ನಟ ಗಣೇಶ ಅಭಿನಯದ “ಬೃಂದಾವಿಹಾರಿ” ಚಿತ್ರ ನವೆಂಬರ್ 20 ರಂದು ತೆರೆಗೆ

ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ ನೆಹರು ಮೈದಾನದಲ್ಲಿ ಹಾಕಿದ್ದ ಭವ್ಯ ವರ್ಣರಂಜಿತ ವೇದಿಕೆಯಲ್ಲಿ ನಡೆದ ‘ ‘ಬೃಂದಾವಿಹಾರಿ’ ಚಿತ್ರದ ಪ್ರಿರಿಲೀಸ್ ಸಮಾರಂಭದಲ್ಲಿ ಕಾಮಿಡಿ ಕಿಲಾಡಿಗಳು ಕಲಾವಿದರಾದ ಜಗಪ್ಪ, ಸುಶ್ಮಿತಾ, ಬಿಗ್ ಬಾಸ್ ವಿಜೇತರಾದ ಗಿಲ್ಲಿ ನಟ, ಮಂಜು ಪಾವಗಡ ಸೇರಿದಂತೆ ಅನೇಕ ಕಲಾವಿದರ ಕಾಮಿಡಿ ಕಾರ್ಯಕ್ರಮಗಳು ಹಾಗೂ ಚಿತ್ರದ ಹಾಡುಗಳಿಗೆ ಕಲಾವಿದರ ಅಮೋಘ ನೃತ್ಯ ಪ್ರದರ್ಶನ ನೆರೆದಿದ್ದ ಸಹಸ್ರಾರು ಅಭಿಮಾನಿಗಳನ್ನು ರಂಜಿಸಿದವು.

ನಿರ್ಮಾಪಕ ಸಮೃದ್ದಿ ವಿ. ಮಂಜುನಾಥ್ ಬೃಂದಾವಿಹಾರಿ ಒಂದೊಳ್ಳೆ ಚಿತ್ರ. ಉತ್ತರ ಕರ್ನಾಟಕದ ಜನತೆ ಕನ್ನಡ ಚಿತ್ರಗಳನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅದೇ ರೀತಿ ನಮ್ಮ ಚಿತ್ರವನ್ನೂ ವೀಕ್ಷಿಸಿ,ಆ ಮೂಲಕ ನಮಗೆ ಬೆಂಬಲಿಸಿ ಎಂದು ಆಶೀರ್ವಾದ ಬೇಡಲು ನಿಮ್ಮಬಳಿ ಬಂದಿದ್ದೇವೆ. ಸದ್ಯ “ಪ್ರೇಮದ ಊರಲಿ” ಎಲ್ಲಾ ಕಡೆ ಚೆನ್ನಾಗಿ ಹೋಗುತ್ತಿದೆ. ಹಾಗಾಗಿ ನಮ್ಮ ಚಿತ್ರದ ಬಿಡುಗಡೆಯನ್ನು ಅ.16ರಿಂದ ನ.20ಕ್ಕೆ ಮುಂದಕ್ಕೆ ಹಾಕಿದ್ದೇವೆ. ದಯಮಾಡಿ ನಮ್ಮನ್ನು ಹರಸಿ ಎಂದು ಹುಬ್ಬಳ್ಳಿ ಮಂದಿಯ ಸಹಕಾರವನ್ನು ಕೋರಿದರು. ವೇದಿಕೆಯಲ್ಲಿ ಹಾಜರಿದ್ದ ಶಾಸಕರಾದ ಪ್ರಸಾದ್ ಅಬ್ಬಯ್ಯ, ರಾಜುಗೌಡ, ಅರವಿಂದ್ ಬೆಲ್ಲದ್ ಶುಭ ಹಾರೈಸಿದರು.

ನಾಯಕ ನಟ ಗಣೇಶ್ ಮಾತನಾಡಿ ಹುಬ್ಬಳ್ಳಿ ಜನತೆಗೆ ತಮ್ಮದೇ ಧಾಟಿಯಲ್ಲಿ ನಮಸ್ಕಾರ ಹೇಳಿ, ನಮ್ಮ ಚಿತ್ರವನ್ನು ಗೆಲ್ಲಿಸಿ ಎಂದರು.

ಹಿರಿಯನಟ ರಂಗಾಯಣ ರಘು ಮಾತನಾಡಿ ಒಂದು ಚಿತ್ರಕ್ಕಾಗಿ ಮತ್ತೊಂದು ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿರುವುದು ನಿರ್ಮಾಪಕರ ದೊಡ್ಡಗುಣ ಎಂದು ಮಂಜುನಾಥ್ ಅವರನ್ನು ಹೊಗಳಿದರು.

ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ ಗಣೇಶ್ ಅವರು ನನ್ನ ಸಿನಿಮಾ ಬಂದಾಗೆಲ್ಲ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಫ್ಯಾಮಿಲಿ ಕಂಟೆಂಟ್ ನನಗೆ ಇಷ್ಟವಾದ ಜಾನರ್, ಚಿತ್ರ ಖಂಡಿತ ಯಶಸ್ವಿಯಾಗುತ್ತದೆ ಎಂದು ಹಾರೈಸಿದರು.

Related Posts

‘ನೆನಪಾದಳು ಶಾಕುಂತಲೆ’ ಚಿತ್ರೀಕರಣ ಮುಕ್ತಾಯ

ವಿಸ್ಮಯ ಕೆ. ನಿರ್ಮಾಣದ “’ನೆನಪಾದಳು ಶಾಕುಂತಲೆ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದ ಮುಂದೆ ಕುಂಬಳಕಾಯಿ ಒಡೆದಿದೆ. ವಿನಯ್ ಚಂದ್ರಹಾಸ- ವಿರಾಜ್ ಕೋಲಾಟ್ಲು ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ ಹಾಗೂ ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ. ಪುರಾಣದ…

ತೆರೆಗೆ ಬರಲು ಸಜ್ಜಾದ ’18 ಎಕರೆ ಸಿನಿಮಾ ಲಕ್ಕಪ್ಪ’

ನಿರ್ದೇಶಕ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ಬಿಡುಗಡೆಗೆ ಸಿದ್ದವಾಗಿರುವ ‘ಮಾರ್ಲಾಮಿ’, ಚಿತ್ರೀಕರಣ ಹಂತದಲ್ಲಿರುವ ‘ರುದ್ರ ಕಾಲಭೈರವ’, ‘ಲೋ ಬಜೆಟ್ ನೋ ಬಜೆಟ್’, ‘ಪವನಸುತ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ತಮಿಳಲ್ಲಿ ‘ಮರ್ಮಮುಟುಚಿ’, ‘ಕಾದಲ್ ವಾರ್’, ‘ಗಾಯತ್ರಿ ನಿಲಮ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581