"Ra Ra Raghava" song from the movie "Beguru Colony" released

“ಬೇಗೂರು ಕಾಲೋನಿ” ಚಿತ್ರದ “ರಾ ರಾ ರಾಘವ” ಗೀತೆ ಬಿಡುಗಡೆ - CineNewsKannada.com

“ಬೇಗೂರು ಕಾಲೋನಿ” ಚಿತ್ರದ “ರಾ ರಾ ರಾಘವ” ಗೀತೆ ಬಿಡುಗಡೆ

“ಬೇಗೂರು ಕಾಲೋನಿ” ಚಿತ್ರಕ್ಕಾಗಿ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ರಾ ರಾ ರಾಘವ” ಎಂಬ ಹಾಡು ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದೆ.

ಚಿತ್ರದಲ್ಲಿ ನಾಯಕನಾಗಿ ರಾಜೀವ್ ಹನು ಕಾಣಿಸಿಕೊಂಡಿದ್ದಾರೆ. ನಾಯಕನನ್ನು ಪರಿಚಯಿಸುವ ಗೀತೆಗೆ ಅಂತೋನಿ ದಾಸ್ ಹಾಡಿದ್ದಾರೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ.

“ರಾಜೀವ” ಚಿತ್ರದ ನಂತರ ರಾಜೀವ್ ಹನು ಹಾಗೂ ಫ್ಲೈಯಿಂಗ್ ಕಿಂಗ್ ಮಂಜು ಕಾಂಬಿನೇಶನ್‍ನಲ್ಲಿ ಚಿತ್ರ ಮೂಡಿಬಂದಿದೆ. ಎಂ ಶ್ರೀನಿವಾಸ್ ಬಾಬು ನಿರ್ಮಿಸಿದ್ದಾರೆ.

“ಹೋರಾಟಕ್ಕೆ ಹೊಡೆದಾಟಕ್ಕೆ ಬಲಿಯಾಗೋದು ಬಡವರ ಮಕ್ಕಳೇ” ಎಂಬ ಅಡಿಬರಹವಿರುವ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲ ಮೂಡಿಸಿದೆ. ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ.

ರಾಜೀವ್ ಹನು “ಬೇಗೂರು ಕಾಲೋನಿ” ಚಿತ್ರದ ನಾಯಕರಾಗಿ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಕೂಡ ಅಭಿನಯಿಸಿದ್ದಾರೆ. ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೆÇಸಾನಿ ಕೃಷ್ಣ, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಆರು ಹಾಡುಗಳಿರುವ “ಬೇಗೂರು ಕಾಲೋನಿ”ಗೆ ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಹಣ ಹಾಗೂ ಪ್ರಮೋದ್ ತಲ್ವಾರ್ ಸಂಕಲನವಿರುವ ಚಿತ್ರಕ್ಕೆ ತ್ರಿವೇದಿ ನಾಗ್ ಮತ್ತು ಫ್ಲೈಯಿಂಗ್ ಕಿಂಗ್ ಮಂಜು ನಿರ್ಮಾಣ ನಿರ್ವಹಣೆಯಿದೆ. ರವಿ ಫಿಲಂಸ್ ಮೂಲಕ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin