Journalist K.L. Nandini awarded doctorate for study on actor Dr. Ambareesh's contribution

ನಟ ಡಾ.ಅಂಬರೀಶ್ ಕೊಡುಗೆ ಕುರಿತು ಅಧ್ಯಯನಕ್ಕೆ ಪತ್ರಕರ್ತೆ ಕೆ .ಎಲ್ ನಂದಿನಿಗೆ ಡಾಕ್ಟರೇಟ್ ಪ್ರದಾನ - CineNewsKannada.com

ನಟ ಡಾ.ಅಂಬರೀಶ್ ಕೊಡುಗೆ ಕುರಿತು ಅಧ್ಯಯನಕ್ಕೆ ಪತ್ರಕರ್ತೆ ಕೆ .ಎಲ್ ನಂದಿನಿಗೆ ಡಾಕ್ಟರೇಟ್ ಪ್ರದಾನ

ಪತ್ರಕರ್ತರ ಜೀವನ ಸದಾ ಒಂದಿಲ್ಲೊಂದು ಒತ್ತಡದಲ್ಲಿ ದಿನ ಕಳೆದು ಹೋಗುತ್ತದೆ. ಕೆಲಸದ ಒತ್ತಡ ಒಂದೆಡೆಯಾದರೆ ಸಾಧಿಸುವ ಹಂಬಲ ಇನ್ನೊಂದು ಕಡೆ ಇವರೆರಡ ಮಧ್ಯೆ ಸಾಧಿಸಿ ತೋರಿಸುವ ಮಂದಿ ವಿರಳ. ಅಂತಹ ವಿರಳ ಪತ್ರಕರ್ತರ ಸಾಲಿಗೆ ಕೆ.ಎಲ್ ನಂದಿ ಸೇರ್ಪಡೆಯಾಗಿದ್ದಾರೆ.

ಕೆಲಸದ ಒತ್ತಡದ ನಡುವೆಯೂ “ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ.ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ” ಕುರಿತು ಪ್ರೌಢಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಎನ್ ಮಮತಾ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‍ಡಿ ನೀಡಿ ಮೈಸೂರು ವಿಶ್ವವಿದ್ಯಾಲಯ ಗೌರವಿಸಿದೆ.

ಮೈಸೂರು ವಿಶ್ವವಿದ್ಯಾಲಯದ 106ನೇ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ಅವರು ಕೆ.ಎಲ್ ನಂದಿನಿ ಅವರಿಗೆ ಪಿ.ಹೆಚ್ ಡಿ ಪದವಿ ಪ್ರದಾನ ಮಾಡಿದ್ದಾರೆ. ಈ ವೇಳೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಮತ್ತು ಉಪಕುಲಪತಿಗಳು ರಿಜಿಸ್ಟರ್ ಹಾಗು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಘಟಿಕೋತ್ಸವದಲ್ಲಿ ಹಾಜರಿದ್ದರು.

ಮುದ್ರಣ ಮಾದ್ಯಮದಲ್ಲಿ ಕೆಲಸ ಮಾಡಿ ಅನುಭವ ಪಡೆದ ಪತ್ರಕರ್ತೆ ಕೆ.ಎಲ್ ನಂದಿನಿ ಆ ಬಳಿಕ ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ತಮ್ಮದೇ ಡಿಜಿಟಲ್ ಮಾಧ್ಯಮ ಆರಂಭಿಸಿ ಹಲವು ಅಚ್ಚರಿಗಳನ್ನು ತಮ್ಮ ಸಂದರ್ಶನದ ಮೂಲಕ ಅನಾವರಣ ಮಾಡುತ್ತಿದ್ದಾರೆ.

ಅಪರೂಪದ ಸಂಚಿಕೆ ಮೂಲಕ ನಾಡಿಗೆ ಪರಿಚಯಿಸಿದ್ದಾರೆ. ಅನೇಕ ಸಾಧಕರ ಸಂದರ್ಶನ ಮಾಡಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ನಾಡಿನ ಅಚ್ಚರಿಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ನಂದಿನಿ ಅವರಿಗೆ ಸೇರಿದೆ. ಈ ನಡುವೆಯೂ “ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ.ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ” ಕುರಿತು ಪ್ರಬಂಧ ಮಂಡಿಸಿ ಪಿಎಚ್‍ಡಿ ಪಡೆದಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin