Vijay Prakash song for "Bhagirath".

“ಭಗೀರಥ” ಚಿತ್ರಕ್ಕೆ ವಿಜಯ್ ಪ್ರಕಾಶ್ ಹಾಡು - CineNewsKannada.com

“ಭಗೀರಥ” ಚಿತ್ರಕ್ಕೆ ವಿಜಯ್ ಪ್ರಕಾಶ್ ಹಾಡು

ರಾಮ್ ಜನಾರ್ದನ್ ನಿರ್ದೇಶನದ “ಭಗೀರಥ” ಚಿತ್ರದ ಚಿತ್ರಕ್ಕಾಗಿ ಮನೋಹರ್ ಎಸ್ ದೊಡ್ಡಮನಿ ಬರೆದಿರುವ “ಕಣ್ಣನೋಟಕ್ಕೆ ಕಣ್ಣಾಗಿ ಬಂದಳು”ಎಂಬ ಯುಗಳಗೀತೆಗೆ ಗಾಯನದ ಮೂಲಕ ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ.

ಪ್ರದೀಪ್ ಎಸ್ ವರ್ಮ ಸಂಗೀತ ನೀಡಿದ್ದಾರೆ. ಸದ್ಯದಲ್ಲೇ ಈ ಹಾಡು ಬಿಡುಗಡೆಯಾಗಲಿದೆ. ಸಾಯಿ ರಮೇಶ್ ಪೆÇ್ರಡಕ್ಷನ್ ಲಾಂಛನದಲ್ಲಿ ಕೆ.ರಮೇಶ್, ಬಿ.ಭೈರಪ್ಪ ಮೈಸೂರು, ಚೇತನ್ ಎಸ್ ರಮೇಶ್ ನಿರ್ಮಾಣ ಮಾಡಿದ್ದಾರೆ

ನಿರ್ದೇಶಕ ರಾಮ್ ಜನಾರ್ದನ್ ಮಾತನಾಡಿ ” ಭಗೀರಥ” ಚಿತ್ರದ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮೈಸೂರು, ಮಡಿಕೇರಿ, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಟೀಸರ್ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ನಮ್ಮ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ. ಅಕುಲ್ ನೃತ್ಯ ನಿರ್ದೇಶನ, ಸೂರಿ ಚಿತ್ತೂರು ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಹಾಗೂ ಮೋಹನ್ ರಾಸು ಅವರ ಸಹ ನಿರ್ದೇಶನ “ಭಗೀರಥ” ಚಿತ್ರಕ್ಕಿದೆ.

ಜಯಪ್ರಕಾಶ್, ಚಂದನ ರಾಘವೇಂದ್ರ, ಧೀನಾ ಉಪಡ, ರೂಪ, ನಿಸರ್ಗ ಅಣ್ಣಪ್ಪ, ಶಶಿಧರ್, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಬಾಲ ರಾಜವಾಡಿ, ನಯನ, ಸುರಭಿ ರವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin