Simhanna Sharath Lohitashwa as a different character in the movie “Veshagalu”

“ವೇಷಗಳು” ಚಿತ್ರದಲ್ಲಿ ವಿಭಿನ್ನ ವೇಷಧಾರಿಯಾಗಿ ಸಿಂಹಣ್ಣ ಶರತ್ ಲೋಹಿತಾಶ್ವ - CineNewsKannada.com

“ವೇಷಗಳು” ಚಿತ್ರದಲ್ಲಿ ವಿಭಿನ್ನ ವೇಷಧಾರಿಯಾಗಿ ಸಿಂಹಣ್ಣ ಶರತ್ ಲೋಹಿತಾಶ್ವ

ಗ್ರೀನ್ ಟ್ರೀ ಸ್ಟುಡಿಯೋಸ್ ನಿರ್ಮಿಸುತ್ತಿರುವ, ‘ವೇಷಗಳು’ ಸಿನಿಮಾ ತಂ ಸಿನಿಮಾದ ಎರಡನೆಯ ಮುಖ್ಯ ಪಾತ್ರ ಪರಿಚಯಿಸಿದ್ದಾರೆ. ಸಿಂಹಣ್ಣ ಎನ್ನುವ ಪಾತ್ರಧಾರಿಯಾಗಿ ಹಿರಿಯ ಕಲಾವಿದ ಶರತ್ ಲೋಹಿತಾಶ್ವ ನಟಿಸುತ್ತಿದ್ದು ಪೋಸ್ಟರ್ ನಲ್ಲಿಯೇ ಮೋಡಿ ಮಾಡಿದ್ದಾರೆ

ಮೂರು ವಿಭಿನ್ನ ಲುಕ್ ಗಳಲ್ಲಿ ಕಾಣಿಸಿಕೊಂಡಿರುವ ಶರತ್ ಲೋಹಿತಾಶ್ವ ಪಾತ್ರದ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸುವಂತಿದೆ. ಕಿಶನ್ ರಾವ್ ದಳವಿಯವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವೇಷಗಳು’ ಸಿನಿಮಾದ ಮೂಲ ಕಥೆ ರವಿ ಬೆಳಗೆರೆಯವರದ್ದು. ಇದಕ್ಕೂ ಮೊದಲು ಚಿತ್ರತಂಡ ಬಿಡುಗಡೆ ಮಾಡಿದ್ದ ಶ್ರೀನಗರ ಕಿಟ್ಟಿ ಜೋಗತಿಯಾಗಿ ಕಾಣಿಸಿಕೊಳ್ಳುವ ವಿಭಿನ್ನ ರೀತಿಯ ಲುಕ್ ರಿವೀಲ್ ಟೀಸರ್ ಕೂಡ ಈಗಾಗಲೇ ಜನಮನವನ್ನು ಸೆಳೆದಿದೆ.

‘ವೇಷಗಳು’ ಚಿತ್ರತಂಡ ಯಾವ ರೀತಿಯಲ್ಲಿ ಪಾತ್ರಧಾರಿಗಳನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಒಪ್ಪಿಸುತ್ತಿರುವ ಅಪೆÇ್ರೀಚ್ ವಿಡಿಯೋಗಳು ತಮ್ಮ ಲಘು ಹಾಸ್ಯದ ಧಾಟಿಯಿಂದಾಗಿ ಜನರ ಮೆಚ್ಚುಗೆ ಗಳಿಸುತ್ತಿದೆ.ಒಟ್ಟಿನಲ್ಲಿ ಹೊಸಬರ ತಂಡವೊಂದು ತಮ್ಮದೇ ರೀತಿಯಲ್ಲಿ ಜನರನ್ನು ತಲುಪುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿದ್ದಾರೆಂದು ಹೇಳಬಹುದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin