'Sanju Weds Geeta-2' to release in a new format on June 6

ಹೊಸ ರೂಪದಲ್ಲಿ ‘ಸಂಜು ವೆಡ್ಸ್ ಗೀತಾ -2’ ಜೂನ್ 6 ರಂದು ಬಿಡುಗಡೆ - CineNewsKannada.com

ಹೊಸ ರೂಪದಲ್ಲಿ ‘ಸಂಜು ವೆಡ್ಸ್ ಗೀತಾ -2’ ಜೂನ್ 6 ರಂದು ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ -2 ಹಲವಾರು ಅಡೆತಡೆಗಳನ್ನು ಎದುರಿಸಿ, ಜನವರಿ 17ರಂದು ತರಾತುರಿಯಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರು ಸಂಜು ವೆಡ್ಸ್ ಗೀತಾ-2 ಚಿತ್ರದ ಕಂಟೆಂಟ್, ಸಾಂಗ್ಸ್, ಅದ್ದೂರಿ ಮೇಕಿಂಗ್ ಎಲ್ಲವನ್ನೂ ತುಂಬಾ ಇಷ್ಟ ಪಟ್ಟಿದ್ದರು.

ಚಿತ್ರದ ನಿರೂಪಣೆ, ಕ್ಯಾಮೆರಾ ವರ್ಕ್ ಎಲ್ಲಾ ಅದ್ಭುತವಾಗಿದ್ದರೂ, ಎಲ್ಲೋ ಒಂದು ಕಡೆ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂಬ ಅಭಿಪ್ರಾಯ ಕೆಲವರಿಂದ ಕೇಳಿಬಂದಿತ್ತು, ಬಿಡುಗಡೆ ಸಂದರ್ಭದಲ್ಲಿ ಒಂದಷ್ಟು ಆತಂಕ ಸೃಷ್ಟಿಯಾಗಿದ್ದ ಕಾರಣ ಎಲ್ಲವನ್ನೂ ಗಮನಿಸಲು ಚಿತ್ರತಂಡಕ್ಕೂ ಸಾಧ್ಯವಾಗಿದ್ದಿಲ್ಲ, ಹಾಗಾಗಿ ಮೂರೇ ದಿನದಲ್ಲಿ ಚಿತ್ರದ ಪ್ರದರ್ಶನವನ್ನು ಎಲ್ಲಾ ಕೇಂದ್ರಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಹೊಸದಾಗಿ 21 ನಿಮಿಷಗಳ ಹೃದಯ ಸ್ಪರ್ಶಿ ಚಿತ್ರಣವನ್ನು ಚಿತ್ರಕ್ಕೆ ಮರು ಜೋಡಿಸಲಾಗಿದ್ದು, ಇದೀಗ ಜೂನ್ 6ರಂದು ಹೊಸ ವರ್ಷನ್ ರಿಲೀಸ್ ಮಾಡುವ ಸಿದ್ದತೆ ನಡೆದಿದೆ

ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ ಸಂಜು ವೆಡ್ಸ್ ಗೀತಾ -2 ಚಿತ್ರದ ನಿರ್ಮಾಪಕರು ಜೂನ್ 6 ರಂದು ರಿಲೀಸ್ ಮಾಡಬೇಕು ಎಂದುಕೊಂಡಿದ್ದಾರೆ. ಸಂಪೂರ್ಣ ಸಹಕಾರ ಕೊಡುತ್ತೇವೆ. ಈಗ. ಚಿತ್ರಕ್ಕೆ ಹೆಚ್ಚಿನ ಸೀನ್ ಸೇರಿಸಿದ್ದು, ಮೊದಲಿಗಿಂತ ಉತ್ತಮವಾಗಿದೆ ಎಂದರು.

ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ ರಿಲೀಸ್ ಗೆ 3 ದಿನ ಇರುವಾಗ ತಡೆಯಾಜ್ಞೆ ತಂದಿದ್ದರಿಂದ ನಮಗೆ ತುಂಬಾ ತೊಂದರೆ ಆಯ್ತು. ಎಲ್ಲಾ ಥೇಟರ್ ಸೆಟಪ್ ಆಗಿದ್ದರಿಂದ ಸ್ಟೇ ವೆಕೇಟ್ ಮಾಡಿಸಿ ಸಿನಿಮಾ ಬಿಡುಗಡೆ ಮಾಡಲೇಬೇಕಿತ್ತು. ಆನಂತರ ಮೂರು ದಿನದಲ್ಲಿ ಸಿನಿಮಾ ಸ್ಟಾಪ್ ಮಾಡಿಸಿದೆವು. ಈಗ 20 ನಿಮಿಷಗಳ ಪ್ರಮುಖವಾದ ಹಾರ್ಟ್ ಟಚಿಂಗ್ ಸೀನ್ ಸೇರಿಸಿ ಜೂನ್ 6ಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಶಿವಣ್ಣ, ಸುದೀಪ್, ಉಪೇಂದ್ರ, ಚೇಂಬರ್ ಹೀಗೆ ಎಲ್ಲರೂ ನಮಗೆ ಸಪೆÇೀರ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

ನಿರ್ದೇಶಕ ನಾಗಶೇಖರ್ ಮಾತನಾಡಿ ನಾನೇ ನಿರ್ಮಾಪಕ ಎಂದು ತಡೆಯಾಜ್ಞೆ ತಂದಿದ್ದರು. ನಿರ್ಮಾಪಕರಿಗೆ ಸಂಬಂಧವಿಲ್ಲದ ವಿಷಯಕ್ಕೆ,ತೊಂದರೆ ಅನುಭವಿಸಬೇಕಾಯ್ತು. 21 ನಿಮಿಷದ ಸಿಜಿ ಪ್ಲಾನ್ ಇತ್ತು. ಅದೇ ಚಿತ್ರದ ಹೃದಯಸ್ಪರ್ಶಿ ಭಾಗ. ಅದೇ ಇಲ್ಲದೆ ಸಿನಿಮಾ ರಿಲೀಸಾಗಿತ್ತು. ಈಗ 21 ನಿಮಿಷ ಸೇರಿಸಿ ಎಸ್.ಮಹೇಂದರ್ ಅವರಿಗೆ ತೋರಿಸಿದೆವು. ಅವರು ಬಹಳ ಅದ್ಭುತವಾಗಿದೆ ಎಂದು ಮೆಚ್ಚಿಕೊಂಡರು.

ಜಯಣ್ಣ ಫಿಲಂಸ್ ರಿಲೀಸ್ ಮಾಡ್ತಿದೆ. ಶಿಜೂನ್ 2 ರಂದು ಪ್ರಿರಿಲೀಸ್ ಇವೆಂಟ್ ಮಾಡ್ತಿದ್ದೇವೆ. ಶಿವಣ್ಣ, ರಾಕ್ ಲೈನ್ ವೆಂಕಟೇಶ್, ಕೆಪಿ.ಶ್ರೀಕಾಂತ್ ಸೇರಿದಂತೆ ಚಿತ್ರರಂಗದ ಅನೇಕರು ಸಪೆÇೀರ್ಟ್ ಮಾಡ್ತಿದ್ದಾರೆ. ಹಿಂದೆ ಕೆಲ ಸಿನಿಮಾಗಳು ರಿರಿಲೀಸಾಗಿ ಸೂಪರ್ ಹಿಟ್ ಆಗಿವೆ. ಅದೇ ಭರವಸೆಯಿಂದ ಜನರ ಮುಂದೆ ಬರ್ತಿದ್ದೇವೆ. ಆಗ ಸಿನಿಮಾ 2ಗಂಟೆ 02 ನಿಮಿಷ ಇತ್ತು. ಈಗ 2 ಗಂಟೆ 23 ನಿಮಿಷ ಆಗಿದೆ ಎಂದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin