Interview: I want to act in good films and roles: Actress Misha Narang

Interview : ಉತ್ತಮ ಚಿತ್ರ, ಪಾತ್ರಗಳಲ್ಲಿ ನಟಿಸುವಾಸೆ: ನಟಿ ಮಿಶಾ ನಾರಂಗ್ - CineNewsKannada.com

Interview : ಉತ್ತಮ ಚಿತ್ರ, ಪಾತ್ರಗಳಲ್ಲಿ ನಟಿಸುವಾಸೆ: ನಟಿ ಮಿಶಾ ನಾರಂಗ್

ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ನಟಿಯರು ಚಿತ್ರರಂಗದಲ್ಲಿ ಭವಿಷ್ಯ ಕಂಡುಕೊಳ್ಳಲು ಚಂದನವನಕ್ಕೆ ಪ್ರವೇಶ ಮಾಡುತ್ತಿದದಾರೆ, ಅವರ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ನಟಿ ಮಿಶಾ ನಾರಂಗ್, ಇತ್ತೀಚೆಗೆ ತೆರೆಕಂಡ ಸರಳ ಸುಬ್ಬರಾಮ್ ಚಿತ್ರದ ಮೂಲಕ ಕನ್ನಡದಲ್ಲಿ ಉತ್ತಮ ನಟಿಯಾಗುವ ಭರವಸೆ ಮೂಡಿಸಿದ್ದಾರೆ.

ರಾಸಾಯನ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಿಶಾ ನಾರಂಗ್, ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ, ಕನ್ನಡದಲ್ಲಿ ಭರವಸೆ ಮೂಡಿಸಿದ್ದಾರೆ, ಉತ್ತಮ ಪಾತ್ರಗಳ ಮೂಲಕ ಜನರ ಮನಸ್ಸಿಗೆ ಮುಟ್ಟುವ ಪಾತ್ರ ಮಾಡುವ ಆಸೆ ಹೊಂದಿದ್ದಾರೆ, ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕ ನಟರಾಗಿದ್ದ ಸರಳ ಸುಬ್ಬರಾವ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದಿದ್ದಾರೆ. ಈ ಕುರಿತು ಈವರೆಗಿನ ಸಿನಿಮಾ ಜೀವನದ ಕುರಿತು ಮುಕ್ತವಾಗಿ ಮಾತು ಹಂಚಿಕೊಂಡಿದ್ದಾರೆ.

• ಮಂಜು ಸ್ವರಾಜ್ ನಿರ್ದೇಶನದ “ಸರಳ ಸುಬ್ಬರಾವ್” ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ.

“ಸರಳ ಸುಬ್ಬರಾವ್” ಚಿತ್ರದಲ್ಲಿನ ಪಾತ್ರಕ್ಕೆ ನಿಜಕ್ಕೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರು ನೀಡುತ್ತಿರುವ ಪ್ರೀತಿಗೆ ಚಿರಋಣಿ. ಅನೇಕರು ನಟನೆ ಮತ್ತು ನಾನು ಪಾತ್ರಕ್ಕೆ ಹೊಂದಿಕೊಂಡ ರೀತಿಗೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ಸರಳ ಸುಬ್ಬರಾವ್, ಕನ್ನಡ ಚಿತ್ರ. ನಟನೆಗೆ ಜನರು ತೋರುತ್ತಿರುವ ಪ್ರೀತಿಗೆ ಆಶ್ಚರ್ಯ ಚಕಿತನಾಗಿದ್ದೇನೆ. ಸಿಕ್ಕ ಪಾತ್ರವನ್ನು ಸೂಕ್ತವಾಗಿ ನಿಬಾಯಿಸಿದ್ದೇನೆ. ಜೊತೆಗೆ ಖುಷಿ ಕೂಡ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

  • ಕನ್ನಡದಲ್ಲಿ ಹೊಸ ಚಿತ್ರಗಳಲ್ಲಿ ಅವಕಾಶ ಬಂದಿದೆಯೇ

ಹೌದು, ಅನೇಕ ಚಿತ್ರಗಳಲ್ಲಿ ನಟಿಸುವಂತೆ ಅವಕಾಶಗಳು ಬರುತ್ತಿವೆ. ಸರಳ ಸುಬ್ಬರಾವ್ ಚಿತ್ರದ ಟ್ರೇಲರ್ ಹಾಗು ಚಿತ್ರ ಬಿಡುಗಡೆಯಾದ ತಕ್ಷಣ ಸಾಕಷ್ಟು ಕರೆಗಳು ಬರುತ್ತಿವೆ, ಉತ್ತಮ ಕಥೆ ಮತ್ತು ಪಾತ್ರಕ್ಕಿರುವ ಪ್ರಾಮುಖ್ಯತೆ ಜೊತೆಗೆ ಒಳ್ಳೆಯ ತಂಡದ ಜೊತೆ ಕೆಲಸ ಮಾಡಲು ಕಾತುರಳಾಗಿದ್ದೇನೆ. ಪ್ರಸ್ತುತ ಕೆಲವು ಕನ್ನಡ ಮತ್ತು ತೆಲುಗು ಚಿತ್ರಗಳ ಆಯ್ಕೆಯಲ್ಲಿ ನಿರತರಾಗಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ

ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಸರಿಯಾದ ಕಥೆ ಆಯ್ಕೆ ಮಾಡುವುದು ನನಗೆ ಬಹಳ ಮುಖ್ಯ. ಇದರಿಂದ ಮುಂದಿನ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ಮೇಲೆ ಅವಲಂಭಿತವಾಗಿದೆ, ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೇನೆ. ಸರಿಯಾದ ಸ್ಕ್ರಿಪ್ಟ್ ಆಯ್ಕೆ ಮಾಡಲು ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಲ್ಲವೂ ಅಂತಿಮಗೊಂಡ ನಂತರ, ಶೀಘ್ರದಲ್ಲೇ ಸಿನಿಮಾಗಳನ್ನು ಪ್ರಕಟಿಸುತ್ತೇನೆ

  • “ಸರಳ ಸುಬ್ಬರಾವ್” ಚಿತ್ರಕ್ಕೆ ನಿಮ್ಮ ಆಯ್ಕೆ ಹೇಗಿತ್ತು,, ಅದರ ಬಗ್ಗೆ ಮಾಹಿತಿ ನೀಡುವುದಾದರೆ

ಸರಳ ಸುಬ್ಬರಾವ್ ಪಾತ್ರ ಹಲವು ಶೇಡ್‍ಗಳನ್ನು ಹೊಂದಿತ್ತು, ಹೀಗಾಗಿ ನಿರ್ದೇಶಕ ಮಂಜು ಸ್ವರಾಜ್ ಚಿತ್ರದ ಕಥೆ ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಚಿಕ್ಕ, ಮುಗ್ಧ ಹುಡುಗಿಯಾಗಿದ್ದರಿಂದ ಹೆಂಡತಿಯಾಗುವವರೆಗೆ ಮತ್ತು ಅಂತಿಮವಾಗಿ ತಾಯ್ತನ ಸ್ವೀಕರಿಸುವವರೆಗೆ, ವಿಭಿನ್ನವಾದ ಪಾತ್ರ. ಜೀವನದ ಹಲವಾರು ಹಂತಗಳ ಬಂದುಹೋಗುತ್ತವೆ, ಕನ್ನಡದ ಮೊದಲ ಚಿತ್ರದಲ್ಲಿ ಇಷ್ಟೊಂದಯು ಬಗೆಯ ಪಾತ್ರ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಒಂದೇ ಚಿತ್ರದಲ್ಲಿ ಹಲವು ಭಾವನೆಗಳನ್ನು ಚಿತ್ರಿಸುವುದು ಮತ್ತು ನಟಿಸುವುದು ಸವಾಲು ಮತ್ತು ಸುಂದರ ಅವಕಾಶ. ಜೊತೆಗೆ ಚಿತ್ರದ ಕಥೆ ಸ್ತ್ರೀ ಪಾತ್ರದ ಸುತ್ತ ಕೇಂದ್ರೀಕೃತವಾಗಿದೆ, ಇದರಿಂದ ನಟನಾ ಕೌಶಲ್ಯ ಪ್ರದರ್ಶಿಸಲು ಸಹಕಾರಿಯಾಯಿತು

  • ನಟ ಅಜಯ್ ರಾವ್ ಮತ್ತು ನಿರ್ದೇಶಕ ಮಂಜು ಸ್ವರಾಜ್ ಅವರಿಂದ ನೀವು ಕಲಿತಿದ್ದೇನು.

ನಟ ಅಜಯ್ ರಾವ್ ಅವರೊಂದಿಗೆ ಕೆಲಸ ಮಾಡುವುದು ಉತ್ತಮ ಕಲಿಕೆಯ ಅನುಭವವಾಗಿತ್ತು. ಅವರ ವರ್ಷಗಳ ಅನುಭವದಿಂದ, ನಟನೆಯ ಸೂಕ್ಷ್ಮ ವಿವರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು, ನಟನೆಯ ಬಗ್ಗೆ ಬಹಳಷ್ಟು ಕಲಿತಿದ್ದೇನೆ. ಪಾತ್ರಕ್ಕೆ ಅವರು ನೀಡುವ ಕಾಳಜಿ ಮತ್ತು ಮುತುವರ್ಜಿ ನನ್ನನ್ನು ಇನ್ನಷ್ಟು ಉತ್ತೇಜಿಸುವಂತೆ ಮಾಡಿತು. ಜೊತೆಗೆ ನಿರ್ದೇಶಕ ಮಂಜು ಸ್ವರಾಜ್ ಅವರಿಂದ ಚಿತ್ರದ ಬಗೆಗಿನ ಸ್ಪಷ್ಟತೆ ಮತ್ತು ದೃಷ್ಟಿಕೋನದ ಮಹತ್ವ ಕಲಿತಿದ್ದೇನೆ. ಸರಳ ಪಾತ್ರ ಹೇಗೆ ವರ್ತಿಸಬೇಕು ಮತ್ತು ಭಾವನೆ ವ್ಯಕ್ತಪಡಿಸಬೇಕು ಎನ್ನುವುದನ್ನು ಕಲಿಯಲು ಸಹಕಾರಿಯಾಯಿತು. ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ ಹಿನ್ನಲೆ ಕಲಿಕೆಗೆ ಉತ್ತಮ ಅವಕಾಶವಾಗಿತ್ತು. ಜೊತೆಗೆ ಚಿತ್ರೀಕರಣದ ಸೆಟ್‍ನಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿದ್ದರಿಂದ ಎಲ್ಲಿಯೂ ಯಾವುದೂ ಸಮಸ್ಯೆಯಾಗದಂತೆ ಚಿತ್ರೀಕರಣ ಸಾಗಿತು.

• ಚಿತ್ರ ಪ್ರಯಾಣದ ಆರಂಭ ಹೇಗಾಯಿತು. ಇದರ ಬಗ್ಗೆ ಮಾಹಿತಿ ನೀಡುವುದಾದರೆ

ಸಿನಿಮಾ ರಂಗಕ್ಕೆ ಬಂದದ್ದೇ ಆಸಕ್ತಿಕರ ಪ್ರಯಾಣ, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಪಿಎಚ್‍ಡಿಗೆ ದಾಖಲಾಗುವ ಹಂತದಲ್ಲಿದ್ದೆ. ಆದರೆ ಬಾಲ್ಯದಿಂದಲೂ, ಯಾವಾಗಲೂ ಸಿನಿಮಾ ಅಂದರೆ ಅಚ್ಚುಮೆಚ್ಚು. ಕುಟುಂಬದ ಸಭೆ ಸಮಾರಂಭಗಳಲ್ಲಿ ಮನರಂಜನಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದೆ, ಹೀಗಾಗಿ ವೇದಿಕೆ ಭಯ ಇರಲಿಲ್ಲ. ಸಿನಿಮಾ ಮೇಲೆ ಮೊದಲಿನಿಂದಲೂ ಆಸಕ್ತಿ ಇದ್ದುದರಿಂದ ಸಿನಿಮಾ ಆಡಿಷನ್ ಮಾಡಲು ಪ್ರಾರಂಭಿಸಿದೆ. ಮೊದಲ ಕೆಲವು ಆಡಿಷನ್‍ಗಳು ನಿಜವಾಗಿಯೂ ಚೆನ್ನಾಗಿ ನಡೆದವು, ನಿಜವಾಗಿಯೂ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಕುತೂಹಲಕಾರಿ ಸಂಗತಿ ಎಂದರೆ ಆರಂಭದಲ್ಲಿ ಸಿನಿಮಾ ಆಡಿಷನ್ ಕೊಡುತ್ತಿದ್ದೇನೆ, ಮನೆಯವರಿಗೆ ಹೇಳುವ ಮುನ್ನ ಏನಾದರೂ ಸಾಧಿಸಬೇಕು ಎನ್ನುವ ಹಠ ನನ್ನಲ್ಲಿತ್ತು . ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದಾಗ ಕುಟುಂಬದ ಸದಸ್ಯರು ಖುಷಿಪಟ್ಟರು.

• ಸಿನಿಮಾಗೆ ಬರುವ ಮುನ್ನ ನಟನಾ ಶಾಲೆಯಲ್ಲಿ ಕಲಿತಿದ್ದೀರಾ

ಯಾವುದೇ ನಟನಾ ಶಾಲೆಯಲ್ಲಿ ತರಬೇತಿ ಪಡೆದಿಲ್ಲ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ. ಶಾಲಾ ಮತ್ತು ಕಾಲೇಜು ದಿನಗಳಲ್ಲಿ, ರಂಗಭೂಮಿ, ನೃತ್ಯ ಮತ್ತು ರಂಗ ಪ್ರದರ್ಶನಗಳಲ್ಲಿ ತುಂಬಾ ಸಕ್ರಿಯನಾಗಿದ್ದೆ.ಕಾಲೇಜಿನಲ್ಲಿ, ಸ್ನೇಹಿತರು ಮತ್ತು ನಮ್ಮದೇ ಆದ ನಾಟಕಗಳನ್ನು ಬರೆದು ಪ್ರದರ್ಶಿಸುತ್ತಿದ್ದೆ. ಫ್ಯಾಷನ್ ಶೋಗಳಲ್ಲಿಯೂ ಭಾಗವಹಿಸಿದ್ದೆ, ವೇದಿಕೆಯಲ್ಲಿ ನಟಿಸಲು ತುಂಬಾ ನೆರವಾಯಿತು, ಇದರಿಂದ ಕ್ಯಾಮರಾ ಮುಂದೆ ನಟಿಸಲು ಯಾವುದೇ ಭಯ ಆಗಲಿಲ್ಲ, ಬದಲಾಗಿ ಆತ್ಮ ವಿಶ್ವಾಸ ಹೆಚ್ಚುವಂತೆ ಮಾಡಿದೆ.

• ಕನ್ನಡ ನಟ ದೀಕ್ಷಿತ್ ಶೆಟ್ಟಿ ಅವರೊಂದಿಗೆ ತೆಲುಗು ಚಿತ್ರ “ಶಬರಾ”ದಲ್ಲಿ ನಟಿಸಿದ್ದೀರಾ?. ಅದರ ಬಗ್ಗೆ ಮಾಹಿತಿ ನೀಡುವುದಾದರೆ

ಹೌದು, ಈ ತೆಲುಗು ಚಿತ್ರ ಶಬರಾದಲ್ಲಿ ದೀಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿದ್ದೇನೆ, ಚಿತ್ರೀಕರಣದ ಅಂತಿಮ ಹಂತದಲ್ಲಿದ್ದೇವೆ, ಸ್ವಲ್ಪ ಪ್ಯಾಚ್‍ವರ್ಕ್ ಮಾತ್ರ ಉಳಿದಿದೆ.ಈ ಚಿತ್ರವೂ ಕೂಡ ಹಲವು ಶೇಡ್‍ಗಖನ್ನು ಹೊಂದಿದೆ, ಸುಂದರವಾದ, ಭವ್ಯವಾದ ದೃಶ್ಯ ಜೊತೆಗೆ ಉತ್ತಮ ಕಥೆಯನ್ನು ಚಿತ್ರ ಒಳಗೊಂಡಿದೆ ನಟ ದೀಕ್ಷಿತ್ ಜೊತೆ ಕೆಲಸ ಮಾಡುವುದು ಅದ್ಭುತವಾಗಿದೆ, ಪ್ರತಿಭಾನ್ವಿತ ನಟ. ಹಿನ್ನೆಲೆ ಸಂಗೀತ, ಒಳ್ಳೆಯ ಕಥೆ, ಮತ್ತು ಕಲಾವಿದರನ್ನು ಚಿತ್ರ ಒಳಗೊಂಡಿದೆ. ಶಬರ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ,ಆ ಕ್ಷಣಕ್ಕಾಗಿ ಕಾಯುತ್ತಿದ್ದೇವೆ

• ಈವರೆಗೆ ಎಷ್ಟು ಚಿತ್ರಗಳಲ್ಲಿ ನಟಿಸಿದ್ದೀರಿ ಮತ್ತು ಎಷ್ಟು ಭಾಷೆಗಳು. ಯಾವ ಚಿತ್ರ ನಿಮ್ಮನ್ನು ಹೆಚ್ಚು ಗುರುತಿಸಿದೆ.

ಈವೆರೆಗೆ ಮೂರು ತೆಲುಗು ಚಿತ್ರಗಳಲ್ಲಿ ಮತ್ತು ಒಂದು ಕನ್ನಡ ಚಿತ್ರದಲ್ಲಿ ನಟಿಸಿದ್ದೇನೆ, ತೆಲುಗು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಕೆಲಸ ಮಾಡಿದ್ದೇನೆ. ಮೊದಲ ಚಿತ್ರ, ತೆಲ್ಲವರಿತು ಗುರುವರಂ, ನನಗೆ ಉತ್ತಮ ಹೆಸರು ನೀಡಿತು ಅದು ಯಾವಾಗಲು ನನಗೆ ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿದೆ. ಈಗ, ಕನ್ನಡದ ಮೊದಲ ಚಿತ್ರ ಸರಳ ಸುಬ್ಬರಾವ್ ಕೂಡ ಪ್ರೇಕ್ಷಕರಿಂದ ನನಗೆ ಬಹಳಷ್ಟು ಪ್ರೀತಿ ಮತ್ತು ಮನ್ನಣೆ ಪಡೆದಿದೆ, ಇದು ಖುಷಿಯ ವಿಷಯ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin