"Suvarna Grahamantri" Season 3 from March 25: Starts in a new format.

ಮಾರ್ಚ್ 25 ರಿಂದ “ಸುವರ್ಣ ಗೃಹಮಂತ್ರಿ” ಸೀಸನ್ 3 : ಹೊಸ ರೂಪದಲ್ಲಿ ಆರಂಭ - CineNewsKannada.com

ಮಾರ್ಚ್ 25 ರಿಂದ “ಸುವರ್ಣ ಗೃಹಮಂತ್ರಿ” ಸೀಸನ್ 3 : ಹೊಸ ರೂಪದಲ್ಲಿ ಆರಂಭ

ರಾಜ್ಯದ ಗೃಹಿಣಿಯರ ಮನಗೆದ್ದು ಮನೆಮಾತಾಗಿರುವ “ಸ್ಟಾರ್ ಸುವರ್ಣ” ವಾಹಿನಿಯ ಜನಪ್ರಿಯ ಕಾರ್ಯಕ್ರಮ “ಸುವರ್ಣ ಗೃಹಮಂತ್ರಿ”. ಖ್ಯಾತ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮಾಚ್ ್ 25ರಿಂದ ಮೂರನೇ ಆವೃತ್ತಿ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ.

ಈಗಾಗಲೇ “ಸುವರ್ಣ ಗೃಹಮಂತ್ರಿ”ಯು ಎರಡು ಸೀಸನ್ ಯಶಸ್ವಿಯಾಗಿ ಪೂರೈಸಿದ್ದು 700 ಸಂಚಿಕೆಗಳ ಹೊಸ್ತಿಲಲ್ಲಿದೆ. ಇನ್ನು ಹೊಸ ಸೀಸನ್ ನ ಪ್ರಮುಖ ಆಕರ್ಷಣೆಐಆಗಿ ಪ್ರತೀ ಸಂಚಿಕೆಯಲ್ಲೂ ಇನ್ಮುಂದೆ ‘ಸುವರ್ಣ ಪರಿವಾರ’ದ ತಾರೆಯರು ಭಾಗಿಯಾಗಲಿದ್ದಾರೆ.

ಸುವರ್ಣ ಸ್ಟಾರ್‍ಗಳ ಜೊತೆ ಜನಸಾಮಾನ್ಯರ ಭರ್ಜರಿ ಜಟಾಪಟಿಯೇ ನಡೆಯಲಿದೆ. ಮೊದಲ ಸಂಚಿಕೆಯಲ್ಲಿ ‘ಆಸೆ’ ಧಾರಾವಾಹಿ ಖ್ಯಾತಿಯ ‘ಮೀನಾ’ ಪಾಲ್ಗೊಂಡಿದ್ದು ವೀಕ್ಷಕರಿಗೆ ಭರ್ಜರಿ ಮನರಂಜನೆಯೇ ಸಿಗಲಿದೆ.

ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ-ಹೆಂಡತಿ ಆಟ ಆಡಿಸಿ , ಮಾತನಾಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ಅವರಿಗಾಗಿ ದಿನವನ್ನು ಮೀಸಲಿಟ್ಟು ರಾಣಿ ಸೀಟ್ ನಲ್ಲಿ ಅವರನ್ನ ಕೂರಿಸಿ ಗೌರವಿಸುತ್ತಾ ಥ್ಯಾಂಕ್ಸ್ ಹೇಳುವ ಕಾರ್ಯಕ್ರಮವೇ ಈ “ಸುವರ್ಣ ಗೃಹಮಂತ್ರಿ”.

ಮನೆ ಬೆಳಗುವ ಗೃಹಿಣಿಯರನ್ನು ಗುರುತಿಸಿ, ನಟ ರವಿ ಶಂಕರ್ ಗೌಡ ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಗೌರವಿಸಿ ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿಸುವುದೇ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ವಿಶೇಷತೆ.
.
ಹೊಸ ಸೀಸನ್, ಹೊಸ ಆರಂಭ, ಆಟ-ತುಂಟಾಟದ ಜೊತೆ ಮಸ್ತ್ ಮನರಂಜನೆಯನ್ನೊಳಗೊಂಡಿರುವ “ಸುವರ್ಣ ಗೃಹಮಂತ್ರಿ” ಸೀಸನ್-3 ಮಾರ್ಚ್ 25 ಪ್ರತಿದಿನ ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin