ಕರಾವಳಿ ಭಾಗದ ಪ್ರೇಮಕಥೆಯ ” ಮಾರ್ನಮಿ” ಟೀಸರ್ ಬಿಡುಗಡೆ: ಕುತೂಹಲ ಹೆಚ್ಚಳ
ಕರಾವಳಿ ಭಾಗದ ಪ್ರೇಮಕಥೆ ಹೊಂದಿರುವ ‘ಮಾರ್ನಮಿ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಚಿತ್ರದ ಬಗೆಗಿನ ಕುತೂಹಲ ಹೆಚ್ಚುವಂತೆ ಮಾಡಿದೆ

ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿರುವ ನಟ ರಿತ್ವಿಕ್ ಮಠದ್ ರಗಡ್ ಅವತಾರವದಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ನಾಯಕಿಯಾಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ.
ನಟ ರಿತ್ವಿಕ್ ಮಠದ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಅವರ ಇಂಟ್ರೂಡಕ್ಷನ್ ಟೀಸರ್ ಅನಾವರಣ ಮಾಡಿದೆ.ಈ ವೇಳೆ
ನಟ ರಿಷಿ, ನಿರ್ದೇಶಕ ಸಿಂಪಲ್ ಸುನಿ, ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ದಿವ್ಯ ಉರುಡುಗ ಮತ್ತು ಕೆಪಿ ಅರವಿಂದ್ ಸ್ನೇಹಿತ ರಿತ್ವಿಕ್ ಗೆ ಶುಭ ಕೋರಿದರು.
ನಿರ್ಮಾಪಕ ನಿಶಾಂತ್ ಮಾತನಾಡಿ, ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಶೀಘ್ರದಲ್ಲೇ ಟ್ರೇಲರ್ ಬರಲಿದೆ. ಒಳ್ಳೆ ಉತ್ರಮ ತಾರಾಗಣ ಮತ್ತು ತಂತ್ರಜ್ಞರ ತಂಡ ಚಿತ್ರದಲ್ಲಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. . ಸೆಪ್ಟಂಬರ್ ನಲ್ಲಿ ಸಿನಿಮಾ ತೆರೆಗೆ ತರುವ ಆಲೋಚನೆಯಲ್ಲಿ ಇದ್ದೇನೆ ಎಂದು ಮಾಹಿತಿ ಹಂಚಿಕೊಂಡರು
ನಿರ್ದೇಶಕ ರಿಶಿತ್ ಶೆಟ್ಟಿ, ಮಾತನಾಡಿ ಮಾರ್ನಮಿಯ ಮೊದಲೆರಡು ಟೀಸರ್ ಗೆ ಉತ್ರಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ರಿಲೀಸ್ ಆಗಿರುವ ಟೀಸರ್ ಅನ್ನೂ ಜನ ಇಷ್ಟ ಪಡ್ತಾರೆ ಎನ್ನುವ ನಂಬಿಕೆ ಇದೆ ಎಂದರು
ನಾಯಕ ರಿತ್ವಿಕ್ ಮಠದ್ ಮಾತನಾಡಿ ಈ ಪಯಣವನ್ನು ಇಷ್ಟು ಅದ್ಭುತವಾಗಿ ಮುಗಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಇದು ಸಾಧ್ಯವಾಗಿದ್ದು ನಿರ್ಮಾಪಕರರಾದ ನಿಶಾಂತ್ ಹಾಗೂ ಶಿಲ್ಪಾ ಅವರಿಂದ. ಈ ರೀತಿಯ ನಿರ್ಮಾಪಕರು ಇಂಡಸ್ಟ್ರೀಗೆ ಹಾಗೂ ಹೊಸಬರಿಗೆ ಬೇಕು. ಹೊಸಬರಿಗೆ ದೊಡ್ಡು ಹಾಕಿ ಅದ್ಭುತ ಪ್ರೊಡಕ್ಟ್ ತೆಗೆಯುವುದು ಸುಲಭವಲ್ಲ. ನನಗೆ ಸಿಕ್ಕಿರುವ ಅದ್ಭುತವಾದ ಹುಟ್ಟುಹಬ್ಬದ ಉಡುಗೊರೆ ಎಂದರು.

ನಾಯಕಿ ಚೈತ್ರಾ ಆಚಾರ್, ರಿಶಿತ್ ಶೆಟ್ಟಿ ತುಂಬಾ ಚೆನ್ನಾಗಿ ಕಥೆ ಹೇಳುತ್ತಾರೆ. ಹೇಳಿದಂತೆಯೇ ಚಿತ್ರೀಕರಿಸಿದ್ದಾರೆ, ಇಡೀ ಪ್ರೊಡಕ್ಷನ್ ನನಗೆ ತುಂಬಾ ಸಪೋರ್ಟ್ ಆಗಿ ನಿಂತಿದೆ. ಈ ಚಿತ್ರದಲ್ಲಿ ನಾನೇ ನಟಿಸಬೇಕು ಅಂತ ಬರೆದಿತ್ತು ಅನಿಸುತ್ತೆ ಹೀಗಾಗಿ ಈ ಚಿತ್ರ ನನಗೆ ಸಿಕ್ಕಿದೆ. ಈ ಸಿನಿಮಾಗೆ ಬಂದಮೇಲೆ ಮಂಗಳೂರಿನಲ್ಲಿ ಎಂತಹ ಕಲಾವಿದರು ಇದ್ದಾರೆ ಅನ್ನೋದು ಗೊತ್ತಾಯ್ತು. ಒಳ್ಳೆಯವತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದರು.
ಕೆಲ ಸಿನಿಮಾಗಳಲ್ಲಿ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಿಶಿತ್ ಶೆಟ್ಟಿ ಚಿತ್ರಕ್ಕೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ.

ಮಾರ್ನಮಿ’ ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಜೊತೆಗೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ಸಲಗ, ಭೀಮ ಖ್ಯಾತಿಯ ಶಿವಸೇನ ಛಾಯಾಗ್ರಹಣ , ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ., ವರ್ಷಾ ಆಚಾರ್ ಕಾಸ್ಟುಮ್ ಡಿಸೈನ್ ಮಾಡಿದ್ದಾರೆ, ‘ಮಾರ್ನಮಿ’ ಸಿನಿಮಾವನ್ನು ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.

