“ಬಿಲ್ಲ ರಂಗ ಭಾಷಾ” ಮೂಲಕ ಮತ್ತೆ ಒಂದಾಗಲಿರುವ “ವಿಕ್ರಾಂತ್ ರೋಣ” ಜೋಡಿ
ವಿಕ್ರಾಂತ್ ರೋಣ ಚಿತ್ರದ ಮೂಲಕ ಹೊಸ ನಿರೀಕ್ಷೆ ಹುಟ್ಟುಹಾಕಿ ಆ ಮೇಲೆ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ,. ಇದೀಗ ನಟ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಜೋಡಿ ಮತ್ತೊಮ್ಮೆ ಜೊತೆಯಾಗುತ್ತಿದೆ. ಕಿಚ್ಚ ಸುದೀಪ್ಗೆ ಮತ್ತೊಮ್ಮೆ ಆಕ್ಷನ್ಕಟ್ ಹೇಳಲು ಸಜ್ಜಾಗಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ
ವಿಕ್ರಾಂತ್ ರೋಣ ಚಿತ್ರದ ಬಳಿಕ ಬಿಲ್ಲ ರಂಗ ಭಾಷಾ ಸೇರಿದಂತೆ ಒಂದೆರಡು ಚಿತ್ರಗಳ ಶೀರ್ಷಿಕೆ ಇಟ್ಟುಕೊಂಡು ಅನೂಪ್ ಭಂಡಾರಿ, ನಟ ಕಿಚ್ಚ ಸುದೀಪ್ ಅವರಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ್ ಸುದೀಪ್ ಅವರ ಹುಟ್ಟುಹಬ್ಬ ಸೆಪ್ಟಂಬರ್ 2ಕ್ಕೆ ಈ ಜೋಡಿಯ ಹೊಸ ಸಿನಿಮಾ ಪ್ರಕಟವಾಗಲಿದೆ

ಈ ಮೂಲಕ ಸುದೀಪ್ ಜೊತೆ ಸಿನಿಮಾ ಯಾವಾಗ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಘಳಿಗೆ ಮುಹೂರ್ತ ಒದಗಿ ಬಂದಿದೆ. ಹುಟ್ಟುಹಬ್ಬದಂದು ಚಿತ್ರ ಬಗ್ಗೆ ಮಹತ್ವದ ಪ್ರಕಟಣೆ ಹೊರಬೀಳಲಿದೆ.
ನಿರ್ದೇಶಕ ಅನೂಪ್ ಭಂಡಾರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ದ ಮೆನ್ ಇನ್ ಬ್ಲಾಕ್ ವಿಲ್ ಬೀ ರೈಟ್ ಬ್ಯಾಕ್’ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ ಅನೂಪ್

ಸುದೀಪ್ ಸರ್ ಹುಟ್ಟುಹಬ್ಬದಂದು ಮತ್ತೆ ಭೇಟಿ ಆಗೋಣ ಎಂದು ಕ್ಯಾಪ್ಶನ್ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ ಮತ್ತಷ್ಟು ಕುತೂಹಲ ಹೆಚ್ಚು ಮಾಡಿದೆ

