"Ravanasuram" song from the movie "Daiva" released

“ದೈವ” ಚಿತ್ರದ “ರಾವಣಾಸುರಂ” ಹಾಡು ಬಿಡುಗಡೆ - CineNewsKannada.com

“ದೈವ” ಚಿತ್ರದ “ರಾವಣಾಸುರಂ” ಹಾಡು ಬಿಡುಗಡೆ

“ದೈವ” ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ. ಎಂ.ಜೆ ಜಯರಾಜ್ ನಟಿಸಿ, ನಿರ್ದೇಶಿಸಿದ್ದು ಜಯಮ್ಮ ಪದ್ಮರಾಜ್ ಬಂಡವಾಳ ಹಾಕಿದ್ದಾರೆ. ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ನಿರ್ಮಾಣದಲ್ಲಿ ಕೈಜೋಡಿದ್ದಾರೆ.

ಎಂ. ಜೆ ಜಯರಾಜ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ “ದೈವ” ಚಿತ್ರದ “ರಾವಣಾಸುರಂ” ಹಾಡು ಕಲ್ಪವೃಕ್ಷ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಪಕ್ಕಾ ದೇಸಿ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುವ ನಾಯಕನ ಪರಿಚಯಿಸುವ ಹಾಡನ್ನು ಅನಿರುದ್ಧ್ ಶಾಸ್ತ್ರಿ ಮತ್ತು ವಿಜೇತ ಮಂಜಯ್ಯ ಹಾಡಿದ್ದಾರೆ,

ಮೂರ್ತಿ ಟಿ.ಎಂ ಸಾಹಿತ್ಯಕ್ಕೆ ವಿಜೇತ್ ಮಂಜಯ್ಯ ಸಂಗೀತವಿದೆ. ಪಕ್ಕಾ ಮಾಸ್ ಆಗಿ ಮೂಡಿಬಂದಿರುವ ಹಾಡಿಗೆ ವಿನಯ್ ನೃತ್ಯ ನಿರ್ದೇಶನ ಮಾಡಿದ್ದಾರೆ, ಕಮರ್ಷಿಯಲ್ ಸಿನಿಮಾಗೆ ಬೇಕಿರುವ ಎಲ್ಲಾ ಅಂಶಗಳನ್ನು ಈಹಾಡು ಒಳಗೊಂಡಿದೆ, ಈಗಾಗಲೇ ಚಿತ್ರೀಕರಣ ಮುಗಿಸಿರುವ “ದೈವ” ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ.

ಸಿದ್ಧಾರ್ಥ್ ಹೆಚ್.ಆರ್ ಕ್ಯಾಮರಾ ಕೈಚಳಕವಿದೆ. ಸುರಭಿ, ನೀತು ರಾಯ್, ಬಾಲರಾಜ್ವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin