1980ರ ಕಾಲಘಟ್ಟದ ಬೊಮ್ ಭಾಯ್ ಚಿತ್ರದಲ್ಲಿ ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು

ಮಹೂರ್ತದ ನಂತರ ಮಾತಿಗಿಳಿದ ನಟ ಶರಣ್,”ಬೊಮ್ ಭಾಯ್” ಚಿತ್ರದ ಪೋಸ್ಟರ್ ತುಂಬಾ ಚೆನ್ನಾಗಿದೆ. ಹಿಂದಿನ ಯಾವ ಚಿತ್ರಗಳಲ್ಲಿ ಅಭಿನಯಿಸಿರದ ಪಾತ್ರ ಇದಾಗಿದೆ. ಶಶಿಧರ್ ಜೊತೆಗೆ ಬಹಳ ದಿನಗಳಿಂದ ಚರ್ಚಿಸುತ್ತಿದ್ದೆ. ಒಂದೊಳ್ಳೆ ಕಥೆ ಮಾಡಿದ್ದಾರೆ. ಚಿತ್ರದಲ್ಲಿ ನಗುವೇ ಪ್ರಧಾನ. ಈಗ 1980s ಟ್ರೆಂಡ್ ಜೋರಾಗಿದೆ. ಆದರೆ, ಈ ಟ್ರೆಂಡ್ ಶುರುವಾಗುವುದಕ್ಕೂ ಮುನ್ನ ಈ ಚಿತ್ರದ ಕಥೆ ಸಿದ್ದಾವಾಗಿದೆ. ನಿರ್ಮಾಪಕರಿಗೆ ಇದು ಮೊದಲ ಚಿತ್ರ. ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಅವರ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ ಎಂದು ಹೇಳಿದರು

ನಟ ದಿಗಂತ್ ಮಾತನಾಡಿ ಬೊಮ್ ಭಾಯ್” ರೆಟ್ರೊ ಶೈಲಿಯ ಕಥೆ. ಪಾತ್ರ ಕೂಡ ತುಂಬಾ ಚೆನ್ನಾಗಿದೆ. ನಾನು ಕೂಡ ಈವರೆಗೂ ಈ ತರಹದ ಪಾತ್ರ ಮಾಡಿಲ್ಲ. ಶಶಿಧರ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಚಿತ್ರ ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ ಎಂದರು

ನಟಿ ನಿಶ್ವಿಕಾ ನಾಯ್ಡು ಮಾಹಿತಿ ನೀಡಿ ಬೊಮ್ ಭಾಯಿ ಉತ್ತಮ ಮನೋರಂಜನೆಯ ಕಥೆ ಇದೆ. “ಗುರು ಶಿಷ್ಯರು” ಚಿತ್ರದ ನಂತರ ಶರಣ್ ಜೊತೆಗೆ ಅಭಿನಯಿಸುತ್ತಿದ್ದೇನೆ. ಜೊತೆಗೆ ದಿಗಂತ್ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ ಎಂದು ಹೇಳಿದರು.

ನಿರ್ದೇಶಕ ಶಶಿಧರ್ ಮಾತನಾಡಿ ನಟರಾದ ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಮೂರು ಮುಖ್ಯ ಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಕನ್ನಡದ ಜನಪ್ರಿಯ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.1980 ರ ರೆಟ್ರೊ ಶೈಲಿಯ ಕಥಾಹಂದರ ಹೊಂದಿದೆ. ಸಂಪೂರ್ಣ ಮನರಂಜನೆಯಿಂದ ಕೂಡಿರುವ ಈ ಕಥೆನ ಸಿನಿಮಾ ಮಾಡೋ ಕನಸು ನನ್ನದಾಗಿತ್ತು. ಈ ನನ್ನ ಕನಸಿಗೆ ಆರ್ಥಿಕವಾಗಿ ಬೆನ್ನೆಲುಬಾಗಿ ಹಿಂದೆ ನಿಂತಿದೆ. ಸಂಪೂರ್ಣ ಕಾಮಿಡಿ ಜಾನರ್ ನ ಚಿತ್ರ ಇದಾಗಿದೆ. ದೀಪಕ್ ಚಿತ್ರದ ಛಾಯಾಗ್ರಹಕರು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.

ನಿರ್ಮಾಪಕಿ ವಿಂಧ್ಯಾ ಬಾಲಾಜಿ ಪೋತರಾಜ್ ಮಾತನಾಡಿ ಗಣೇಶನ ಹಬ್ಬದ ದಿನ ನಮ್ಮ ಚಿತ್ರ ಆರಂಭವಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು

Related Posts

‘ನೆನಪಾದಳು ಶಾಕುಂತಲೆ’ ಚಿತ್ರೀಕರಣ ಮುಕ್ತಾಯ

ವಿಸ್ಮಯ ಕೆ. ನಿರ್ಮಾಣದ “’ನೆನಪಾದಳು ಶಾಕುಂತಲೆ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದ ಮುಂದೆ ಕುಂಬಳಕಾಯಿ ಒಡೆದಿದೆ. ವಿನಯ್ ಚಂದ್ರಹಾಸ- ವಿರಾಜ್ ಕೋಲಾಟ್ಲು ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ ಹಾಗೂ ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ. ಪುರಾಣದ…

ತೆರೆಗೆ ಬರಲು ಸಜ್ಜಾದ ’18 ಎಕರೆ ಸಿನಿಮಾ ಲಕ್ಕಪ್ಪ’

ನಿರ್ದೇಶಕ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ಬಿಡುಗಡೆಗೆ ಸಿದ್ದವಾಗಿರುವ ‘ಮಾರ್ಲಾಮಿ’, ಚಿತ್ರೀಕರಣ ಹಂತದಲ್ಲಿರುವ ‘ರುದ್ರ ಕಾಲಭೈರವ’, ‘ಲೋ ಬಜೆಟ್ ನೋ ಬಜೆಟ್’, ‘ಪವನಸುತ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ತಮಿಳಲ್ಲಿ ‘ಮರ್ಮಮುಟುಚಿ’, ‘ಕಾದಲ್ ವಾರ್’, ‘ಗಾಯತ್ರಿ ನಿಲಮ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581