ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದ “ಬಲರಾಮನ ದಿನಗಳು” ಚಿತ್ರತಂಡ
“ಆ ದಿನಗಳು” ಚಿತ್ರದ ಭರ್ಜರಿ ಯಶಸ್ಸಿನ 18 ವರ್ಷಗಳ ನಂತರ ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನ ಮಾಡಿರುವ ಬಲರಾಮನ ದಿನಗಳು ಚಿತ್ರದ ಶುರು ಶುರು ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಬಂಡವಾಳ ಹೂಡಿರುವ ಚಿತ್ರದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಟೈಗರ್‍ಗೆ ಇದು 25ನೇ ಚಿತ್ರ.

ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಿನಾಶ್, ಅತುಲ್ ಕುಲಕರ್ಣಿ , ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ಸೇರಿದಂತೆ ಹಿರಿ- ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.
ಮಂಡ್ಯದ ಅರ್ಜಿ ರೆಸಾರ್ಟ್ ನಲ್ಲಿ ಸಂಕ್ರಾಂತಿ ಸಂಭ್ರಮ ಆಚರಿಸಿದ ಸಿನಿಮಾ ತಂಡ ಮಾಧ್ಯಮ ಮಿತ್ರರೊಂದಿಗೆ ಕುಣಿದು ಕುಪ್ಪಳಿಸಿದರು..ನಾಯಕಿ ಪ್ರಿಯಾ. ನಾಯಕ ವಿನೋದ್ ಪ್ರಭಾಕರ್, ನಿರ್ದೇಶಕ ಚೈತನ್ಯ ಪದ್ಮಾವತಿ ಪ್ರೊಡಕ್ಷನ್ಸ್ ಹೌಸ್ ಪದ್ಮಾವತಿ ಮತ್ತು ಶ್ರೇಯಸ್ ಮತ್ತಿತರರು ಈ ಕ್ಷಣದಲ್ಲಿ ಸಾಕ್ಷಿಯಾಗಿದ್ದರು
ನಟ ವಿನೋದ್ ಪ್ರಭಾಕರ್ ಮಾತನಾಡಿ ಬಲರಾಮನ ದಿನಗಳು ನನ್ನ ವೃತ್ತಿ ಬದುಕಿಗೆ ತಿರುವು ಕೊಡುವ ಸಿನಿಮಾ. ಮಾದೇವ ಆದ ನಂತರ ನನ್ನ ಜೀವನವೇ ಬದಲಾಗಿದ್ದು ಬಲರಾಮನಾಗಿ ಪ್ರತಿಕ್ಷಣ ಜೀವಿಸಿದ್ದೀನಿ ಬಹಳ ಡೆಡಿಕೇಶನ್ ಕೊಟ್ಟು ಪಾತ್ರಕ್ಕೆ ತಯಾರಿ ಮಾಡಿಕೊಂಡು ಇದ್ದೀನಿ ತಂದೆಯಿಂದಲೇ ಎಲ್ಲಾ ಸಿಕ್ಕಿದ್ದು ಬಿಡಿ ಎಂದು ತಂದೆ ನೆನೆದು ವಿನೋದ್ ಭಾವುಕರಾದರು..

ನಟಿ ಪ್ರಿಯಾ ಮಾತಾಡಿ ನನಗೆ ಪ್ರಾಣಿಗಳೆಂದರೆ ತುಂಬ ಇಷ್ಟ ತುಂಬ ಇಷ್ಟವಾದ ಸಿನಿಮಾ ಮತ್ತೆ ಕನ್ನಡ ಸಿನಿಮಾಕ್ಕೆ ಬಂದಿದೀನಿ ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಡೈಲಾಗ್ ಸೀನ್ ಎಲ್ಲವೂ ತುಂಬ ಚೆನ್ನಾಗಿ ಬಂದಿದೆ ವಿನೋದ್ ಜೊತೆಗೆ ನಟಿಸಿ ಖುಷಿ ಆಗಿದೆ ಮುಂದೆ ಇನ್ನೂ ಹೆಚ್ಚು ಕನ್ನಡ ಸಿನಿಮ ಮಾಡ್ತೀನಿ ಎಂದು ಸಂತಸ ವ್ಯಕ್ತಪಡಿಸಿದರು..
ನಿರ್ಮಾಪಕ ಶ್ರೇಯಸ್ ಮಾತನಾಡಿ ನಸಿನಿಮಾ ಸಿಂಪಲ್ ಆಗಿ ಪ್ರಾರಂಭವಾಗಿ ಸೂಪರ್ ಆಗಿ ಮುಗ್ಧಿದೆ ನಮಗೆ ನಿಮ್ಮ ಆಶೀರ್ವಾದ ಬೇಕು ಎಲ್ಲರೂ ನಮಗೆ ಶುಭ ಹಾರೈಸಿ ಎಂದು ಹೇಳಿದರು.

ವಿನೋದ್ ಪ್ರಭಾಕರ್ ಪತ್ನಿ ನಿಶಾ ಮಾತನಾಡಿ ಶ್ರೇಯಸ್ ಹಾಕೋ ದುಡ್ಡು ಎಲ್ಲಿಗೆ ಹೋಗ್ತಿದೆ ಏನ್ ಆಗ್ತಿದೆ ಅದೆಲ್ಲ ನೋಡಿಕೊಳ್ಳುವ ಜವಾಬ್ದಾರಿ ನಂದಾಗಿತ್ತು ಈ ಟೀಮ್ ಜೊತೆಗೆ ಕೆಲಸ ಮಾಡಿ ನನಗೆ ಬಹಳ ಸಂತೋಷವಿದೆ ನಾನ್ ಹೇಳ್ತಾ ಇದೆ ಶ್ರೇಯಸ್ ಕೆ ತುಂಬಾ ಖರ್ಚಾಗ್ತಿದೆ ಅಂದ್ರು ಶ್ರೇಯಸ್ ಎಲ್ಲದನ್ನು ಮಾಡ್ತಾ ಇದ್ರು ಅಂತ ಸಂತಸ ವ್ಯಕ್ತಪಡಿಸಿದ್ದರು..
ನಟ ವಿನಯ್ ಗೌಡ ಅಲಿಯಾಸ್ ಕತ್ತಿ ಮಾತನಾಡಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಇದೊಂತರ ನಮಗೆ ಸಂಕ್ರಾಂತಿ ಗಿಫ್ಟ್ ಇದ್ದಂಗೆ ನನ್ನ ವೃತ್ತಿ ಬದುಕಿಗೆ ತಿರುಗು ಕೊಟ್ಟ ಸಿನಿಮಾ ಅಂದ್ರೆ ಅದು ಬಲರಾಮ ನೀವು ಹೂವಿಸಲಾಗದಂತ ಪಾತ್ರವನ್ನು ನಾನು ಮಾಡಿದ್ದೇನೆ ಕತ್ತೆ ಹೇಗಿರುತ್ತಾನೆ ಕತ್ತಿ ಏನ್ ಮಾಡ್ತಾನೆ ಎಲ್ಲದನ್ನು ನೀವು ಸಿನಿಮಾದಲ್ಲೇ ನೋಡಿ ಎಂದರು
ನಿರ್ಮಾಪಕಿ ಪದ್ಮಾವತಿ ಮಾತನಾಡಿ ಬಹಳ ಸಂತೋಷ ಕೊಟ್ಟಂತಹ ದಿನವಾಗಿದೆ ಅಂದುಕೊಂಡಕ್ಕಿಂತ ಹೆಚ್ಚಿನ ನಿರೀಕ್ಷೆ ವ್ಯಕ್ತವಾಗ್ತಾಯಿದೆ ನೀವೆಲ್ಲ ನಮಗೆ ಬೆಂಬಲ ಮಾಡ್ತಾ ಇದ್ದೀರಾ ಬೆಂಬಲ ಹೀಗೆ ಇರಲಿ. ನನಗೆ ಈ ತಂಡದ ಜೊತೆಗೆ ಕೆಲಸ ಮಾಡಿ ಬಹಳ ಖುಷಿಯಾಗಿದೆ ಯಾವುದಕ್ಕೂ ಕೊಂದು ಕೊರತೆ ಮಾಡಿಲ್ಲ ಅದೇ ರೀತಿಯಾಗಿ ವಿನೋದ್ ಪ್ರಭಾಕರ್ ಪ್ರಿಯಾ ವಿನಯ್ ಗೌಡ ರಜತ್ ಪ್ರತಾಪ್ ನಾರಾಯಣ್ ಇಂತಹ ವ್ಯಕ್ತಿಗಳ ಜೊತೆಗೆ ಸಿನಿಮಾ ಮಾಡಿ ನಮಗೂ ಖುಷಿಯಾಗಿದೆ ಎಲ್ಲದಕ್ಕೂ ನಮಗೆ ಚೈತನ್ಯ ಸರ್ ಮುಂದೆ ನಿಂತಿದ್ದು ಬಹಳ ಖುಷಿಯ ವಿಚಾರ ಸಿನಿಮಾ ತಂಡದ ಜೊತೆಗೆ ಕೆಲಸ ಮಾಡಿ ಒಂದು ಬೇರೆದೆ ನಿರೀಕ್ಷೆ ವ್ಯಕ್ತವಾಗಿದೆ ನಿಮ್ಮ ಸಪೆÇೀರ್ಟ್ ನಮಗೆ ಬಹಳ ಮುಖ್ಯ ಹೀಗೆ ನಮ್ಮನ್ನು ಹರಿಸಿ ಎಂದ್ರು..

ಕಲಾವಿದ ರಜತ್ ಮಾತನಾಡಿ ಬಿಗ್ ಬಾಸ್ ನಲ್ಲಿ ಇದ್ದಾಗ ಈ ಸಿನಿಮಾದ ಶೂಟಿಂಗ್ ಆಗಿತ್ತು ಸ್ಟಾರ್ ಕಾಸ್ಟ್ ಕೂಡ ಕರೆದಿದ್ದರು ನನಗೆ ಏನು ಮಾಡಬೇಕು ಗೊತ್ತಾಗಿಲ್ಲ ಬಿಗ್ ಬಾಸ್ ಇಂದ ಆಚೆ ಬಂದ ನಂತರ ಚೈತನ್ಯ ಸರ್ ಹೀಗೆ ಅಂತ ನನಗೆ ಕಾಲ್ ಮಾಡಿ ಹೇಳಿದಾಗ ಬಹಳ ಖುಷಿಯಾಯಿತು ಇಲ್ಲಿಂದ ನನ್ನ ವೃತ್ತಿ ಜೀವನಕ್ಕೂ ಒಂದು ತಿರುವು ಕೊಟ್ಟಂತಹ ಸಿನಿಮಾ ಬಲರಾಮನ ದಿನ ಯಾವಾಗಲೂ ನಾನು ಇದನ್ನ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ ಎಂದರು

