್ಮ ಈ ಅಪ್ಪುಗೆಯನ್ನು ಚಿರ ಕಾಣಿಕೆ ಎಂದೇ ಭಾವಿಸುತ್ತೇನೆ.
ಒಂದು ಮನೆ ನಿರ್ಮಾಣಕ್ಕೆ ಅಡಿಪಾಯ ತುಂಬಾ ಸ್ಟ್ರಾಂಗ್ ಆಗಿರಬೇಕು. ಈ ಅಡಿಪಾಯದ ಮೇಲೆ ಎಷ್ಟು ದೊಡ್ಡ ಬಂಗಲೆ ಕಟ್ಟಿದರೂ ಪರ್ವಾಗಿಲ್ಲ ಅಂತಾರೆ. ನನ್ನ ವೃತ್ತಿಯ ಮನೆಯ ಅಡಿಪಾಯ ತಾಜ್ ಮಹಾಲ್. ತುಂಬಾ ಗಟ್ಟಿಯಾಗಿ ತಿದ್ದಿ, ರೂಪಿಸಿದ ಅಡಿಪಾಯವಿದು. ಆ ಕಾರಣಕ್ಕೆ ಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದ ನಾನು 17 ವರ್ಷಗಳಲ್ಲಿ 12 ಚಿತ್ರಗಳನ್ನು ಕೊಟ್ಟಿದ್ದೇನೆ. ಈ ಪೈಕಿ 5 ಚಿತ್ರಗಳನ್ನು ನಿರ್ಮಿಸಿದ್ದೇನೆ. ಇದರಲ್ಲಿ 2 ಚಿತ್ರಗಳು ಹೊಸ ನಿರ್ದೇಶಕರಿಂದ ಮಾಡಿಸಿದ್ದೇನೆ. ಇಷ್ಟೆಲ್ಲ ಸಾಧ್ಯವಾಗಿದ್ದು ತಾಜ್ ಮಹಲ್ ಎನ್ನುವ ಅಡಿಪಾಯ ಗಟ್ಟಿಯಾಗಿ ನಿಂತುಕೊಂಡಿದ್ದರಿಂದ. ಹೀಗಾಗಿ ನನಗೆ ತಾಜ್ ಮಹಾಲ್ ಬರೀ ಒಂದು ಸಿನಿಮಾ ಅಲ್ಲ, ನನ್ನೊಳಗಿನ ನಿರ್ದೇಶಕನಿಗೆ ಜನ್ಮ ಕೊಟ್ಟ ಅಮ್ಮ.
ನೀವು ಪೆÇ್ರೀತ್ಸಾಹಿಸಿದ್ದೀರಿ. ಪ್ರತಿ ಚಿತ್ರವೂ ನನಗೊಂದು ಸಂಭ್ರಮ, ಕಲಿಕೆಯ ಕಥೆಯಾಗಿ ನನ್ನನ್ನ ನಿರ್ದೇಶಕನಾಗಿ, ನಿರ್ಮಾಪಕನನ್ನಾಗಿ ಕೈ ಹಿಡಿದು ನಡೆಸುತ್ತಾ ಬಂದಿವೆ. ಕೃಷಿಯನ್ನು ನಂಬಿ ಬದುಕುವ ರೈತ, ಬೆಳೆಗೆ ಬೆಲೆ ಸಿಗಲಿಲ್ಲ ಅಂತಾನೋ, ಮಳೆ ಬರಲಿಲ್ಲ ಅಂತಾನೋ, ಪ್ರವಾಹ ಬಂತು ಅಂತಾನೋ ತನ್ನ ಕೃಷಿ ಕಾಯಕದಿಂದ ಹಿಂದೆ ಸರಿಯಲ್ಲ. ಆ ರೈತ ನಂಬೋದು ಭೂಮಿಯನ್ನು ಮಾತ್ರ. ಅಂಥ ರೈತನ ಮಗನಾಗಿರುವ ನಾನೂ ಕೂಡ ಸಿನಿಮಾ ಕೃಷಿಕ. ನಾನು ನಂಬೋದು ಕಲೆಯನ್ನು ಮಾತ್ರ. ನನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ.
ಫ್ಯಾನ್ ಇಂಡಿಯಾ ಚಿತ್ರಗಳ ಸರದಾರನ “ಫಾದರ್”
ಚಿತ್ರಗಳನ್ನು ನೋಡಿ ಯಶಸ್ಸಿನ ಮೂಲಕ ನೀವು ಕೊಟ್ಟ ಆ ಜವಾಬ್ದಾರಿ ಮೊದಲಿಗಿಂತಲೂ ಈಗ ಹೆಚ್ಚಾಗಿ, ಖಚಿತವಾಗಿ ಮತ್ತು ದೃಢವಾಗಿ ಹೆಜ್ಜೆ ಹಾಕುವಂತೆ ಮಾಡಿದೆ. ಹೆಜ್ಜೆಗಳಲ್ಲಿ ನಿರ್ಮಾಣದಲ್ಲಿ ಐದು ಪ್ಯಾನ್ ಇಂಡಿಯಾ ಚಿತ್ರ ನಿರ್ಮಿಸುವಂತೆ ಮಾಡಿದೆ. ಮಳೆ ನಂತರ ಈಗ ನಿರ್ಮಿಸುತ್ತಿರುವ ಫಾದರ್ ಚಿತ್ರ, ಪಯಣದ ಮತ್ತೊಂದು ಮಹತ್ತರವಾದ ತಿರುವು. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುರುವ ಪ್ರಕಾಶ್ ರೈ, ಡಾರ್ಲಿಂಗ್ ಕೃಷ್ಣ ಅವರ ಜೋಡಿಯ ಪ್ಯಾನ್ ಇಂಡಿಯಾ ಚಿತ್ರವಿದು. ಫಾದರ್ ಸಿನಿಮಾ ನನ್ನ ನಿರೀಕ್ಷೆಗೂ ಮೀರಿ ಬಂದಿದೆ. ಪ್ರತಿಯೊಬ್ಬರ ಮನಸ್ಸು ಮುಟ್ಟುವ ಕಥೆಯೊಂದು ಈ ಚಿತ್ರದಲ್ಲಿದೆ ಎಂಬುದನ್ನು ತುಂಬಾ ಬಲವಾಗಿ ಹೇಳಬಲ್ಲೆ.

ಕೊನೆಗೂ ನಿಮ್ಮ ಮುಂದೆ ನಾನು ಹೇಳಿಕೊಳ್ಳುವುದಿಷ್ಟೇ, ತಾಜ್ ಮಹಾಲ್ ಚಿತ್ರವನ್ನು ಇನ್ನಿಲ್ಲದಂತೆ ಪ್ರೀತಿಸಿ, ಅಭಿಮಾನಿಸಿ ಗೆಲ್ಲಿಸಿದ್ದೀರಿ. ಒಬ್ಬ ಸಿನಿಮಾ ನಿರ್ದೇಶಕನಾಗಿ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಒಳ್ಳೆಯ ಕಥೆಗಳನ್ನು ಒಳಗೊಂಡ ಸಿನಿಮಾಗಳನ್ನು ಕೊಡುತ್ತೇನೆ ಎಂದು ಹೇಳುವ ಮೂಲಕ ತಾಜ್ ಮಹಾಲ್ ಚಿತ್ರದ 17 ವರ್ಷಗಳ ಸಂಭ್ರಮವನ್ನು ನಿಮ್ಮೊಂದಿಗೆ ಆತ್ಮೀಯತೆಯಿಂದ ಹಂಚಿಕೊಂಡಿದ್ಧಾರೆ
ಮುಂದೆ ಗ್ಲೋಬಲ್ ಸಿನಿಮಾ
ಮೊದಲ ನಿರ್ದೇಶನದ ಚಿತ್ರದ ಯಶಸ್ಸು, ಅದರ ಹದಿನೇಳು ವರ್ಷಗಳ ಸಂಭ್ರಮದಲ್ಲಿರುವ ಮುಂದಿನ ಹೆಜ್ಜೆ ಏನು ಅಂತ ಕೇಳಿದರೆ ಗ್ಲೋಬಲ್ ಸಿನಿಮಾ. ಚಿತ್ರದಲ್ಲಿ ಕನ್ನಡದ ಮೂವರು ಸ್ಟಾರ್ ನಟರಾದ ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್ ಅವರನ್ನು ಕಾಂಬಿನೇಶನ್ ಮಾಡಿದೆ. ಖಂಡಿತಾ ಚಿತ್ರ ತೋರಿದ ದಾರಿ, ಕೊಟ್ಟ ಧೈರ್ಯದಿಂದ ಈಗ ಗ್ಲೋಬಲ್ ಚಿತ್ರವನ್ನು ರೂಪಿಸುವಂತೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಈ ಚಿತ್ರದ ಮೇಲೆ ಕೆಲಸ ಮಾಡುತ್ತಿದ್ದೇನೆ. ವರ್ಲ್ಡ್ ಮೂವೀ, ಬಹು ದೊಡ್ಡ ವೆಂಚರ್ ಆಗಲಿದೆ.
ಕನ್ನಡ ಚಿತ್ರರಂಗದಿಂದ ಗ್ಲೋಬಲ್ ಮಾರುಕಟ್ಟೆಗೆ ಬರಲಿರುವ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಇದಾಗಲಿದೆ. ಬಹುಕೋಟಿ ವೆಚ್ಚದ, ಬಹುಭಾಷೆಯ ಕಲಾವಿದರ ಸಂಗಮವಾಗಿರುವ ಚಿತ್ರದ ಕೆಲಸಗಳು ಅಂತಿಮ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಈ ಚಿತ್ರವನ್ನು ಘೋಷಣೆ ಮಾಡಲಿದ್ದೇನೆ. ಇದು ನನ್ನ ಎರಡು ವರ್ಷಗಳ ನಿರಂತರ ಶ್ರಮ, ಮೌನದ ಪ್ರತಿಫಲ. ಮತ್ತು ನನ್ನ ಮುಂದಿನ ಕನಸು ಕೂಡ ಹೌದು.ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ, ಪೆÇ್ರೀತ್ಸಾಹ ಇರಲಿ ಎಂದು ಆರ್, ಚಂದ್ರು ಕೇಳಿಕೊಂಡಿದ್ಧಾರೆ

