ಚಿತ್ರರಂಗದಲ್ಲಿ ತಮ್ಮದೇ ಆದ ನೆಲೆ ಕಂಡುಕೊಳ್ಳಬೇಕು, ಆ ಮೂಲಕ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲ ಹಲವರದು, ಈ ನಿಟ್ಟಿನಲ್ಲಿ ಚಿತ್ರರಂಗದಲ್ಲಿ ಕನಸು ಕಂಡು ಸಾಧಿಸುವ ಉಮೇದಿನಲ್ಲಿ ಜಿ, ಶ್ರೀಷ ಮತ್ತು ತಂಡದ ಪ್ರಯತ್ನವೇ “’ತರಂಗಾಂತರಂಗ’”

ಕಳೆದ ಆರೇಳು ವರ್ಷಗಳ ಸಿನಿಮಾ ಈಗ ಅಡೆ ತಡೆ ದಾಟಿ ಬಿಡುಗಡೆಯ ಹಂತಕ್ಕೆ ಬಂದಿದೆ, ನಟ, ನಿರ್ಮಾಪಕ, ನಿರ್ದೇಶಕ ಶ್ರೀಶ ಅವರ ಪ್ರಯತ್ನಕ್ಕೆ ಸ್ನೇಹಿತರು ಬೆಂಬಲವಾಗಿ ನಿಂತಿದ್ದಾರೆ. ಜೊತೆಗೆ ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಪ್ರಮೋದ್ ಶೆಟ್ಟಿ ಬೆಂಬಲವಾಗಿ ನಿಂತಿರುವುದು ತಂಡಕ್ಕೆ ಮತ್ತಷ್ಟು ಬಲಬಂದಿದೆ.
ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಬಂದಿರುವ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿದೆ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾಕೆ ವಿಶ್ವನಾಥ್ ಟ್ರೈಲರ್ ಬಿಡುಗಡೆ ಮಾಡಿ ಹೊಸ ತಂಡಕ್ಕೆ ಸಹಕಾರಬೇಕಾಗಿದೆ. ಹೊಸಬರ ಸಿನಿಮಾಗಳು ಚಿತ್ರಮಂದಿರಕ್ಕೆ ತರಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ ಇಂತಹ ಸಮಯದಲ್ಲಿ ಎಲ್ಲರ ಸಹಕಾರ ಅಗತ್ಯಗತ್ಯ ಎಂದಿದ್ದಾರೆ
ಈ ವೇಳೆ ಮಾತಿಗಿಳಿದ ನಟ, ನಿರ್ದೇಶಕ,ನಿರ್ಮಾಪಕ ಜಿ ಶ್ರೀಷ ಮಾತನಾಡಿ ಕರಾವಳಿ ಭಾಗದಲ್ಲಿ ನಾಗ ಹಕರೆ ಚಾಲ್ತಿಯಲ್ಲಿದೆ, ಅಂದುಕೊಂಡ ಹರಕೆಯನ್ನು ತೀರಿಸದಿದ್ದರೆ ನಾಗ ಮನೆಗೆ ಬಂದು ಬಿಡುತ್ತಾನೆ ಎನ್ನುವ ನಂಬಿಕೆ ಜನರದ್ದು, ಇಂತಹುದೇ ವಿಷಯವನ್ನು ಮುಂದಿಟ್ಟುಕೊಂಡು ಕುತೂಹಲಕಾರಿಯಾಗಿ ತಂದಿರುವ ಸಿನಿಮಾ ‘ತರಂಗಾಂತರಂಗ’. ಕಷ್ಟುಪಟ್ಟು ಸಿನಿಮಾ ಮಾಡಿದ್ದೇವೆ ನಾನಾ ಕಾರಣದಿಂದ ವಿಳಂಬಾಯಿತು, ಇಂತಹ ಸಮಯದಲ್ಲಿ ನೆರವಿಗೆ ಬಂದಿದ್ದು ಪತ್ನಿ ಅನುರಾಧ ಎಂದರು.

ಚಿತ್ರದಲ್ಲಿ ದಿವಂಗತ ರಾಕೇಶ್ ಪೂಜಾರಿ ಮತ್ತು ದಿನೇಶ್ ಮಂಗಳೂರು ನಟಿಸಿದ್ದಾರೆ, ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿದ್ದೇವೆ. ರಾಕೇಶ್ ಡಬ್ಬಿಂಗ್ ಮಾಡಲು ಒಪ್ಪಿದ್ದರು ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ನಟ ಪ್ರಮೋದ್ ಶೆಟ್ಟಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು
ಹಿರಿಯ ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಸಿನಿಮಾ ಮಾಡಲು ನನ್ನ ಬಳಿಗೆ ಬರುವ ಮಂದಿಗೆ ಕಷ್ಟಪಟ್ಟು ಸಿನಿಮಾ ಮಾಡಬೇಡಿ ಎಂದೇ ಹೇಳುತ್ತೇನೆ, ಇಲ್ಲಿ ಹಾಕುವ ಹಣದಿಂದ ನಿಮ್ಮ ಮನೆ, ಆಸ್ತಿ ಕಳೆದುಕೊಳ್ಳುತ್ತೀರಾ ಎನ್ನುವುದಾದರೆ ಈ ಕಡೆ ತಲೆ ಹಾಕಬೇಡಿ ಎಂದು ಸಲಹೆ ನೀಡುತ್ತೇನೆ, ಅಂತಹ ಸಲಹೆಯನ್ನು ನಿರ್ದೇಶಕ ಶ್ರೀಷಗೆ ನೀಡಿದ್ದೆ ಆದರೂ ಅವ ಸಿನಿಮಾ ಮೇಲಿನ ಫ್ಯಾಶನ್ ನಿಂದ ಎದುರಾದ ಕಷ್ಟಗಳನ್ನು ದಾಟಿ ಬಿಡುಗಡೆಯ ಹಂತಕ್ಕೆ ತಂದಿದ್ಧಾರೆ . ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಿಸಿದರು.

ನಾಯಕಿ ಚರಿಕಾ ಆರ್ ಮೂರ್ತಿ ಮಾತನಾಡಿ ಡೇಟ್ಸ್ ಕೊಡದೆ ಕಾಟ ಕೊಟ್ಟಿದ್ದೇನೆ. ಅದಕ್ಕೆ ಕಾರಣ ಸೀರಿಯಲ್ನಲ್ಲಿ ಕೆಲಸ ಮಾಡುತ್ತಿದ್ದೆ, ಸಿನಿಮಾವನ್ನು ಇಷ್ಟಪಟ್ಟು ಮಾಡಿದ್ದೇವೆ ಎಂದರು ಇಷ್ಟಪಟ್ಟ ಮಾಡಿದ್ದೇನೆ ಎಂದರು
ಸಂಗೀತ ನಿರ್ದೇಶಕ ಪ್ರವೀಣ್ ಶೆಟ್ಟಿ. ಸಹ ನಿರ್ಮಾಪಕ ರಂಜಿತ್, ಕಲಾವಿದ ನಾರಾಯಣ್ ನಾಯ್ಕ್, ವೆಂಕಟೇಶ್ ಅವರ ಛಾಯಾಗ್ರಾಹಣ ಚಿತ್ರಕ್ಕಿದೆ







