“ದಿ ರೈಸ್ ಆಫ್ ಅಶೋಕ” ಸಿನಿಮಾ ಹುಚ್ಚು ಹಿಡಿದಿತ್ತು -ನಟ ಸತೀಶ್ ನೀನಾಸಂ
“ದಿ ರೈಸ್ ಆಫ್ ಅಶೋಕ” ಚಿತ್ರವನ್ನು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲು ಮುಂದಾಗುತ್ತಿದ್ದಂತೆ ಚಿತ್ರರಂಗದ ಕೆಲವರು ಇವನಿಗೆ ಕೆಜಿಎಫ್, ಕಾಂತಾರಾ ಚಿತ್ರದ ಹುಚ್ಚು ಹಿಡಿದಿದೆ ಅಂತ ಮಾತನಾಡಿಕೊಂಡರು, ನನಗೆ ನನ್ನ ಸಿನಿಮಾದ ಹುಚ್ಚು ಹಿಡಿದಿತ್ತು, ಹೀಗಾಗಿಯೇ ಪರಭಾಷೆಯಲ್ಲಿ ಬಿಡುಗಡೆಗೆ ಮುಂದಾದೆ…”

ಹೀಗಂತ ಭಾವುಕರಾದರು ನಟ, ನಿರ್ಮಾಪಕ ಸತೀಶ್ ನೀನಾಸಂ. “ದಿ ರೈಸ್ ಆಫ್ ಅಶೋಕ” ಚಿತ್ರ ಫೆಬ್ರವರಿ 27 ರಂದು ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಸಿನಿಮಾ ಮೇಲಿನ ಪ್ರೀತಿ, ನಿಷ್ಠೆ ಎರಡೂವರೆ ವರ್ಷಗಳ ಅವಧಿಯಲ್ಲಿ ಎದುರಿಸಿದ ಯಾತನಮ ನೋವು, ದು:ಖ ದುಮ್ಮಾನಕ್ಕೆ ಕೈಗನ್ನಡಿ ಹಿಡಿದಂತಿತ್ತು.
ಪರಭಾಷೆಯಲ್ಲಿ ಬಿಡುಗಡೆ ಸಿನಿಮಾದ ಶಕ್ತಿ ಕಾರಣ:
ಟ್ರೈಲರ್ ಬಿಡುಗಡೆಗೆ ಬರಬೇಕೆಂದು ಹಿರಿಯರಾದ ರವಿಚಂದ್ರನ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ದಿಗಂತ್, ವಸಿಷ್ಠ ಎನ್ ಸಿಂಹ, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಲವು ನಟರನ್ನು ಕೇಳಿದ ತಕ್ಷಣ ಪ್ರೀತಿಯಿಂದ ಬಂದು ಟ್ರೈಲರ್ ಬಿಡುಗಡೆ ಮಾಡಿದ್ದಾರೆ, ಅವರೆಲ್ಲರ ಪ್ರೀತಿಗೆ ಅಬಾರಿಯಾಗಿದ್ದೇನೆ. ತೆಲುಗು, ತಮಿಳು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ನಮ್ಮ ಸಿನಿಮಾ ಮೇಲಿನ ವಿಶ್ವಾಸದ ಪ್ರತೀಕಕ್ಕೆ ಸಾಕ್ಷಿ, ನಮ್ಮ ಸಿನಿಮಾ ಬೆಳಿಬೇಕು ಎನ್ನುವುದು ನನ್ನ ಆಶಯ ಎಂದರು ನಟ ಸತೀಶ್ ನೀನಾಸಂ

ಆಂದ್ರ ಪ್ರದೇಶ, ತೆಲಂಗಾಣ ಮತ್ತು ತಮಿಳಿನಾಡಿನಲ್ಲಿ ತಲಾ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅಲ್ಲಿನ ವಿತರಕರು ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನಿರ್ಮಾಪಕರ ಹಣ ಹಾಕಿಸಿಲ್ಲ, ವಿತರಕರೇ ಮುಂದೆ ಬಂದಿದ್ಧಾರೆ ಎಂದರೆ ಸಿನಿಮಾ ಮೇಲಿನ ತಾಕತ್ತು ಮತ್ತು ಶಕ್ತಿ ಕಾರಣ. ಎರಡೂವರೆ ವರ್ಷದ ಅವಧಿಯಲ್ಲಿ ಸಮಸ್ಯೆಗೆ ಸಿಲುಕಿದ್ದ ವೇಳೆ ಮನು ಶೆಡ್ಗರ್ ಜೊತೆ ನಿಂತು ಹಗಲು ರಾತ್ರಿ ಕೆಲಸ ಮಾಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ನಿರ್ದೇಶಕ ವಿನೋದ್ ದೋಂಡಳೆ ಪರಿಶ್ರಮ;
ದಿ ರೈಸ್ ಆಫ್ ಅಶೋಕ ಚಿತ್ರ ಬಿಡುಗಡೆ ಆದ ನಂತರ ಮುಂದಿನ ಚಿತ್ರಗಳಿಗೆ 20 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತೀಯ ಎಂದು ನಿರ್ದೇಶಕ ವಿನೋದ್ ದೋಂಢಳೆ ಹೇಳುತ್ತಿದ್ದರು. ಸಿನಿಮಾ ಇಷ್ಟೊಂದು ಅದ್ಬುತವಾಗಿ ಮೂಡಿ ಬರಲು ಅವರೇ ಕಾರಣ, ಅವರು ಜೊತೆ ಇದ್ದಿದ್ದರೆ ಇನ್ನಷ್ಟು ಖುಷಿ ಆಗುತ್ತಿತ್ತು ಎಂದು ಸ್ಮರಿಸಿಕೊಂಡರು ನಟ ಸತೀಶ್.

ಚಿತ್ರದಲ್ಲಿ ಸಂಪತ್ ಮೈತ್ರೇಯಾ, ಬಿ, ಸುರೇಶ್, ರವಿಶಂಕರ್ ಸೇರಿದಂತೆ ಹಲವು ಕಲಾವಿದರು ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಶ್ರಮ ಹಾಕಿ ಕೆಲಸ ಮಾಡಿದ್ದಾರೆ, ಅದರಲ್ಲಿಯೂ ಸಂಪತ್ ಮೈತ್ರೇಯಾ ಪಾತ್ರ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಮಗಳು ನನ್ನ ತಾಯಿ
ಇದೇ ಮೊದಲ ಬಾರಿಗೆ ಮಗಳು ಮನಸ್ವಿಕಾ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದಾಳೆ, ಅವಳು ನನ್ನ ತಾಯಿ ಎನ್ನುತ್ತಲೇ ಭಾವುಕರಾದರು ನಟ ಸತೀಶ್ ನೀನಾಸಂ.
ಟ್ರೈಲರ್ ಬಿಡುಗಡೆ ಮಾಡಿದ ಮಗಳು ಭಾವುಕರಾಗಿದ್ದನ್ನು ಕಂಡು ನನ್ನನ್ನೂ ಭಾವುಕಳನ್ನಾಗಿ ಮಾಡಿದಳು. ಮೊದಲ ಬಾರಿಗೆ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದಾಳೆ ಎಂದರು

ಹಿರಿಯರು ಹಾಕಿ ಕೊಟ್ಟ ದಾರಿ:
ದಿ ರೈಸ್ ಆಫ್ ಅಶೋಕ ಚಿತ್ರಕ್ಕಾಗಿ ಶ್ರಮ ಪಟ್ಟಿದ್ದೇನೆ, ಇದು ಚಿತ್ರರಂಗದ ಹಿರಿಯರಾದ ರವಿಚಂದ್ರನ್ ಹಾಕಿಕೊಟ್ಟ ದಾರಿ, ಈ ಹಿಂದೆ ಶಾಂತಿ ಕ್ರಾಂತಿ ಸೇರಿದಂತೆ ಅನೇಕ ಸಿನಿಮಾಗಳನ್ನು ರಿಸ್ಕ್ ತೆಗೆದುಕೊಂಡು ಮಾಡಿದ್ದಾರೆ. ಸೋತಿದ್ದಾರೆ, ಗೆದ್ದಿದ್ದಾರೆ,ಅವರ ಕೆಲಸ ನಮಗೆ ಸ್ಪೂರ್ತಿ ಎಂದರು ಸತೀಶ್.
ಸಪ್ತಮಿಗೌಡ ಕೂಡ ನಾಯಕ
ಚಿತ್ರಕ್ಕೆ ನಾನೊಬ್ಬನೇ ಮಾತ್ರ ನಾಯಕನಲ್ಲ, ನನ್ನ ಜೊತೆಗೆ ನಾಯಕಿ ಸಪ್ತಮಿಗೌಡ ಕೂಡ ನಾಯಕಿ. ಚಿತ್ರೀಕರಣ ಪೂರ್ಣಗೊಳಿಸಿ ಸುಮ್ಮನೆ ಮನೆಯಲ್ಲಿ ಕುಳಿತಿಲ್ಲ ಪ್ರತಿಬಾರಿ ಪ್ರಚಾರಕ್ಕೆ ಬಂದು ಸಿನಿಮಾಗೆ ಒಳ್ಳೆಯದಾಗಲಿ ಎಂದು ಬೆನ್ನಿಗೆ ನಿಂತಿದ್ಧಾರೆ ಎಂದರು ನಟ ಸತೀಶ್ ನೀನಾಸಂ
ಚಿತ್ರವನ್ನು ಮೊದಲು ನೋಡಿ ಮೆಚ್ಚಿಕೊಂಡಿದ್ದ ಸಪ್ತಮಿಗೌಡ ಕುಟುಂಬ ಅವರು ಕೊಟ್ಟ ಪ್ರೋತ್ಸಾಹದಿಂದ ಚಿತ್ರ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಚಿತ್ರ ಬಿಡುಗಡೆಗೆ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.


