"Rukmini Radhakrishna", a love triangle story of young actors and actresses, begins

ಯುವ ಜೋಡಿಗಳ ತ್ರಿಕೋನ ಪ್ರೇಮಕಥೆಯ “ರುಕ್ಮಿಣಿ ರಾಧಾಕೃಷ್ಣ” ಆರಂಭ - CineNewsKannada.com

ಯುವ ಜೋಡಿಗಳ ತ್ರಿಕೋನ ಪ್ರೇಮಕಥೆಯ “ರುಕ್ಮಿಣಿ ರಾಧಾಕೃಷ್ಣ” ಆರಂಭ

ಕಿರುತೆರೆಯಿಂದ ಹಿರಿತೆರೆಗೆ ಬಂದಿರುವ ನಟಿ ಮೋಕ್ಷಿತಾ ಪೈ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದು ಹೊಸ ಸಿನಿಮಾ “ ರುಕ್ಮಿಣಿ ರಾಧಾಕೃಷ್ಣ” ಸೆಟ್ಟೇರಿದೆ.

ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸಮಾಡಿ ಅನುಭವ ಹೊಂದಿರುವ ಪ್ರಾಣ್ ಸುವರ್ಣ ಪ್ರಥಮ ನಿರ್ದೇಶನದ ಚಿತ್ರ ರುಕ್ಮಿಣಿ ರಾಧಾಕೃಷ್ಣ ಚಿತ್ರದ ಮೊದಲ ದೃಶ್ಯಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಆರ್. ನರಸಿಂಹಲು ಕ್ಲಾಪ್ ಮಾಡಿದರೆ, ನಿರ್ಮಾಪಕ ಆರ್. ಹನುಮಂತರಾಜು ಅಕ್ಯಾಮೆರಾ ಸ್ವಿಚ್ ಆನ್ ಮಾಡಿದರು.

ಬಿಡುಗಡೆಗೆ ಸಿದ್ದವಾಗಿರೋ ಮೆಜೆಸ್ಟಿಕ್-2. ಚಿತ್ರದ ಹೀರೋ ಭರತ್ ಕುಮಾರ್ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಮೋಕ್ಷಿತ ಪೈ ಹಾಗೂ ರಿಯಾ ಸಚ್‍ದೇವ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ರುಕ್ಮಿಣಿ ರಾಧಾಕೃಷ್ಣ’ ಇದೊಂದು ತ್ರಿಕೋನ ಪ್ರೇಮಕತೆಯಾಧಾರಿತ ಚಿತ್ರವಾಗಿದೆ

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಪ್ರಾಣ್ ಸುವರ್ಣ, ಶ್ರೀಕೃಷ್ಣ, ರಾಧಾ, ರುಕ್ಮಿಣಿಯ ಪ್ರೇಮ ಕಥೆ ಇಟ್ಟುಕೊಂಡು ಈಗಿನ ಕಾಲದ ಜಂಜಿ ಟ್ರಯಾಂಗಲ್ ಲವ್ ಸ್ಟೋರಿಯನ್ನು ್ಮಚಿತ್ರದ ನಾಯಕ, ನಾಯಕಿಯರ ಮೂಲಕ ಹೇಳಲಾಗುತ್ತದೆ. 60 ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಹಾಗೂಎರಡನೆ ಹಂತದಲ್ಲಿ ಕುಂಭಕೋಣಂನಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದಿದ್ಧಾರೆ

ರುಕ್ಮಿಣಿ ರಾಧಾಕೃಷ್ಣ ಚಿತ್ರವನ್ನು ಪೆನ್ ಡ್ರೈವ್ ಚಿತ್ರದ ನಿರ್ಮಾಪಕ ಎನ್. ಹನುಮಂತರಾಜು ಹಾಗೂ ಎನ್ .ಎಚ್. ಉಮೇಶ್ ಚಂದ್ ಸೇರಿ ನಿರ್ಮಿಸುತ್ತಿದ್ದಾರೆ.ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಸುನಾದ ಗೌತಮ್ ಅವರ ಸಂಗೀತ ನಿರ್ದೇಶನವಿದೆ.

ಪ್ರಾಣ್ ಸುವರ್ಣ ಚಿತ್ರದ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಸುನೀಲ್ ನರಸಿಂಹಮೂರ್ತಿ ಛಾಯಗ್ರಹಣ, ಎಂ. ಲಕ್ಷ್ಮಣರಾವ್ ಸಂಕಲನ, ಮಹೇಶ್ ರಾಮ್ ಸಹ ನಿರ್ದೇಶನ ರುಕ್ಮಿಣಿ ರಾಧಾಕೃಷ್ಣ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin