ಸಸ್ಪೆನ್ಸ್ ,ಥ್ರಿಲ್ಲರ್ ಕಥೆ ಜೊತೆಗೆ ಅಪ್ಪ- ಮಗಳ ಬಾಂಧವ್ಯದ ಹಿನ್ನೆಲೆ ಹೊಂದಿರುವ ಒರಟ ಶ್ರೀ ನಿರ್ದೇಶನದಲ್ಲಿ ಮೂಡಿ ಬಂದಿರುವ “ಶಬರಿ” ಚಿತ್ರ ಅಕ್ಟೋಬರ್ 23 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಅನ್ನು ನಿರ್ದೇಶಕ ರವಿ ಶ್ರೀವತ್ಸ ಮತ್ತು ನಟ ಒರಟ ಪ್ರಶಾಂತ್ ಬಿಡುಗಡೆ ಮಾಡಿ ಶುಭ ಹಾರೈಸಿದರು.ಈ ವೇಳೆ ಹಿರಿಯ ನಟ ಕೋಟೆ ಪ್ರಭಾಕರ್ ಚಿತ್ರರಂಗದ ಹಲವರು ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು
ಸಮರ್ಥ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಕಂಡುಕೊಳ್ಳಲು ಮುಂದಾಗಿದ್ದಾರೆ. ಕೃತಿಕಾಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದು ಬಾಲ ಕಲಾವಿದೆಯಾಗಿ ಧನ್ವಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರಾದ ಬದ್ರಿ , ರಮೇಶ್, ವಿಷ್ಣುಕಾಂತ್ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ನಿರ್ದೇಶಕ ಒರಟ ಶ್ರೀ ಮಾತನಾಡಿ ಚಿತ್ರದ ‘ ತಂದಾನಿ ತಾನೋ..’ ಹಾಡು ಲಹರಿ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಗೊಂಡು ಎಲ್ಲೆಡೆ ಬಾರಿ ವೈರಲ್ ಆಗಿದ್ದು , ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಟ್ರೈಲರ್ ಅನ್ನು ಗುರುಗಳು , ಸ್ನೇಹಿತರು ಬಂದು ಬಿಡುಗಡೆಗೊಳಿಸಿದ್ದು ಬಹಳ ಖುಷಿ ತಂದಿದೆ. ಚಿತ್ರದಲ್ಲಿ ತಂದೆ ಮಗಳ ಬಾಂಧವ್ಯ ಜೊತೆಗೆ ಜೀಪ್ ಕೂಡ ಒಂದು ಪ್ರಮುಖ ಪಾತ್ರವಾಗಿ ಕಾಣಿಸುತ್ತದೆ. ಅಂದುಕೊಂಡಂತಹ ಸಮಯದಲ್ಲೇ ಬಜೆಟ್ ಪ್ಲಾನ್ ಮಾಡಿಕೊಂಡು ಚಿತ್ರವನ್ನು ಮುಗಿಸಿದ್ದೇನೆ.ಸಸ್ಪೆನ್ಸ್ , ಥ್ರಿಲ್ಲರ್, ಮಿಸ್ಟ್ರಿ ಸೇರಿದಂತೆ ಅನೇಕ ಅಂಶಗಳಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಗಿದೆ. ನಮ್ಮ ಚಿತ್ರದ ನಾಯಕ ನಟ ಸಮರ್ಥ್ ಬಹಳಷ್ಟು ಶ್ರಮ ಹಾಕಿದ್ದಾರೆ. ಅದೇ ರೀತಿ ನಟಿ ಕೃತಿಕಾ ಗೌಡ ಉತ್ತಮವಾಗಿ ಅಭಿನಯಿಸಿದ್ದು , ಪ್ರಮುಖವಾಗಿ ರಾಣಿ ಧಾರವಾಹಿಯ ಖ್ಯಾತಿ ಬಾಲ ನಟಿ ಧನ್ವಿ ಸೊಗಸಾಗಿ ಅಭಿನಯಿಸಿದ್ದಾಳೆ ಎಂದರು
ನಿರ್ಮಾಪಕ ರಮೇಶ್ ಮಾತನಾಡಿ ಟ್ರೈಲರ್ ಚೆನ್ನಾಗಿ ಮೂಡಿಬಂದಿದೆ. ಮೂರು ಹಾಡು ಚೆನ್ನಾಗಿ ಬಂದಿವೆ. ಅದರಲ್ಲೂ ತಂದಾನಿ ತಾನೋ ಹಾಡು ಜನಮನಗೆದ್ದಿದೆ. ಎಲ್ಲ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ ಪುತ್ರ ಹಾಗು ನಾಯಕ ಸಮರ್ಥಗೆ ಎಲ್ಲರ ಸಹಕಾರವಿರಲಿ ಎಂದರು

ಮತ್ತೊಬ್ಬ ನಿರ್ಮಾಪಕ ಸುಧಾಕರ್ ರೆಡ್ಡಿ ಮಾತನಾಡಿ ನನ್ನನ್ನು ಚಿತ್ರರಂಗದಲ್ಲಿ ಬದ್ರಿ ಎಂದು ಗುರುತಿಸುತ್ತಾರೆ. ನಿರ್ದೇಶಕ ಶ್ರೀ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡಲಾಗಿದೆ ಎಲ್ಲರ ಸಹಕಾರವಿರಲಿ ಎಂದರೆ ವಿಷ್ಟುಕಾಂತ್ ಮಾತನಾಡಿ, ಸಿನಿಮಾ ಚೆನ್ನಾಗಿ ಬಂದಿದೆ ಸಹಕಾರವಿಲಿ ಎಂದು ಕೇಳಿಕೊಂಡರು
ನಾಯಕ ಸಮರ್ಥ್ ಮಾತನಾಡಿ ಜೀವನ ಒಮ್ಮೆ ಹಿಂತಿರುಗಿದರೆ ಶಬರಿ ಚಿತ್ರ ನೆನಪಾಗುತ್ತದೆ. ನಾಯಕನಾಗುವ ಕನಸು ನನಸಾಗಿದೆ. ಚಿತ್ರ ನೋಡಿ ಬೆಂಬಲಿಸಿ ಎಂದರು
ನಾಯಕಿ ಕೃತಿಕಾ ಗೌಡ ಮಾತನಾಡಿ ಮೊದಲ ಸಿನಿಮಾ, ಕಿರುಚಿತ್ರದಿಂದ ಸಿನಿಮಾಗೆ ಬರುವುದು ಕಷ್ಟ. ಈ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರ ಚೆನ್ನಾಗಿ ಬಂದಿದೆ ಎಂದು ಹೇಳಿದರು

ಬಾಲ ನಟಿ ಧನ್ವಿ ಮಾತನಾಡಿ ಚಿತ್ರದಲ್ಲಿ ಶಬರಿ ಪಾತ್ರ ಮಾಡಿದ್ದೇವೆ ಎಂದರು.ನಾಯಕಿ ಭೂಮಿಕಾ ಚಿತ್ರಕ್ಕೆ ಶುಭಹಾರೈಸಿದರು.
ಚಿತ್ರದಲ್ಲಿ ಎಂ.ಕೆ. ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.







