ಮೇರೋತ್ಸವ ಚಿತ್ರಕಲಾ ಪ್ರದರ್ಶನ : ಸಿನಿ ಗಣ್ಯರು ಭಾಗಿ
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದ್ದ ಮೇರೋತ್ಸವ ಕಾರ್ಯಕ್ರಮದಲ್ಲಿ ಮೇರು ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಬಿಡಿಸಿದ ಮೈಸೂರು ವಿತ್ರಕಲೆ ಮತ್ತು ಮತ್ತು ತಂಜಾವೂರು ಚಿತ್ರಕಲೆಗಳ ಪ್ರದರ್ಶನ ಹಮ್ಮಿಕೊಳ್ಳ¯ ಗಾಯಕಿ ಶಮಿತಾ ಮಲ್ನಾಡ್, ನಟಿ ಅನು ಪ್ರಭಾಕರ್, ಚಿತ್ರ ಕಲಾವಿದೆ ನೀಲಪಂಚ್, ಚಿತ್ರ ಕಲಾವಿದ ಡಾಕ್ಟರ್ ದುಂಡರಾಜ್ ಅಂಕಣಕಾರರಾದ ಶ್ರೀಕಂಠ ಬಾಳಗಂಚಿ ಮತ್ತು ಮತ್ತು ಚಿತ್ರ ನಿರ್ದೇಶಕ ಕೆ ರಾಮನಾರಾಯಣ್ ಭಾಗಿಯಾಗಿದ್ದರು.

ಮೇರು ಚಿತ್ರಕಲಾ ಶಾಲೆಯ ಸಂಸ್ಥಾಪಕರು ಹಾಗೂ ಚಿತ್ರಕಲಾವಿದೆ ತಿರುಮಲ ಶ್ರೀಕಾಂತ್ ಮಾತನಾಡಿ ಸಂಪ್ರದಾಯ ಮತ್ತು ಸಂಸ್ಕೃತಿಯವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮದು ಹಾಗಾಗಿ ಮೇರು ಚಿತ್ರಕಲೆ ಶಾಲೆಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಚಿತ್ರಗಳನ್ನು ಚಿತ್ರಕಲಾ ಪರಿಷತ್ತಿನ ದೇವರಾಜ್ ಅರಸ್ ಗ್ಯಾಲರಿಯಲ್ಲಿ ಜನವರಿ 11ರವೆಗೆ ಆಯೋಜಿಸಲಾಗಿದೆ ಎಂದರು
ನಟಿ ಅನುಪ್ರಭಾಕರ್ ಮಾತನಾಡಿ ಚಿಕ್ಕಂದಿನಲ್ಲಿ ನನ್ನಲ್ಲೂ ಚಿತ್ರ ಕಲಾವಿದೆ ಆಗಬೇಕೆಂಬ ಆಸಕ್ತಿ ಇತ್ತು ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಗಾಯಕಿ ಶಮಿತಾ ಮಲ್ನಾಡ್ ಮಾತನಾಡಿ ತಾವು ಬೆಟ್ಟ ಗುಡ್ಡ ಮರಗಳನ್ನು ಬರೆಯುತ್ತಿದ್ದೆವು ಈಗ ಈ ಚಿತ್ರಗಳನ್ನು ನೋಡುವಾಗ ನಮಗೂ ಇಂತಹ ಚಿತ್ರಗಳನ್ನು ಕಲಿತು ಬರೆಯಬೇಕೆಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು .
ನೀಲ ಪಂಚ್ ಎಲ್ಲ ವಿದ್ಯಾರ್ಥಿಗಳನ್ನು ಹಾರೈಸಿ ಹೊಗಳಿದರು.ಅಂಕಣಕಾರರಾದ ಶ್ರೀಕಂಠ ಬಳಗುಂಚಿ ಗುರು ಪರಂಪರೆ ಮುಂದುವರೆಸಿ ಎನ್ನುವ ಮಾತುಗಳಾಡಿಡಾ ಜೆ ದುಂಡರಾಜ್ ಶಿಷ್ಯೆ ತಿರುಮಲ ಶ್ರೀಕಾಂತ್ ದೊಡ್ಡಮಟ್ಟದ ಮೇರೋತ್ಸವ ಕಾರ್ಯಕ್ರಮ ಮಾಡುತ್ತಿರುವುದನ್ನು ಕಂಡು ಹೆಮ್ಮೆಯಾಗುತ್ತಿದೆ ಎಂದರು
ನಿರ್ದೇಶಕ ರಾಮನಾರಾಯಣ್ ಮಾತನಾಡಿ ಸಹೋದರಿ ತಿರುಮಲ ಶ್ರೀಕಾಂತ್ ಸಾಮಾನ್ಯ ಗೃಹಣಿಯಾಗಿದ್ದು ಹವ್ಯಾಸದ ಚಿತ್ರಕಲೆಯನ್ನು ಇಂದು ಇಷ್ಟು ದೊಡ್ಡ ಮಟ್ಟದ ಮೇರೋತ್ಸವ ವನ್ನಾಗಿಸಲು ಅವರ ಶಿಸ್ತು ಮತ್ತು ಶ್ರದ್ದೆಯೇ ಈ ಸಾಧನೆಗೆ ಕರಣ ಎಂದು ತಿಳಿಸಿದರು

