ಕಾಂತಾರ ಚಾಪ್ಟರ್-1 ಸೆಟ್‍ನಲ್ಲಿ 4-5 ಬಾರಿ ಹೋಗಿಬಿಡಬೇಕಾಗಿತ್ತು: ದೈವ ಬಲದಿಂದ ಬದುಕಿದ್ದೇನೆ- ನಟ ರಿಷಬ್ ಶೆಟ್ಟಿ ಭಾವುಕ

“ಕಾಂತಾರ ಚಾಪ್ಟರ್ 1 “ಚಿತ್ರೀಕರಣ ಸೆಟ್‍ನಲ್ಲಿಹಾಗಾಯಿತು ಹೀಗಾಯಿತು ಅಂತಾರೆ..ಲೆಕ್ಕ ಹಾಕಿದ್ದರೆ ಕಾಂತಾರ ಸೆಟ್‍ನಲ್ಲಿ ನಾಲ್ಕರಿಂದ ಐದು ಬಾರಿ ಹೋಗಿ ಬಿಡಬೇಕಾಗಿತ್ತು, ಬದುಕಿ ಇಡೀ ಸಿನಿಮಾ ಪೂರ್ಣಗೊಳಿ ತಂಡದ ಜೊತೆ ನಿಂತಿದ್ದೇನೆ ಅಂದರೆ ಬೆನ್ನ ಹಿಂದೆ ನಿಂತಿರುವುದು ದೈವ. ಆ ದೈವ ಇಡೀ ತಂಡಕ್ಕೆ ಆಶೀರ್ವಾದವಿತ್ತು, ಹಾಗಿ ಎಲರೆದುರು ನಿಲ್ಲುವಂತಾಗಿದೆ…”

ಹೀಗಂತ ಹೇಳಿ ಒಮ್ಮೆ ಭಾವುಕರಾದರೂ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರೀಕರಣ ಮುಗಿಸಿ ಕಳೆದ 15 ದಿನಗಳ ಹಿಂದೆ ಬೆಂಗಳೂರಿಗೆ ಬಂದೆ., ನಾನು ಬಂದಿರುವುದು ಹಲವರಿಗೆ ಗೊತ್ತಾಯಿತು , ಎಲ್ಲರೂ ಹೇಗಿದ್ದೀರಾ ಅಂತ ಕೇಳಿದ್ರು, ಆ ಮಾತು ಕೇಳಬೇಡಿ, ಕೇಳಿದ್ರೆ ಅತ್ತು ಬಿಡುತ್ತೇನೆ ಎಂದೆ
ಕಾಂತಾರ ಚಾಪ್ಟರ್-1 ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಅಡೆ ತಡೆ, ನೋವು, ಸಂಕಷ್ಟಗಳನ್ನು ಪಕ್ಕಕ್ಕೆ ಇಟ್ಟು ಸಿನಿಮಾ ಮುಗಿಸಿದ್ದೇವೆ, ಸಿನಿಮಾ ಮೂರು ವರ್ಷದದ್ದು ಅಲ್ಲ ಐದು ವರ್ಷದ ಪಂಚವಾರ್ಷಿಕ ಯೋಜನೆ, ಈ ಸಮಯದಲ್ಲಿ ನನ್ನ ಜೊತೆ ಬೆನ್ನೆಲುಬಾಗಿ ನಿಂತ ನಿರ್ಮಾಪಕ ವಿಜಯ್ ಕಿರಂಗದೂರು ಸೇರಿದಂತೆ ಇಡೀ ತಂಡಕ್ಕೆ ನಾನು ಚಿರಋಣಿ.
ಕಾಂತಾರ ಚಾಪ್ಟರ್ -1 ಚಿತ್ರ ಅಕ್ಟೋಬರ್ 2 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ, ಈ ಹಿನ್ನೆಲೆಯಲ್ಲಿ 7 ಭಾಷೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಬಳಿಕ ನಟ, ನಿರ್ದೇಶಕ ರಿಷಬ್ ಮಾತು ಹಂಚಿಕೊಂಡಿದ್ದಾರೆ.
ಕಾಂತಾರ ಚಿತ್ರಕ್ಕೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಬಂದಿದೆ, ಚಿತ್ರವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇಷ್ಟು ದೊಡ್ಡ ಸಿನಿಮಾ ಮಾಡಿದ್ದು ಕನ್ನಡದ ಸಿನಿಮಾ ಪ್ರೇಕ್ಷಕರು ಮತ್ತು ಕನ್ನಡದ ಮಾದ್ಯಮಗಳು. ಕಾಂತಾರ ಯಶಸ್ಸಿನ ಬಳಿಕ ಕಾಂತಾರ ಚಾಪ್ಟರ್-1 ತೆರೆಗೆ ತರುತ್ತಿದ್ದೇವೆ. ಚಿತ್ರದ ಪ್ರತಿಯೊಂದು ದೃಶ್ಯದಿಂದ ಇಡಿದು ಇಡೀ ಸನ್ನಿವೇಶವನ್ನು ಅದ್ಬುತವಾಗಿ ಮೂಡಿ ಬರಲು ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರು ಕಾರಣ. ಸಿನಿಮಾ ಹಾಗೆ ಮಾಡಿದ್ದೇವೆ, ಹೀಗೆ ಮಾಡಿದ್ದೇವೆ ಎಂದು ನಾವೇ ಹೇಳಿಕೊಳ್ಳುವುದು ಸರಿಯಲ್ಲ, ಸಿನಿಮಾ ನೋಡಿ ನೀವು ಹೇಳಬೇಕು, ಮಾತನಾಡಬೇಕು..ಆಗ ಅದಕ್ಕೊಂದು ಬೆಲೆ.
ಕಾಂತಾರ ಚಾಪ್ಟರ್-1 ಕಥೆ ಹುಟ್ಟಿದ್ದು ಕಾಂತಾರ ಚಿತ್ರೀರಕಣದ ಸಮಯದಲ್ಲಿ ಜನಪದ ಪುಸ್ತಕ, ಓದು, ಸೇರಿದಂತೆ ಸ್ಥಳೀಯ ಮಾಹಿತಿ ಕಲೆ ಹಾಕಿ ಸಿನಿಮಾ ಮಾಡಿದ್ದೇವೆ. ಮೊದಲೆಲ್ಲಾ 6 ತಿಂಗಳು ಇಲ್ಲವೇ 3 ತಿಂಗಳಿಗೆ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈಗ ಬಹಳಷ್ಟು ತಿಂಗಳುಗಳೇ ಕಳೆದಿದೆ. ಮೊದಲ ಬಾರಿಗೆ ಬೆಂಗಳೂರಿಗೆ ಬಂದ ಅನುಭವವಾಗಿದೆ, ಚಿತ್ರೀಕರಣದ ಸೆಟ್‍ನಲ್ಲಿ ಇದ್ದುದರಿಂದ ಹೊರಗಡೆ ಪ್ರಪಂಚದಲ್ಲಿ ಏನಾಗುತ್ತಿದೆ ಎನ್ನುವುದು ಅಕ್ಷರಷಃ ಗೊತ್ತಿರಲಿಲ್ಲ.

ಪತ್ನಿ ಪ್ರಗತಿ ಬೆನ್ನೆಲುಬು:
ಕಾಂತಾರ ಚಾಪ್ಟರ್-1 ಚಿತ್ರೀಕರಣದ ಸಮಯದಲ್ಲಿ ಪತ್ನಿ ಪ್ರಗತಿಶೆಟ್ಟಿ ಬೆನ್ನೆಲುಬಾಗಿ ನಿಂತಿದ್ದರು, ಚಿತ್ರೀಕರಣದ ಸೆಟ್‍ಗೂ ಬರುತ್ತಿದ್ದರು, ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ ಇಡಿದು ಸಂಪೂರ್ಣ ಜವಾಬ್ದಾರಿ ಆಕೆ ತೆಗೆದುಕೊಂಡಿದ್ರು. ಅಡೆ ತಡೆ ದಾಟಿ ಸಿನಿಮಾ ಪೂರ್ಣಗೊಳ್ಳಲು ನಿರ್ಮಾಪಕ ವಿಜಯ್ ಕಿರಂಗದೂರು ಅವರ ಬೆಂಬಲ ಅಪಾರ, ಮನೆಯ ವಿಷಯಕ್ಕೆ ಬಂದರೆ ಪತ್ನಿ ಪಗತಿ ನೀಡಿದ ಸಾಥ್ ಮರೆಯಲು ಆಗಲ್ಲ,
ಪ್ರತೀ ಬಾರಿ ಚಿತ್ರೀಕರಣಕ್ಕೆ ಹೋದಾಗ ಯಾವುದೇ ಸಮಸ್ಯೆಯಾಗಬಾರದು ಎಂದು ಆಕೆ ಎಷ್ಟು ಹಕರೆ ಕಟ್ಟಿಕೊಂಡಿದ್ದಾರೆ ಲೆಕ್ಕವಿಲ್ಲ, ರಿಸ್ಕಿ ಶಾಟ್‍ಗಳ ಚಿತ್ರೀಕರಣ ಇದ್ದಾಗ ಆಕೆ ಎಲ್ಲಿ ಬೇಜಾರು ನೋವು ಮಾಡಿಕೊಳ್ಳುತ್ತಾಳೋ ಎನ್ನುವ ಕಾರಣಕ್ಕೆ ಚಿತ್ರೀಕರಣದ ಸ್ಥಳಕ್ಕೆ ಬರುವುದನ್ನು ವಿಳಂಬ ಮಾಡಿಸಿದ್ದೇನೆ.
ಕಾಂತಾರ ಚಾಪ್ಟರ್ -1 ಹಿಂದೆ ಇಡೀ ತಂಡ ಭಾಗಿ
ಕಾಂತಾರ ಚಾಪ್ಟರ್-1 ಚಿತ್ರ ನನ್ನೊಬ್ಬನಿಂದ ಮಾತ್ರ ಸಾಧ್ಯವಾಗಿಲ್ಲ, ಇಡೀ ಚಿತ್ರ ಪೂರ್ಣಗೊಂಡು ಬಿಡುಗಡೆ ಹಂತಕ್ಕೆ ಬರಲು ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರು ಕಾರಣ, ಪ್ರತಿಯೊಂದು ವಿಭಾಗದಲ್ಲಿ ಕೆಲಸ ಮಾಡಿದ ಮಂದಿ ಅವರವರ ವಿಭಾಗದಲ್ಲಿ ಅತ್ಯುತ್ತಮವಾದುದನ್ನು ನೀಡಿದ್ದಾರೆ, ಹೀಗಾಗಿಯೇ ಚಿತ್ರ ಮೂಡಿಬಂದಿದೆ.
ಶರು ಮಾಡಿದಾಗ ಸಿನಿಮಾ, ಚಿತ್ರದಲ್ಲಿ ಸಾವಿರಾರು ಜನರು ಕೆಲಸ ಮಾಡಿದ್ದಾರೆ, ಪ್ರತಿಯೊಬ್ಬರಿಗೂ ಧನ್ಯವಾದ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ, ಸಿನಿಮಾ ಅಕ್ಟೋಬರ್2ಕ್ಕೆ ಬಿಡುಗಡೆಯಾಗುತ್ತದೆ ಅಂದರೆ ಅದರ ಹಿಂದಿರುವ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಶ್ರೇಯ ಸಲ್ಲಬೇಕು. ಪ್ರತಿಯೊಂದು ವಿಭಾಗದ ಮಂದಿ ಚಿತ್ರಕ್ಕೆ ದೊಡ್ಡ ಪಿಲ್ಲರ್ ರೀತಿ ಕೆಲಸ ಮಾಡಿದ್ದಾರೆ
ಕುಂದಾಪುರ ಮಿನಿ ಫಿಲ್ಮ್ ಸಿಟಿ
ಕಳೆದ ಐದು ವರ್ಷಗಳಿಂದ ಕುಂದಾಪುರ, ಮದೂರು, ಕೆರಾಡಿ ಸೇರಿದಂತೆ ಅಕ್ಕ ಪಕ್ಕದ ಸ್ಥಳಗಳಲ್ಲಿ ಚಿತ್ರೀಕಣ ಮಾಡಲಾಗಿದ್ದು ಕುಂದಾಪುರ ಮಿನಿ ಫಿಲ್ಮ್ ಸಿಟಿಯಾಗಿ ಮಾರ್ಪಟ್ಟಿದೆ, ಮುಂದೆ ಚಿತ್ರೀಕರಣ ಮಾಡುವ ಮಂದಿ ಹೇಳಿ ಮಾಡಿಸಿದಂತಿದೆ.
ಕಾಂತಾರ ಚಾಪ್ಟರ್-1 ಚಿತ್ರೀಕರಣದ ಸಮಯದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವರು, ಅಕ್ಕ ಪಕ್ಕದ ಗ್ರಾಮಸ್ಥರ ಸಹಕಾರದಿಂದ ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ, ಇದಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಲೇ ಬೇಕು.

ಬಜೆಟ್ ಲೆಕ್ಕಾಚಾರ ಹಾಕಿಲ್ಲ
ವಿಜಯಣ್ಣ (ನಿರ್ಮಾಪಕ ವಿಜಯ್ ಕಿರಂಗದೂರು) ಯಾವುದಕ್ಕೂ ಬಜೆಟ್ ಲೆಕ್ಕ ಹಾಕಿಲ್ಲ, ನನ್ನ ಮೇಲೆ ಮತ್ತು ಚಿತ್ರತಂಡದ ಮೇಲೆ ನಂಬಿಕೆ ಇಟ್ಟು ಸಿನಿಮಾಗೆ ಏನುಬೇಕೋ ಎಲ್ಲವನ್ನೂ ನೀಡಿದ್ದಾರೆ. ಚಿತ್ರೀಕರಣ ಯಾಕೆ ತಡ ಆಯಿತು ಎಂದು ಕೇಳಲಿಲ್ಲ, ಅವರ ನಂಬಿಕೆ ಉಳಿಸಿಕೊಂಡಿದ್ದೇನೆ. ಚಿತ್ರೀಕರಣ ಮುಗಿದ ಮೇಲೆ ಇಡೀ ಚಿತ್ರತಂಡಕ್ಕೆ ಊಟ ಹಾಕಿಸಿದ್ದಾರೆ.
ಚತ್ರೀಕರಣದ ಸಮಯದಲ್ಲಿ ಸುಮಾರು 4 ರಿಂದ 5 ಲಕ್ಷ ಮಂದಿ ಯಷ್ಟು ಸಂಖ್ಯೆಗೆ ಊಟ ಹಾಕಿಸಿದ್ದಾರೆ,ಅದು ವಿಜಯಣ್ಣ ಮತ್ತು ಹೊಂಬಾಳೆ ಸಂಸ್ಥೆಯ ಶಕ್ತಿ, ಚಿತ್ರಕ್ಕಾಗಿ ಕೆಲಸ ಮಾಡಿದ ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’. ಜೊತೆಗೆ ಕಾಂತಾರ ಚಾಪ್ಟರ್-1 ಚಿತ್ರೀಕರಣದಿಂದ ಐದು ವರ್ಷಗಳ ಕಾಲ ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ.
ಸರಿಯಾಗಿ ನಿದ್ದೆ ಮಾಡಿ ಮೂರು ತಿಂಗಳಾಯ್ತ:
ಕಾಂತಾರ ಚಾಪ್ಟರ್ -1 ಚಿತ್ರೀಕರಣ ಮುಗಿದ ನಂತರ ಬಿಡುಗಡೆ ದಿನಾಂಕ ಪ್ರಕಟವಾದ ಮೇಲೆ ಅಂದುಕೊಂಡ ಸಮಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡುವ ಸಲುವಾಗಿ ಸರಿಯಾಗಿ ನಿದ್ದೆ ಮಾಡಿ ಮೂರು ತಿಂಗಳಾಯ್ತು. ದಿನಕ್ಕೆ ಒಂದೋ ಎರಡೋ ಗಂಟೆ ನಿದ್ದೆ ಮಾಡಿದ್ರೆ ಹೆಚ್ಚು, ನನ್ನ ಜೊತೆಗೆ ಇಡೀ ತಂಡ ಇದೇ ರೀತಿ ಕೆಲಸ ಮಾಡಿದೆ.
