'The Task' to release on November 21: Actor Dhruva Sarja Saath

ನವಂಬರ್ 21ಕ್ಕೆ ‘ದಿ ಟಾಸ್ಕ್’ ಚಿತ್ರ ಬಿಡುಗಡೆ: ನಟ ಧೃವ ಸರ್ಜಾ ಸಾಥ್ - CineNewsKannada.com

ನವಂಬರ್ 21ಕ್ಕೆ ‘ದಿ ಟಾಸ್ಕ್’ ಚಿತ್ರ ಬಿಡುಗಡೆ: ನಟ ಧೃವ ಸರ್ಜಾ ಸಾಥ್

“ದಿ ಟಾಸ್ಕ್” ಸಿನಿಮಾ ಟೈಟಲ್ ಹಾಗೂ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದೆ. ಇದರ ಬೆನ್ನಲ್ಲೇ ನವೆಂಬರ್ 21ಕ್ಕೆ ತೆರೆಗೆ ಬರಲು ಸಜ್ಜಾಗಿದೆ, ಚಿತ್ರಕ್ಕೆ ನಟ ದೃವ ಸರ್ಜಾ ಸಾಥ್ ನೀಡಿರುವುದು ಆನೆ ಬಲ ಬಂದಂತಾಗಿದೆ.

“ಸಾಗುವ ದಾರಿಯ ತುಂಬಾ” ಎನ್ನುವ ಎಂಬ ಸೇಮಿ ರ್ಯಾಪ್ ಗೀತೆ ಬಿಡುಗಡೆ ಮಾಡಿದ ಧೃವ ಸರ್ಜಾ, ಬಿಡುಗಡೆ
ಸಾಂಗ್ ತುಂಬಾ ಪ್ರಾಮಿಸಿಂಗ್ ಆಗಿದೆ. ಸ್ಯಾಂಡಿ ಸರ್ ಯೂನಿಕ್ ಆಗಿ ಮ್ಯೂಸಿಕ್ ಕೊಟ್ಟಿದ್ದಾರೆ. ಎಲ್ಲರಿಗೂ ಈ ಹಾಡು ಇಷ್ಟವಾಗುತ್ತದೆ. ಟಾಸ್ಕ್ ಟೀಸರ್ ನೋಡಿದ್ರೆ ಆಕ್ಷನ್ ಥ್ರಿಲ್ಲರ್ ಎನಿಸುತ್ತದೆ. ಸಿನಿಮಾ ನೋಡಬೇಕು ಎಂಬ ನಿರೀಕ್ಷೆ ಹುಟ್ಟುಹಾಕುತ್ತದೆ. ನಾವು ನಮ್ಮ ಸ್ನೇಹಿತರ ಜೊತೆ ಫಸ್ಟ್ ಡೇ ಫಸ್ಟ್ ಶೋ ಹೋಗಿ ನಿಮಗೆ ಕಾಲ್ ಮಾಡ್ತೀನಿ ಎಂದರು

ನಿರ್ದೇಶಕ ರಾಘು ಶಿವಮೊಗ್ಗ ಮಾತನಾಡಿ, ದಿ ಟಾಸ್ಕ್ ಟೀಸರ್ ಹಾಗೂ ಹಾಡು ನೋಡಿದ್ದೀರ. ಏನೂ ಮಾತನಾಡಬೇಕು ಅನ್ನೋದನ್ನು ಸಿನಿಮಾ ಮುಖಾಂತರ ಹೇಳುತ್ತೇನೆ. ಚಿತ್ರವಾಗಲು ಮುಖ್ಯ ಕಾರಣ ವಿಜಯ್ ಕುಮಾರ್ ಸರ್, ರಾಮಣ್ಣ ಸರ್, ರಾಜೇಶ್ ಸರ್ ಹಾಗೂ ನರೇಂದ್ರ ಬಾಬು ಸರ್ ಗೆ ಧನ್ಯವಾದಗಳು. ಈ ಅವಕಾಶವನ್ನು ನನಗೆ ಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದರು.

ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಭೀಮ ಸಿನಿಮಾ ಖ್ಯಾತಿಯ ಜಯ ಸೂರ್ಯ ಆರ್ ಅಜಾದ್ , ಪೆಂಟಗನ್ ಸಿನಿಮಾ ಖ್ಯಾತಿಯ ಸಾಗರ್ ರಾಮ್ ಹಾಗೂ ಬಾಲ ನಟಿ ಬೇಬಿ ಶ್ರೀ ಲಕ್ಷ್ಮಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಘು ಶಿವಮೊಗ್ಗ ಅವರು ನಿರ್ದೇಶನದ ಜವಾಬ್ದಾರಿಯ ಜೊತೆಗೆ ಒಂದು ಮುಖ್ಯ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರಿಯಾ, ಬಾಲಾಜಿ ಮನೋಹರ್, ಬಿ.ಎಂ. ಗಿರಿರಾಜ್ ತಾರಾಬಳಗದಲ್ಲಿದ್ದಾರೆ.

ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.ಸಾಗುವ ದಾರಿಯ ತುಂಬಾ ಹಾಡನ್ನು ಸೇಮಿ ರ್ಯಾಪ್ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ರಾಘು ಶಿವಮೊಗ್ಗ, ಚೇತನ್ ನಾಯ್ಕ್ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಒದಗಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin