ಕೇಸ್ ಆಫ್ ಕೊಂಡಾಣ : ಕೊಲೆಗಳ ತನಿಖೆಯ ಸುತ್ತ ಮನಮಿಡಿಯುವ ಕಥನ

ಚಿತ್ರ: ಕೇಸ್ ಆಫ್ ಕೊಂಡಾಣ
ನಿರ್ದೇಶನ: ದೇವಿಪ್ರಸಾದ್ ಶೆಟ್ಟಿ
ತಾರಾಗಣ: ವಿಜಯ್ ರಾಘವೇಂದ್ರ, ಭಾವನ ಮೆನನ್, ಖುಷಿರವಿ, ರಂಗಾಯಣ ರಘು, ಬಾಲರಾಜವಾಡಿ, ಸುಂದರ್ ರಾಜ್, ಪೆಟ್ರೋಲ್ ಪ್ರಸನ್ನ, ಅಶ್ವಿನ್ ಹಾಸನ್ ಮತ್ತಿತರರು.
ರೇಟಿಂಗ್: **** 4/5

ಸರಣಿ ಕೊಲೆಗಳ ಸುತ್ತ ನಡೆಯುವ ತನಿಖೆಯ ರೋಚಕ ಕಹಾನಿಯ ಜೊತೆ ಜೊತೆಗೆ ಅನಾರೋಗ್ಯ ಪೀಡಿತ ಮಗನ ಆಸ್ಪತ್ರೆ ಖರ್ಚಿಗೆ ಹಣ ಹೊಂದಿಸಲು ಪರದಾಡುವ ಪಾನಿಪುರಿ ಅಂಗಡಿಯವನ ಮನಮಿಡಿಯುವ ಕಥನ ಕುತೂಹಲ ಭರಿತ ಚಿತ್ರ “ ಕೇಸ್ ಆಫ್ ಕೊಂಡಾಣ”.
ಮಗನಿಗಾಗಿ ಮಿಡಿಯುವ ತಂದೆ, ತಂದೆ ಮಗಳ ಬಾಂಧವ್ಯ, ಎಗ್ಗಿಲ್ಲದೆ ನಡೆಯುವ ಸರಣಿ ಕೊಲೆ, ತಮ್ಮ ಮುಂದೆ ಪೊಲೀಸರ ಆಟ ಏನೂ ನಡೆಯುದು ಎನ್ನುವ ಪುಂಡರ ದರ್ಪ, ಆಗಷ್ಟೇ ಪೊಲೀಸ್ ಇಲಾಖೆಗೆ ಸೇರಿದ ಬಿಸಿ ರಕ್ತದ ಹುಡಗನ ಕೋಪ,ತಾಪ ಪ್ರತಾಪದ ನಡುವೆ ಸಾಗಿರುವ ಚಿತ್ರ ಪ್ರೇಕ್ಷಕರನ್ನು ಬೆರಳ ತುದಿ ಮೇಲೆ ನಿಲ್ಲಿದೆ.
ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ವಿಭಿನ್ನ ಕಥೆಯನ್ನು ಮುಂದಿಟ್ಟುಕೊಂಡು ಪೊಲೀಸರ ತನಿಖೆಯ ಹಾದಿಯಲ್ಲಿ ನಡೆಯುವ ಕುತೂಹಲದ ವಿಷಯಗಳನ್ನು ಇರುವುದರಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.

ಪೊಲೀಸ್ ಇಲಾಖೆಗೆ ಎಎಸ್‍ಐ ಆಗಿ ಕೆಲಸಕ್ಕೆ ಸೇರಿದ ವಿಲ್ಸನ್- ವಿಜಯ್ ರಾಘವೇಂದ್ರ, ಕೆಸಲ ಕೊಡಿಸಿದವರಿಗೆ ದುಡ್ಡು ಹೊಂಚಲು ಹರಹಾಸ ಪಡುತ್ತಾನೆ. ವೈದ್ಯೆ ಖುಷಿ ರವಿ ಮೇಲೆ ಪ್ರೀತಿ ಇದ್ದರೂ ಧರ್ಮ ಮದುವೆಗೆ ಅಡ್ಡಿಯಾಗುತ್ತೆ.ಹಾಗಂತ ಕಿಂಚಿತ್ತೂ ಪ್ರೀತಿಯ ಕೊರತೆ ಕಾಣದು. ಇತ್ತ ಸರಣಿ ಕೊಲೆಗಳನ್ನು ಬೆನ್ನತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ ಲಕ್ಷ್ಮಿ- ಭಾವನಾ ಮೆನನ್ ದುಷ್ಟರನ್ನು ಪತ್ತೆ ಹಚ್ಚಿ ಹೆಡೆ ಮುರಿಕಟ್ಟಲು ಪಣತೊಟ್ಟಾಕೆ.
ಅನಿರೀಕ್ಷಿತವಾಗಿ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾದ ವ್ಯಕ್ತಿ, ಆತನ ಸಾವಿಗೆ ಕಾರಣರಾದ ವಿಲ್ಸನ್ ಶವವನ್ನು ಸುಟ್ಟುಹಾಕಲು ಹೊರಟಾಗ ನಡೆಯುವ ಎದುರಾಗುವ ಅಡೆ ತಡೆ, ಸಂಕಷ್ಟ,ಸರಮಾಲೆ, ಅದನ್ನು ಮೆಟ್ಟಿ ನಿಂತು ಸೆಡ್ಡು ಹೊಡೆದ ಮಂದಿ ಮಟ್ಟಹಾಕುವ ರೋಚಕತೆಯ ಕಹಾನಿ ಬೆರಗು ಮೂಡಿಸಿದೆ. ಮುಂದೆ ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಅದರ ಮಜವೇ ಬೇರೆ.
ಯಾರೆಲ್ಲ ಹೇಗೆ?
ನಟ ವಿಜಯ್ ರಾಘವೇಂದ್ರ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನಿರೀಕ್ಷಿತವಾಗಿ ಆದ ಕೊಲೆಯಿಂದ ಪಾರಾಗಲು ಪರದಾಡುವ ರೀತಿ, ಪೊಲೀಸ್ ಇಲಾಖೆಯಲ್ಲಿದ್ದರೂ ಸತ್ಯ ಗೊತ್ತಾಗಬಾರದು ಎಂದು ಅವರ ಚಾಕಚಕ್ಯತೆ ಮೂಲಕ ತಾವೊಬ್ಬ ಪರಿಪೂರ್ಣ ಕಲಾವಿದ ಎನ್ನುವುದನ್ನು ನಿರೂಪಿಸಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಭಾವನಾ ಮೆನನ್ ಖಡಕ್ ಮಾತು,ಕತೆ, ತಂದೆ ಸೇರಿದಂತೆ ಪೊಲೀಸರ ಸಾವಿಗೆ ಸೇಡು ತೀರಿಸಿಕೊಳ್ಳುಲ ಪಣ ತೊಟ್ಟು ಪಾತ್ರಕ್ಕೆ ಜೀವತುಂಬಿದ್ದಾರೆ. ಇನ್ನೂ ಖುಷಿ ರವಿ,ರಂಗಾಯಣ ರಘು, ಬಾಲರಾಜವಾಡಿ, ಪೆಟ್ರೋಲ್ ಪ್ರಸನ್ನ, ಅಶ್ವಿನ್ ಹಾಸನ್ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿದ್ದಾರೆ
ಜೋಗಿ ಅವರ ಸಂಭಾಷಣೆ, ಗಗನ್ ಬಡೇರಿಯಾ ಹಿನ್ನೆಲೆ ಸಂಗೀತ , ವಿಶ್ವಜಿತ್ ರಾವ್ ಕ್ಯಾಮರ ಚಿತ್ರಕ್ಕೆ ಪೂರಕವಾಗಿದೆ.

ಅದು ಹಾಗೆ ಇರಬೇಕಾಗಿತ್ತು. ಹೀಗಿರಬೇಕಾಗಿತ್ತು ಎನ್ನುವುದು ಸೇರಿದಂತೆ ಲಾಜಿಕ್ ಬದಿಗಿಟ್ಟು ನೋಡಿದರೆ ತನಿಖಾ ಕಥನದ ರೋಹಕ ಅನುಭವ ತಮ್ಮದಾಗಿಸಿಕೊಳ್ಳಬಹುದು.