ಕೃತಕಬುದ್ದಿಮತ್ತೆ ದೃಶ್ಯಗಳನ್ನು ಸೃಷ್ಠಿಸಬಲ್ಲದೇ ಹೊರತು ನಿರ್ದೇಶಕನ ಅರ್ಥಮಾಡಿಂಡ ಸಂಗತಿಗಳನಲ್ಲ : ನಿರ್ದೇಶಕ ಗಿರೀಶ್ ಕಾಸರವಳ್ಳಿ

ಹೀಗಂತ ಮಾತು ಆರಂಭಿಸಿದರು ಹಿರಿಯ ನಿರ್ದೇಶಕ, ಕನ್ನಡಕ್ಕೆ ತಮ್ಮ ಚಿತ್ರಗಳ ಮೂಲಕ ಅತಿಹೆಚ್ಚು ಚಿನ್ನದ ಪದಕ ತಂದುಕೊಟ್ಟ ಹಿರಿಯ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸವರಳ್ಳಿ.

ಚಿತ್ರರಂಗದಲ್ಲಿ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 3 ರಿಂದ 5ರವೆರೆಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಗಿರೀಶ್ ಕಾಸರವಳ್ಳಿ @50 ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಸಿನಿಮಾ ತಂತ್ರಜ್ಞನ ಮೂಸೆಯಿಂದ ಹುಟ್ಟಲಿದೆ. ಹಿರಿಯ ಸಾಹಿತಿಗಳಾದ ಕುವೆಂಪುಮ ಶಿವರಾಮ ಕಾರಂತ, ಅನಂತಮೂರ್ತಿ ಅಂತವರು ಇರದಿದ್ದರೆ ಸಿನಿಮಾ ಮಾಡಲು ಆಗುತ್ತಿರಲಿಲ್ಲ. ಜೊತೆಗೆ ವಿಶ್ವ ಸಿನಿಮಾಗಳು, ಕನ್ನಡ ಸಾಹಿತ್ಯ ಮತ್ತು ಪುಣೆ ಫಿಲ್ಮ್ ಇನ್‍ಸ್ಟಿಟ್ಯೂಟ್‍ನ ಅನುಭವ ತಮ್ಮ ಸಿನಿಮಾ ದೃಷ್ಟಿಕೋನವನ್ನು ರೂಪಿಸಿವೆ ಎಂದರು

ಜೊತೆಗೆ ಸಂಕಲನ, ಛಾಯಾಗ್ರಹಣ, ಸೌಂಡ್ ಡಿಸೈನ್ ಮತ್ತು ಸಂಗೀತ ಪ್ರತಿಯೊಂದಕ್ಕೂ ತನ್ನದೇ ಆದ ಸೃಜನಶೀಲತೆ ಹಾಗೂ ಸೌಂದರ್ಯಪ್ರಜ್ಞೆ ಇದೆ. ತಮ್ಮ ಅಭಿನಂಧನಾ ಕಾರ್ಯಕ್ರಮ ಸಿನಿಮಾ ಕಲೆಯ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳುವ ಅರ್ಥಪೂರ್ಣ ವೇದಿಕೆಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

50 ಮತ್ತು 75 ಒಂದೇ ವರ್ಷ

ತಮ್ಮ ಅಭಿನಂಧನಾ ಕಾರ್ಯಕ್ರಮ ಆಯೋಜನೆ ಒಪ್ಪಿಕೊಳ್ಳಲು ಮತ್ತೊಂದು ಕಾರಣ. ಚಿತ್ರರಂಗಕ್ಕೆ ಬಂದು 50 ವರ್ಷ ಆಗುವ ಜೊತೆಗೆ ತಮಗೆ 75 ವರ್ಷ . ಒಂದೇ ವರ್ಷದಲ್ಲಿ ಬಂದಿರುವುದು ಒಪ್ಪಿಕೊಳ್ಳಲು ಕೂಡ ಕಾರಣ ಎಂದರು

“ಡಿಸೆಂಬರ್ 3 ನನ್ನ ಹುಟ್ಟಿದ ದಿನ. ಅಂದು ನಾನು 75 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಅಂತಹ ವಿಶೇಷ ದಿನದಂದೇ ಈ ಮೂರು ದಿನಗಳ ಅಭಿನಂದನಾ ಸಮಾರಂಭ ಆರಂಭವಾಗುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ” ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಘಟಶ್ರಾದ್ದ ಚಿತ್ರ ಮಾಡುವ ವೇಳೆ ಶೀರ್ಷಿಕೆ ಕೇಳಿ ಚಿತ್ರೀಕರಣಕ್ಕೆ ಯಾರು ಮನೆ ಕೊಟ್ಟಿರಲಿಲ್ಲ, ಜೊತೆಗೆ ನನ್ನೂರಿನ ಮನೆಯಲ್ಲಿ ಚಿತ್ರೀಕರಣ ಮಾಡಿದ್ದೆ, ನಿರ್ಮಾಪಕ ಸದಾನಂದ ಸುವರ್ಣ ಸಿನಿಮಾ ಮಾಡಲು ಮುಂದೆ ಬಂದಿದ್ದರು. ಆಗ ಸಿನಿಮಾ 60 ಸಾವಿರ ಬಜೆಟ್ ಅಂದುಕೊಂಡಿದ್ದರು. ಅದು 2 ಲಕ್ಷ ಆಗಿತ್ತು. ಚಿತ್ರದ ಹಿಂದೆ ಪ್ರೊಡಕ್ಷನ್ ಡಿಸೈನರ್ ಮತ್ತು ಛಾಯಾಗ್ರಾಹಕರಾದ ರಾಮಚಂದ್ರ ಅವರ ಪಾತ್ರವೂ ಹಿರಿದು ಎಂದು ಹೇಳಿದರು.

ಹೆಂಡತಿ ವಿಮರ್ಶಕಿ

ನನ್ನ ಚಿತ್ರಗಳ ಅತಿದೊಡ್ಡ ವಿಮರ್ಶಕಿ ಪತ್ನಿ ವೈಶಾಲಿ ಕಾಸರವಳ್ಳಿ ಅವರು, ಕಥೆ ಸಿದ್ದವಾದ ಬಳಿಕ ಅವರಿಗೆ ಸ್ಕ್ರಿಪ್ಟ್ ಕೊಡುತ್ತಿದ್ದೆ, ಆಕೆ ಒಪ್ಪಿಕೊಂಡು ಇಷ್ಟಪಟ್ಟರೆ ಮಾತ್ರ ಸಿನಿಮಾ ವಿಷಯದಲ್ಲಿ ಮುಂದುವರಿಯುತ್ತಿದೆ. ನಾವು ಮಾಡುವ ಕಥೆ ಮೊದಲ ನಮಗೆ ಇಷ್ಟವಾಗಬೇಕು, ಪತ್ನಿಯ ಬೆಂಬಲವಿಲ್ಲ, ಯಾವುದನ್ನು ಸಾಧಿಸಲು ಸಾಧ್ಯವಿರುತ್ತಿರಲಿಲ್ಲ, ಕೆಲವೊಮ್ಮೆ
ಬೇಸರ ಆದಾಗ ಸಿನಿಮಾ ಚೆನ್ನಾಗಿ ಬಂದರೆ ಸಾಕು, ಬೇರೆಯದನ್ನು ಮರೆತು ಬಿಡಿ ಎಂದು ಹುರಿದುಂಬಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು

ತಬರನ ಕಥೆಗೆ ನಾಯಕನ ಆಯ್ಕೆ:

ಹಿರಿಯ ನಿರ್ದೇಶಕ ಪಿ, ಶೇಷಾದ್ರಿ ಮಾತನಾಡಿ, ತಬರನ ಕಥೆ ಚಿತ್ರಕ್ಕೆ ನಾಯಕನನ್ನಾಗಿ ಸದಾಶಿವ ಬ್ರಹ್ಮಾವರ ಅವರನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಮೊದಲು ಆಯ್ಕೆ ಮಾಡಿಕೊಂಡಿದ್ದರು. ಅವರು ಚಿತ್ರದಲ್ಲಿ ನಟಿಸಲು ಅದ್ಯಾಕೋ ಹಿಂಜರಿದರು. ಆಗ ಸಿಕ್ಕವರೇ ಚಾರುಹಾಸನ್, ಅವರಿಗೆ ಕಥೆ ಹೇಳಿದಾಗ ನನಗೆ ಭಾಷೆ ಬರುವುದಿಲ್ಲ ಹೇಗೆ ಸಿನಿಮಾ ಮಾಡೋದು ಎಂದರು. ಕೊನೆಗೆ ಕಥೆ ಕೇಳಿ ಒಪ್ಪಿಕೊಂಡಿದ್ದರು. ಅವಾಗ ಅವರಿಗೆ 10 ಸಾವಿರ ಸಂಭಾವನೆ ನೀಡಿದ್ದರು.

ಚಿತ್ರದ ಮಹೂರ್ತಕ್ಕೆ ಚಾರುಹಾಸನ್ ಬಂದಿದ್ದರು, ಅವರು ಇರುವ ಬಣ್ಣ ನೋಡಿ ಇವರು ತಬರನ ಕಥೆಗೆ ಸೂಕ್ತವಾ ಎನ್ನುವ ಪ್ರಶ್ನೆಯೂ ಬಂದಿತ್ತು. ಕಥೆ ಬರೆದಿದ್ದ ಪೂರ್ಣಚಂದ್ರ ತೇಜಸ್ವಿ ಅವರು ಕಥೆ ಬರೆದ ಮೂಲ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿದ್ದರು, ಆಗ ಚಾರು ಹಾಸನ್ ಮೂಲ ತಬರ ಇರುವ ರೀತಿ ನೀತಿ ಕಂಡು ಮುಹೂರ್ತದ ದಿಂದ ಮೈಗೆಲ್ಲ ಕಪ್ಪು ಬಣ್ಣ ಬಳಿದುಕೊಂಡು ಬಂದು ನಿಂತಿದ್ದರು.

ಮುಹೂರ್ತದ ಸಮಯದಲ್ಲಿ ಚಾರು ಹಾಸನ್ ಇಲ್ಲದ್ದನ್ನು ಕಂಡು ಇವರೂ ಕೈ ಕೊಟ್ಟಿರಬೇಕು ಎಂದು ಕೊಳ್ಳಲಾಗಿತ್ತು ಎಲ್ಲರೂ ಚಾರು ಹಾಸನ್ ಎಲ್ಲಿ ಎಂದು ಕೇಳುತ್ತಿರುವಾಗ ಪಕ್ಕದಲ್ಲಿರುವರು , ಇಲ್ಲೇ ಇದ್ದಾರೆ ನೋಡಿ ಎಂದರು, ಮೈಗೆ ಕಪ್ಪು ಬಣ್ಣ ಬಳಿದುಕೊಂಡು ತಬರನ ರೀತಿಯೇ ಕಾಣುತ್ತಿದ್ದರು.,ಅಷ್ಟು ಸಮರ್ಪಣಾ ಭಾವ ತೋರಿದ್ದರು ಎಂದರು

ಮೂಡಿಗೆರೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದ ವೇಲೆ ಮೈಗೆ ಕಪ್ಪು ಬಣ್ಣ ಬಳಿದುಕೊಂಡ ಹಿನ್ನೆಲೆಯಲ್ಲಿ ಚಾರು ಹಾಸನ್ ಎರಡು ಹಾಸಿಗೆ ಮೇಲೆ ಮಲಗುತ್ತಿದ್ದರಂತೆ ಎಂದು ನೆನಪು ಮಾಡಿಕೊಂಡ ಅವರು ಚಿತ್ರಕ್ಕೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಂದಿತ್ತು, ಈಗ ಇತಿಹಾಸ ಎಂದು ಹೇಳಿದರು

Related Posts

ಅಪರಾಧ ತನಿಖೆ ಕುರಿತಾದ ‘ದಂತಕಥೆ’ ಚಿತ್ರ ಬಿಡುಗಡೆಗೆ ಸಿದ್ಧ

ಬಹುನಿರೀಕ್ಷಿತ ಕನ್ನಡದ ಅಪರಾಧ ತನಿಖೆಯ ಕುರಿತ ಥ್ರಿಲ್ಲರ್ ಚಿತ್ರ ‘ದಂತಕಥೆ’ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು ಶೀಘ್ರದಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಚಿತ್ರದಲ್ಲಿ ರಘು ಮುಖರ್ಜಿ, ಕಿಶೋರ್ ಕುಮಾರ್, ಶಶಿ ಕುಮಾರ್, ಯಶಾ ಶಿವಕುಮಾರ್ ಹಾಗೂ ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ…

Rashi Movie Review : ಏಕಮುಖ ಪ್ರೀತಿಯ ಸುತ್ತ ಕಣ್ಣೀರ ಕಥನ “ರಾಶಿ”

ಚಿತ್ರ : ರಾಶಿನಿರ್ದೇಶನ “ ವಿಜಯ್ ಪಾಳೇಗಾರ್ತಾರಾಗಣ; ಆದಿತ್ಯ ಶಶಿಕುಮಾರ್, ಸಮೀಕ್ಷಾ, ತಬಲ ನಾಣಿ, ವೀಣಾ ಸುಂದರ್, ರಮೇಶ್ ಇಂದಿರಾ, ಸಂಗೀತ ಅನಿಲ್, ಮಂಜು ಪಾವಗಡ, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ಭಜರಂಗಿ ಪ್ರಸನ್ನ, ವರ್ಧನ್, ನ್ಯೂಸ್ ಪ್ರಕಾಶ್ ಮತ್ತಿತರರುರೇಟಿಂಗ್ :…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581