Sonal Monteiro - Virata Bilva starrer "Love Matru" is all set to hit the screens

ಸೋನಲ್ ಮಾಂಟೇರಿಯೋ – ವಿರಾಟ ಬಿಲ್ವ ನಟನೆಯ “ಲವ್ ಮ್ಯಾಟ್ರು” ಚಿತ್ರ ತೆರೆಗೆ ಸಜ್ಜು - CineNewsKannada.com

ಸೋನಲ್ ಮಾಂಟೇರಿಯೋ – ವಿರಾಟ ಬಿಲ್ವ ನಟನೆಯ “ಲವ್ ಮ್ಯಾಟ್ರು” ಚಿತ್ರ ತೆರೆಗೆ ಸಜ್ಜು

ಈ ಲವ್ ವಿಷಯ ಇರುವ ಸಿನಿಮಾಗಳು ಪ್ರೇಕ್ಷಕನಿಗೆ ಸದಾ ಕಾಡುತ್ತವೆ.ಒಂದು ರೀತಿಯ ರಿಲ್ಯಾಕ್ಸ್ ಮಾಡೋದು ಇಂಥವೇ ಕಥೆಗಳು. ಥಿಯೇಟರ್ ನ ಆ ಡಾರ್ಕ್ ಪ್ರಪಂಚದಲ್ಲಿ ಕೂತಾಗ ದೊಡ್ಡ ಪರದೆಯ ಮೇಲೆ ಲವ್ ಸ್ಟೋರಿಯೊಂದು ಬಂದರೆ ಮನಸ್ಸೊಳಗೆ ಅದೇನೋ ಉಲ್ಲಾಸ. ಇದೀಗ ಅಂಥದ್ದೇ ಕಥೆಯೊಂದು ಎಲ್ಲೆ ಮುಂದೆ ಬರೋದಕ್ಕೆ ರೆಡಿಯಾಗಿದೆ. ಅದೇ “ಲವ್ ಮ್ಯಾಟ್ರು”

ಸದ್ಯ ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡಿರುವ ಲವ್ ಮ್ಯಾಟ್ರು ತೆರೆಗೆ ಬರಲು ಸಿದ್ಧವಾಗಿದೆ. ಪ್ರೇಕ್ಷಕರಿಗೂ ಲವ್, ರೊಮ್ಯಾನ್ಸ್, ಸಾಂಗ್ಸ್ ಉಣಬಡಿಸಲು ಸಿದ್ಧತೆ ನಡೆಸಿದೆ. ಸದ್ಯ ಲವ್ ಮ್ಯಾಟ್ರು ಸಿನಿಮಾದಿಂದ ಏನೋ ಗೊತ್ತಿಲ್ಲ ಎಂಬ ಹಾಡು ರಿಲೀಸ್ ಆಗಿದೆ.

ಈ ಹಾಡಿಗೆ ನಟ ವಿರಾಟ ಬಿಲ್ವ ಹಾಗೂ ಸೋನಲ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಸೋನಲ್ ಮಾಂಟೇರಿಯೋ ಕ್ಯೂಟ್ ಆಗಿ ಕಾಣಿಸ್ತಾ ಇದ್ದಾರೆ. ಶೇಡ್ರಾಕ್ ಸೋಲೋಮನ್ ಸಂಗೀತದಲ್ಲಿ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾಗೆ ವಿರಾಟ ಬಿಲ್ವ ಅವರೇ ನಿರ್ದೇಶನ ಮಾಡಿದ್ದಾರೆ. ಸುಕ್ಕಾ ಸೂರಿ, ಪ್ರಶಾಂತ್ ನೀಲ್, ಕೆ ಎಂ ಚೈತನ್ಯ ಸಿನಿಮಾಗಳೇ ಇವರಿಗೆ ಸ್ಪೂರ್ತಿ. ಈ ಮೂವರೇ ವಿರಾಟ್ ಗುರುಗಳು. ಕಡ್ಡಿಪುಡಿಯಲ್ಲೂ ನಟನೆ ಮಾಡಿದ್ದು, ಬಳಿಕ ಈ ಸಿನಿಮಾ ಮೂಲಕ ನಟನೆ ಹಾಗೂ ನಿರ್ದೇಶನ ಎರಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದಾರೆ.

ಚಿತ್ರದಲ್ಲಿ ಸೋನಲ್ ಮಾಂಟೇರಿಯೋ,ಸುಶ್ಮಿತಾ ಗೋಪಿನಾಥ್, ಅಚ್ಯುತ್ಕುಮಾರ್, ಸುಮನ್ ರಂಗನಾಥ್, ಅನಿತಾ ಭಟ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಶೇಡ್ರಾಕ್ ಸೋಲೋಮನ್ – ಸಂಗೀತ, ದೇವೇಂದ್ರ ಆರ್ ನಾಯ್ಡು ಮತ್ತು ಪರಮೇಶ್ ಸಿ ಎಂ – ಛಾಯಾಗ್ರಹಣ, ಸುರೇಶ್ ಅರಸ್ – ಸಂಕಲನವಿದೆ. ಎಲ್ಲಾ ಅಂದುಕೊಂಡಂತೆ ರೆಡಿಯಾಗಿದ್ದು, ತೆರೆಮೇಲೆ ಶೀಘ್ರದಲ್ಲಿಯೇ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin