ಮಿಥಿಕಲ್ ಫ್ಯಾಂಟಸಿ ಡ್ರಾಮಾ `ರಾಮರಸ’ ಚಿತ್ರದಲ್ಲಿ “ಸೆನ್ಸೇಷನಲ್ ಸ್ಟಾರ್” ಕೋಮಲ್ ಕುಮಾರ್ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ನಿರ್ಮಾಪಕ ಗುರು ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ

ರಾಮರಸ ಚಿತ್ರದಲ್ಲಿ ನಟ ಕೋಮಲ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೊಂದಿರುವ ಪೋಸ್ಟರ್ ನಲ್ಲಿ ನಿಗೂಢತೆ ಮತ್ತು ನಾಟಕೀಯತೆಯ ಆಕರ್ಷಕ ಮಿಶ್ರಣದಲ್ಲಿ ತೋರಿಸುತ್ತದೆ, ಸಾಮಾನ್ಯ ಹಾಸ್ಯ ಪಾತ್ರಗಳಿಂದ ವಿಭಿನ್ನವಾಗಿ ಪ್ರೇಕ್ಷಕರನ್ನು ಅಚ್ಚರಿಗೊಳಿಸುವ ಅಭಿನಯದ ಸುಳಿವು ನೀಡಿದೆ
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಬಿ.ಎಂ. ಗಿರಿರಾಜ್ ನಿರ್ದೇಶನದ ರಾಮರಸ ಫ್ಯಾಂಟಸಿ, ಜಾನಪದ ಮತ್ತು ಬೇರೂರಿದ ಸಂಪ್ರದಾಯಗಳ ಅಂಶಗಳನ್ನು ಸಂಯೋಜಿಸುವ ವಿಸ್ತಾರವಾದ ಕಥಾಹಂದರ ಹೊಂದಿದೆ. ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ವಿನ್ನರ್ ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್, ಅದಾ ಶರ್ಮಾ ಮತ್ತು ಹೆಬಾ ಪಟೇಲ್ ಸೇರಿದಂತೆ ಬೃಹತ್ ತಾರಾಬಳಗವಿದೆ.

ನಿರ್ಮಾಪಕ ಗುರು ದೇಶಪಾಂಡೆ ಮಾತನಾಡಿ ಈ ಸೇರ್ಪಡೆ ಚಿತ್ರದ ಸಂಕೀರ್ಣ ವಿಶ್ವಕ್ಕೆ ಆಕರ್ಷಕವಾದ ಕ್ರಿಯಾತ್ಮಕತೆಯನ್ನು ತರುತ್ತದೆ ಎಂದು ಹಂಚಿಕೊಂಡಿದ್ದಾರೆ
ರಾಮರಸ ಚಿತ್ರ ಸಾಂಪ್ರದಾಯಿಕ ಜಾನಪದ ಮತ್ತು ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಸ್ಫೂರ್ತಿ ಪಡೆದ, ಬೇರೂರಿದ ಫ್ಯಾಂಟಸಿ ಚಿತ್ರವಾಗಿದ್ದು, ಪರಾಶಕ್ತಿಯ ದೈವಿಕ ಆಟವನ್ನು ಅನ್ವೇಷಿಸುತ್ತದೆ.








