Singing through artificial intelligence: A record attempt in the world cinema arena

ಕೃತಕ ಬುದ್ದಿಮತ್ತೆ ಮೂಲಕ ಗಾಯನ : ವಿಶ್ವ ಸಿನಿಮಾ ರಂಗದಲ್ಲಿ ದಾಖಲೆ ಪ್ರಯತ್ನ - CineNewsKannada.com

ಕೃತಕ ಬುದ್ದಿಮತ್ತೆ ಮೂಲಕ ಗಾಯನ : ವಿಶ್ವ ಸಿನಿಮಾ ರಂಗದಲ್ಲಿ ದಾಖಲೆ ಪ್ರಯತ್ನ

ವಿಶ್ವ ಸಿನಿಮಾ ರಂಗದಲ್ಲಿ ದಾಖಲೆಯ ಪ್ರಯತ್ನವಾಗಿದೆ.ಅದುವೇ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನ ಬಳಸಿಕೊಂಡು ಗಾಯಕ-ಅಥವಾ ಗಾಯಕಿ ಹಾಡು ಹಾಡದೆ ಮಹಿಳೆ ಮತ್ತು ಪುರುಷರ ಧ್ವನಿಯಲ್ಲಿ ಹಾಡು ಹೊರತರುವ ಸಾಹಸ ಮಾಡಲಾಗಿದೆ.

ಸದ್ದುಗದ್ದಲವಿಲ್ಲದೆ ಕನ್ನಡ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದಿರುವ ಡಾ. ಮಹೇಶ್ ಬಾಬು ಅವರು ಈ ನಡುವೆ ಇಂಗ್ಲೀಷ್ ಆಲ್ಬಂ ಹೊರ ತರುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಗಾಯಕ ಹಾಗು ಗಾಯಕಿಯ ಧ್ವನಿಯನ್ನು ಕೃತಕ ಬುದ್ದಿಮತ್ತೆಯನ್ನು ಬಳಸಿಕೊಂಡು ಹಾಡು ತಯಾರು ಮಾಡಿದ್ದಾರೆ. ಅದುವೇ “ ಕಾಜ್ ಐ ಲವ್ ಯೂ” ಭಾರತದಲ್ಲಿ ಮೊದಲಲ್ಲ ಇಡೀ ವಿಶ್ವದಲ್ಲಿಯೇ ಮೊದಲು ಎಂದು ಹೇಳಲಾಗಿದ್ದು ಗಿನ್ನಿಸ್ ದಾಖಲೆ ಬರೆಯುವ ಪ್ರಯತ್ನ ಮಾಡಿದ್ದಾರೆ.

ಆಲ್ಬಂ ಹಾಡು ಬಿಡುಗಡೆ ಮಾಡಿ ತಾವುಪಟ್ಟ ಶ್ರಮದ ಕುರಿತು ಮಾಹಿತಿ ಹಂಚಿಕೊಂಡ ಡಾ. ಮಹೇಶ್ ಬಾಬು ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಆಲ್ಬಂ ಸದ್ದು ಮಾಡಬೇಕು ಎನ್ನುವ ಉದ್ದೇಶದಿಂದ ಇಂಗ್ಲೀಷ್‍ನಲ್ಲಿ ನಿರ್ಮಿಸಿದ್ದೇವೆ. ಅದೇ ಕಾರಣಕ್ಕೆ ಇರಾನ್ ನಟಿ ಐದಾ ಫರೀದ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಭಾರತೀಯ ಚಿತ್ರರಂಗ ಮಾತ್ರವಲ್ಲದೆ ವಿಶ್ವ ಸಿನಿಮಾರಂಗದಲ್ಲಿ ಇದು ಹೊಸ ಪ್ರಯತ್ನ. ಯಾರೂ ಕೂಡ ಈ ಮಾದರಿಯನ್ನು ಬಳಕೆ ಮಾಡಿಕೊಂಡಿಲ್ಲ ಎನ್ನುವ ವಿವರ ನೀಡಿದರು.

ಗೀತರಚನೆ ಜೊತೆಗೆ ಸಂಗೀತ, ಸಂಕಲನ, ನಿರ್ದೇಶನ ಮತ್ತು ನಿರ್ಮಾಣವೂ ತಮ್ಮದೇ. 4 ವಿಭಿನ್ನ ಮಾದರಿಯ ಸಾಫ್ಟ್ ವೇರ್ ಬಳಸಿ ಕೃತಕ ಬುದ್ದಿಮತ್ತೆಯಲ್ಲಿ ಹಾಡು ಸೃಷ್ಠಿ ಮಾಡಿದ್ದೇವೆ.ಇದಕ್ಕಾಗಿ 6 ತಿಂಗಳು ತೆಗೆದಕೊಳ್ಳಲಾಗಿದೆ. ಕನ್ನಡದಲ್ಲಿಯೂ ಕೂಡ ಈ ರೀತಿಯ ಹಾಡುವ ಮಾಡುವ ಉದ್ದೇಶವಿದೆ. ಚಿತ್ರಕ್ಕೆ ಈ ರೀತಿಯ ಒಂದು ಹಾಡು ಒಳ್ಳೆಯದು ಎನ್ನುವ ಭಾವನೆ ನಮ್ಮದು. ಕನ್ನಡದಲ್ಲಿಯೂ ಈ ರೀತಿಯ ಪ್ರಯತ್ನ ಮಾಡಬಹುದು ಎಂದರು.

ಭಾರತೀಯ ಸಿನಿಮಾ ರಂಗ ಮಾತ್ರವಲ್ಲದೆ ವಿಶ್ವ ಸಿನಿಮಾರಂಗದಲ್ಲಿ ಯಾರೂ ಕೂಡ ಈ ರೀತಿಯ ಪ್ರಯತ್ನಕ್ಕೆ ಕೈಹಾಕಿಲ್ಲ. ಹಾಡು ಜಾಗತಿಕವಾಗಿ ಗಮನ ಸೆಳೆಯಬೇಕು ಎನ್ನುವು ಉದ್ದೇಶದಿಂದ ಇಂಗ್ಲೀಷ್‍ನಲ್ಲಿ ಹಾಡು ರೆಡಿ ಮಾಡಲಾಗಿದೆ. ಈ ಆಲ್ಬಂ ಹಾಡಿನಲ್ಲಿ ರೇವಂತ್ ಕುಮಾರ್ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ. ವಿಮಾನ ಅಪಘಾತದಲ್ಲಿ ಅವರು ಅನಿರೀಕ್ಷಿತಾವಾಗಿ ಸಾವನ್ನಪ್ಪಿದ ನಂತರ ಹೆಂಡತಿ ಗಂಡನ ಸಾವು ಕುರಿತು ಹಾಡುವ ಹಾಡು ಇದು. ಕೊನೆಗೆ ಗಂಡನಿಲ್ಲದೆಆಕೆಯೂ ಸಾವನ್ನಪ್ಪುವ ಕಥೆಯನ್ನು ಹಾಡಿನ ಮೂಲಕ ಹೇಳಲಾಗಿದೆ ಎಂದು ವಿವಿರ ನೀಡಿದರು.

ಹಾಡು ಅಂತರಾಷ್ಟ್ರೀಯ ಗಮನ ಸೆಳೆಯಬೇಕು ಎನ್ನುವ ಉದ್ದೇಶದಿಂದ ಈರಾನ್ ಬೆಡಗಿ ಐದಾ ಫರೀದ್ ನಾಯಕಿಯಾಗಿ ಕಾಣಿಸಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ನಟಿ ಐಧಾ ಫರೀದ್ ಈ ಮುಂಚೆ ಮಾಡಲಿಂಗ್‍ನಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ನೃತ್ಯಪಟು ಕೂಡ. ಇದೇ ಮೊದಲ ಬಾರಿಗೆ ಆಲ್ಬಂ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಎಂದು ಅನುಭವ ಹಂಚಿಕೊಂಡರು.

ನಾಯಕ ರೇವಂತ್ ಕುಮಾರ್, ಹಾಡಿಗಾಗಿ ನಾಲ್ಕು ತಿಂಗಳು ಕೆಲಸ ಮಾಡಿದ್ದೇವೆ. ಒಮ್ಮೆ ಸರಿ ಬರಲಿಲ್ಲ ಎಂದು ಮತ್ತೊಮ್ಮೆ ಹಾಡು ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು.

ಆಲ್ಬಂ ಹಾಡಿನಲ್ಲಿ ನಟರಾಜ, ವೆಂಕಟೇಶ್, ಯೋಗೇಶ್, ಲೀನಾ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಆಲ್ಬಂ ಹಾಡು ನಿರ್ಮಾಣ ಮಾಡಲು 2 ಲಕ್ಷ ರೂಪಾಯಿ ವೆಚ್ಚವಾಗಿದೆಯಂತೆ, ಕನ್ನಡದಲ್ಲಿ ಈ ರೀತಿಯ ಹೊಸ ಪ್ರಯತ್ನಗಳು ಹೆಚ್ಚಾಗುವ ಸಾದ್ಯತೆ ಅಲ್ಲಗಳೆಯುವಂತಿಲ್ಲ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin