“ಫಾರೆವರ್”ಗೆ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

ಹೆಸರಾಂತ ನಿರ್ದೇಶಕ ರವಿವರ್ಮ ಸಾಹಸ ಸಂಯೋಜನೆಯಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶ ಹಾಗೂ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಹಾಡೊಂದರ ಚಿತ್ರೀಕರಣ ಸೇರಿದಂತೆ ಮಾತಿನ ಭಾಗದ ಚಿತ್ರೀಕರಣ ಸಹ ಎರಡನೇ ಹಂತದಲ್ಲಿ ನಡೆದಿದೆ.

ನಾಯಕ ಲೂಸ್ ಮಾದ ಯೋಗಿ, ನಾಯಕಿ ಆಕಾಂಕ್ಷ ರಾವ್, ಪ್ರಮೋದ್ ಶೆಟ್ಟಿ, ವಿಜಯ್ ಚೆಂಡೂರ್, ಗೌರವ್ ಶೆಟ್ಟಿ, ಅಶ್ವಿನ್ ಪಲ್ಲಕ್ಕಿ, ಮಾಲಾ, ಕಡ್ಡಿಪುಡಿ ಚಂದ್ರು, ಅನಂತ್ ಮುಂತಾದವರು ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯದಲ್ಲೇ ಮೂರನೇ ಹಂತದ ಚಿತ್ರೀಕರಣ ಸಹ ಆರಂಭವಾಗಲಿದೆ.

ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಸೇರಿದಂತೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ರಘು ನಿಡುವಳ್ಳಿ ಅವರದು. ಪ್ರದ್ಯೂತನ್ ಸಂಗೀತ ನಿರ್ದೇಶನ ಹಾಗೂ ಸಂಕೇತ್ ಛಾಯಾಗ್ರಹಣ “ಫಾರೆವರ್” ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಯೋಗಿ ಬೈಕ್ ಲವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Related Posts

ಹಾರರ್ – ಥ್ರಿಲ್ಲರ್ ‘418’ ಚಿತ್ರ ಅಕ್ಟೋಬರ್ 23 ರಂದು ತೆರೆಗೆ ; ನಿರ್ದೇಶಕ ಪ್ರಶಾಂತ್ ನೀಲ್ ಬೆಂಬಲ

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿರುವ ” 418″ ಚಿತ್ರ ಹಾರರ್- ಥ್ರಿಲ್ಲರ್ ಕಥೆ ಒಳಗೊಂಡಿದ್ದು ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಅಕ್ಟೋಬರ್ 23 ರಂದು ತೆರೆಗೆ ಬರಲು ಸಜ್ಜಾಗಿದೆ. ‘ಉಗ್ರಂ’ ಚಿತ್ರದಿಂದಲೂ ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡಿರುವ ಕೀರ್ತನ್ ನಡಗೌಡ…

ಎ ಐ ಸಿನಿಮಾ ನಿರ್ಮಾಣಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಸಹಯೋಗ

ಮುಂದಿನ ಪೀಳಿಗೆಯ ಚಿತ್ರಣ ಮತ್ತು ಎಐ ತಂತ್ರಜ್ಞಾನ. ಎಂಐಪಿಕಾಮ್ ಕೇನ್ಸ್ 12 ಹಾಗು ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಹೊಂಬಾಳೆ ಗ್ರೂಪ್‍ನಿಂದ ಬೆಂಬಲಿತ ಅಸ್ಟ್ರಾ ಸ್ಟುಡಿಯೋಸ್ ಮತ್ತು ವರ್ಸೆ ಇನ್ನೋವೇಶನ್ ಅಸ್ಟ್ರಾ-ಸ್ಪಾರ್ಕ್ ಅಲೈಯನ್ಸ್ ರಚಿಸಲು ಮುಂದಾಗಿವೆ. ಈ ಘೋಷಣೆಯು ಅಸ್ಟ್ರಾ ಸ್ಟುಡಿಯೋಸ್‍ತಂತ್ರಜ್ಞಾನ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581