ಎಲ್ಲರೂ ಊಟ ಮಾಡಿದ್ರಾ ಎಂದು ಲೀಲಮ್ಮ ಕೇಳಿದ್ದೇ ನಮ್ಮ ಸೌಭಾಗ್ಯ: ಸುಧಾ ನರಸಿಂಹರಾಜು

ಇತ್ತೀಚೆಗೆ ಚಿಕ್ಕ ಕಲಾವಿದರಿರಲಿ ದೊಡ್ಡ ಕಲಾವಿದರು ಇರಲಿ ಒಂದೆಡೆ ಸೇರುವುದೇ ಕಷ್ಟ. ಅಂತದರಲ್ಲಿ 100ಕ್ಕೂ ಹೆಚ್ಚು ಕಲಾವಿದರು ಒಂದೆಡೆ ಕಲೆತು ಹಿರಿಯ ನಟಿ ಲೀಲಾವತಿ ಅಮ್ಮನ ಆರೋಗ್ಯ ವಿಚಾರಿಸಿ ಅವರೊಂದಿಗೆ ಹೊಟ್ಟೆ ತುಂಬಾ ಊಟ ಮಾಡಿ ,ಬಾಯಿ ತುಂಬಾ ಪ್ರೀತಿಯ ಮಾತನಾಡಿದ್ದು ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ ಹಿರಿಯ ನಟಿ ಸುಧಾನರಸಿಂಹರಾಜು.

ಮೊನ್ನೆ ನೆಲಮಂಗಲ ಬಳಿಯ ಸೋಲದೇವನಹಳ್ಳಿಯ ಹಿರಿಯ ನಟಿ ಲೀಲಾವತಿ ಅವರ ತೋಟದ ಮನೆಗೆ ಭೇಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತು ಹಿರಿಯ ನಟಿ ಸುಧಾ ನರಸಿಂಹ ರಾಜು ಮಾಹಿತಿ ಹಂಚಿಕೊಂಡಿದ್ದು ಲೀಲಾವತಿ ಅಮ್ಮನೊಂದಿಗೆ ಕೇಕ್ ಕಟ್ ಮಾಡಿ ಅವರ ಬಾಯಿ ಸಿಹಿ ಮಾಡಿದ್ದು ಖುಷಿಯ ವಿಚಾರ. ಈ ಹಿಂದೆ ಹಾಸ್ಯ ಚಕ್ರವರ್ತಿ ಧಾರಾವಾಹಿ ಮಾಡುವಾಗ ಅವರನ್ನು ಭೇಟಿ ಮಾಡಿ ಅವರೊಂದಿಗೆ ಕಾಲ ಕಳೆದಿದ್ದೆವು. ಮಂಗಳೂರು ಶೈಲಿಯ ಅಡುಗೆ ಮಾಡಿ ಬಡಿಸಿದ್ದರೂ ಅದು ಇನ್ನೂ ಹಸಿರಾಗಿಯೇ ಇದೆ. ಇದರ ನಡುವೆ ಅವರನ್ನು ಮತ್ತೆ ಭೇಟಿ ಮಾಡಿದ್ದೇವೆ. ಲೀಲಮ್ಮ ಎಂದರೆ ಎತ್ತರದ ಸ್ಥಾನದಲ್ಲಿ ಇರಿಸಿದ್ದೇವೆ.

ಲೀಲಾವತಿ ಎಂದರೆ ನಿಮಗೆ ನೆನಪಾಗುವುದು ಏನು
ಲೀಲಮ್ಮ ಎಂದರೆ ನೆನಪಾಗುವುದು ಅಮ್ಮ. ಅಮ್ಮನ ಪಾತ್ರಕ್ಕೆ ಲೀಲಮ್ಮ ಬಿಟ್ಟರೆ ಯಾರೂ ನೆನಪಿಗೆ ಬರಲ್ಲ. ಅವರು ಮಾಡುವ ಪಾತ್ರ. ತೆರೆಯ ಮೇಲೆ ಮಾಡುವ ಪಾತ್ರದಲ್ಲಿ ಸ್ವಂತ ತಾಯಿ ತಮ್ಮ ಮಕ್ಕಳನ್ನು ಪ್ರೀತಿಸುವ ಬಗೆ, ತೋರುವ ಕಾಳಜಿ, ಬೆಳೆಸುವುದು, ಬಯ್ಯುವುದು, ಮನೆಯಲ್ಲಿ ಸ್ವಂತ ತಾಯಿ ಹೇಗೆ ಮಾಡ್ತೋರೋ ಹಾಗೆ ಮಾಡ್ತಾರೆ. ಇದೇನು ಇದು ಇಷ್ಟು ಭಾವನೆಗಳನ್ನು ತೋರಿಸುವ ರೀತಿಗೆ ಮರುಳಾಗಿದ್ದೇವೆ. ನಮ್ಮದೇ ನಿರ್ಮಾಣದ “ಪೆÇ್ರೀಪೆಸರ್ ಹುಚ್ಚುರಾಯ” ಚಿತ್ರದಲ್ಲಿ ನಟಿಸುವಾಗ ಅವರೊಂದಿಗೆ ಹೆಚ್ಚಾಗಿ ಬರೆದಿದ್ದವು. ಅವರ ಬಗ್ಗೆ ಹೇಳಲು ಪದಗಳು ಸಾಲದು.ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬಹುತೇಕ ಚಿತ್ರೀಕರಣವಾಗಿತ್ತು.

ಚಾಮುಂಡೇಶ್ವರಿ ಸ್ಟುಡಿಯೋ ನೆನಪು ಮಾಡಿಕೊಳ್ಳುವುದಾದರೆ
ಶಾಲೆ ಮುಗಿದ ನಂತರ ನಾನು, ವಿನೋದ್ ರಾಜ್ ಮತ್ತು ಮಂಜುಳಾ ಅವರ ಸಹೋದರಿ ಮಮತಾ ಅವರು ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ ಮಕ್ಕಳೆಲ್ಲಾ ಒಂದೆಡೆ ಸೇರಿ ಮರಳಿನ ಗುಡ್ಡೆ, ಜಲ್ಲಿ ಮೇಲೆ ಆಟವಾಡುತ್ತಿದ್ದೆವು. ಎಂತಹ ಸುಂದರವಾದ ದಿನ ಅದನ್ನು ನೆನಪು ಮಾಡಿಕೊಂಡರೆ ನಾವೆಲ್ಲಾ ಹೀಗೆ ಆಡಿದೆವಾ ,ನಮ್ಮ ಮಕ್ಕಳು ಇದೆನ್ನೆಲ್ಲಾ ಮಾಡುವುದಿಲ್ಲ ಅನ್ನಿಸುತ್ತೆ. ಒಳಗಡೆ ಚಿತ್ರೀಕರಣ ನಡೆಯುತ್ತಿದ್ದರೆ ನಾವು ಅಲ್ಲಿ ಚಿತ್ರೀಕರಣ ನೋಡುತ್ತಿರಲಿಲ್ಲ, ನಾವು ಗಿಲ್ಲಿ ದಾಂಡು, ಕಣ್ಣಾ ಮಚ್ಚಾಲೆ, ಗೋಲಿ ಆಟ ಆಡುತ್ತಿದೆವು. ಅದರಲ್ಲಿ ನಾನು ಸಣ್ಣ ಪಾತ್ರ ಮಾಡಿದ್ದೆ. ಮೊದಲ ಬಾರಿಗೆ ಕ್ಯಾಮರ ಮುಂದೆ ಬಂದಿತ್ತು. ಲೀಲಮ್ಮ ಅವರನ್ನು ನೋಡಿ ಬೆಳೆದವರು.
ಹಿರಿಯ ನಟಿ ಲೀಲಾವತಿ ಅವರೊಂದಿಗೆ ನಟಿಸಿದ್ದೀರಾ ಅಥವಾ ಅವರಿಂದ ಕಲಿತಿದ್ದು ಏನು?
ಲೀಲಾವರಿ ಅಮ್ಮನೊಂದಿಗೆ ನಟಿಸುವ ಅವಕಾಶ ಸಿಗಲಿಲ್ಲ ಆದರೆ ಅವರನ್ನು ಆಗಾಗ ಭೇಟಿ ಮಾಡುತ್ತಿದ್ದೆ. ಅವರ ಸರಳತೆ ನಮ್ಮ ಮೇಲೆ ಪ್ರಭಾವ ಬೀರಿದೆ. ನಾನು ನಟಿಸುವಾಗ ಅವರ ಕೆಲವೊಂದು ಸಂಗತಿಗಳನ್ನು ಅಳವಡಿಸಿಕೊಂಡಿದ್ದೇನೆ. ವಸಂತ ಲಕ್ಷ್ಮಿ, ನಾಗರಾಹಾವು,ನಾ ನಿನ್ನ ಮರೆಯಲಾರೆ ಚಿತ್ರ ನೋಡಿದಾದ ಅವರಿಂದ ಪ್ರಭಾವಿತಳಾಗಿದ್ದೇನೆ. ತಿಳಿ ಹಾಸ್ಯದಲ್ಲಿ ಎಮೋಷನ್, ತಾಯಿ ಪಾತ್ರ ಮಾಡುವುದರಿಂದ ನಾನು ನನ್ನ ಪಾತ್ರದಲ್ಲಿ ಅಳವಡಿಸಿಕೊಂಡಿದ್ದೇನೆ.

ನೂರಕ್ಕೂ ಹೆಚ್ಚು ಕಲಾವಿದರು ಭೇಟಿ ಬಗ್ಗೆ ಹೇಳುವುದಾದರೆ?
ನೂರಕ್ಕೂ ಹೆಚ್ಚು ಕಲಾವಿದರು ಒಂದೆಡೆ ಸೇರುವುದು ಸಾಮಾನ್ಯದ ಸಂಗತಿಯಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಹಿರಿಯ ನಟಿ ಪದ್ಮಾ ವಾಸಂತಿ ಸೇರಿದಂತೆ ಅನೇಕರು ಲೀಲಾವತಿ ಅಮ್ಮನ್ನು ಭೇಟಿ ಮಾಡುವ ಬಗ್ಗೆ ಉಸ್ತುವಾರಿ ವಹಿಸಿದ್ದರು. ಭೇಟಿ ಆಡಂಬರ ಅನ್ನಿಸಲಿಲ್ಲ. ಊಟ ಮಾಡಿದ್ರಾ ಎಂದು ಕೇಳಿದ್ದೇ ನಮ್ಮ ಸೌಭಾಗ್ಯ. ವಿನೋದ್ ರಾಜ್ ಅವರ ನಿಮ್ಮ ಮನೆ ಅಂತ ಭಾವಿಸಿ ಬನ್ನಿ ಎಂದದ್ದು ಖುಷಿಯ ವಾತಾವರಣ. ಅಮ್ಮನ ತೃಪ್ತಿ ಪಡಸಿಲು ಒಂದೆಡೆ ಸೇರಿಸಿದ್ದು ಒಳ್ಳೆಯ ಪ್ರಯತ್ನ.
ಲೀಲಮ್ಮ ಮನೆಯಲ್ಲಿ ಕಲಾವಿದರ ಸಂಭ್ರಮ

ನೂರಕ್ಕೂ ಹೆಚ್ಚು ಕಲಾವಿದರು ಲೀಲಾವತಿ ಅವರ ಮನೆಗೆ ಆಗಮಿಸಿತ್ತು. ಹಿರಿಯ ನಟರಾದ ಶ್ರೀಧರ್, ದೊಡ್ಡಣ್ಣ, ಸುಂದರ್ ರಾಜ್, ಜೈಜಗದೀಶ್, ಹಿರಿಯ ನಟ ಗಿರಿಜಾ ಲೋಕೇಶ್, ಪದ್ಮಾವಸಂತಿ, ಅಂಜಲಿ, ಭವ್ಯ, ನಿರ್ದೇಶಕ ಸಾಯಿಪ್ರಕಾಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ನಟಿ ಪೂಜಾಗಾಂಧಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಹಾಗೂ ಮಂಡಳಿ ಸದಸ್ಯರು ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ನಟ ನಟಿಯರು ಲೀಲಾವತಿಯರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು. ನಟ ನಟಿಯರನ್ನು ಬರಮಾಡಿಕೊಂಡ ಲೀಲಾವತಿ ಅವರ ಮಗ ವಿನೋದ್ ರಾಜ್ ಕಲಾವಿದರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿದರು. ಲೀಲಾವತಿ ಅವರ ಸಿನಿಮಾಗಳ ಹಾಡುಗಳ, ನೃತ್ಯ ಕಾರ್ಯಕ್ರಮದ ಹೈಲೆಟ್ಸ್