ನಟ ಶ್ರೇಯಸ್- ಪ್ರಿಯಾ ವಾರಿಯರ್ ನಟನೆಯ “ವಿಷ್ಣು ಪ್ರಿಯಾ” ಫೆಬ್ರವರಿ 21ಕ್ಕೆ ಬಿಡುಗಡೆ
ಕನ್ನಡ ಚಿತ್ರರಂಗದ ಯುವನಟ ಶ್ರೇಯಸ್ ಮಂಜು ಮತ್ತು ಮಲೆಯಾಳಂನ ನಟಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ನಟನೆಯ “ ವಿಷ್ಣು ಪ್ರಿಯ” ಕೊನೆಗೂ ಬಿಡುಗಡೆಯ ಹಂತಕ್ಕೆ ಬಂದಿದೆ. ಫೆಬ್ರವರಿ 21 ರಂದು ಚಿತ್ರ ಬಿಡುಗಡೆಯಾಗಲಿದೆ.

ಚಿತ್ರದ ಚಿತ್ರದ ಏಳು ಗಿರಿಗಳ ಏಳು ಕಡಲಿನ ಎಂಬ ಪ್ರೇಮಗೀತೆ ಮತ್ತು ದಿನಾಂಕ ಘೋಷಣೆಗೆ ನಟ ಶ್ರೀಮುರುಳಿ, ನಟಿ ಸಪ್ತಮಿ ಗೌಡ, ನಿರ್ಮಾಪಕ ರಮೇಶ್ ರೆಡ್ಡಿ, ಗೀತ ಸಾಹಿತಿ ಕವಿರಾಜು ಸೇರಿದಂತೆ ಮತ್ತಿತರು ಆಗಮಿಸಿ ಶ್ರೇಯಸ್ ಮಂಜು ನಟನೆಯ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದರು.
ಚಿತ್ರವನ್ನು ಮಲೆಯಾಳಂನ ಖ್ಯಾತ ನಿರ್ದೇಶಕ ವಿಕೆ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ. ಅವರಿಗೆ ವಿಷ್ಣುಪ್ರಿಯಾ ಎರಡನೇ ಚಿತ್ರ. ಇದಕ್ಕೂ ಮುನ್ನ ಐದೊಂದ್ಲ ಐದು ಚಿತ್ರ ನಿರ್ದೇಶನ ಮಾಡಿದ್ದರು, ವಿಷ್ಣು ಪ್ರಿಯಾ ಚಿತ್ರಕ್ಕೆ ನಿರ್ಮಾಪಕ ಕೆ. ಮಂಜು ಬಂಡವಾಳ ಹೂಡಿದ್ದಾರೆ.
ಹಾಡು ಬಿಡುಗಡೆ ಮಾಡಿ ಮಾತನಾಡಿದ ನಟ ಶ್ರೀಮುರುಳಿ, ಯುವ ನಟ ಶ್ರೇಯಸ್ ಅವರಲ್ಲಿ ಬದ್ದತೆ ಸಾಧಿಸುವ ಉತ್ಸಾಹವಿದೆ. ಒಳ್ಳೆಯದಾಗಲಿ ಮುನ್ನೆಡೆಯಿರಿ ಎಂದು ಶುಭ ಹಾರೈಸಿದರು.
ನಿರ್ದೇಶಕ ವಿಕೆ ಪ್ರಕಾಶ್ ಮಾತನಾಡಿ ಕನ್ನಡದಲ್ಲಿ ಮೊದಲು ಶ್ರೇಷ್ಠ ಸಿನಿಮಾಗಳು ಬಂದಿವೆ. ಅದರಲ್ಲಿ ಗಿರೀಶ್ ಕಾಸರವಳ್ಳಿ, ಬಿವಿ ಕಾರಂತ್ ಅವರ ಸಿನಿಮಾ ನೋಡಿ ಬೆಳೆದವರು. ಆ ಮೇಲೆ ಶ್ಯಾಮ್ ಬೆನಗಲ್, ಸತ್ಯ ಜಿತ್ ರೇ ಮುಂತಾದವರು ಉತ್ತಮ ಚಿತ್ರ ನೀಡಿದ್ದಾರೆ. ನಟ ಶ್ರೇಯಸ್ ಒಳ್ಳೆಯ ನಟನಾಗ ಬಲ್ಲ ಸಾಮಥ್ರ್ಯ ಇರುವ ನಟ. ಚಿತ್ರೀಕರಣಕ್ಕೂ ಮುನ್ನ ನಟಿ ಪ್ರಿಯಾ ವಾರಿಯರ್ ಜೊತೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಇದು ಇವರಿಬ್ಬರ ಕೆಮಿಸ್ಟ್ರಿ ಇನ್ನಷ್ಟು ಚೆನ್ನಾಗಿ ಮೂಡಿ ಬರಲು ಸಹಕಾರಿಯಾಗಿದೆ. ಇನ್ನು ನಿರ್ಮಾಪಕ ಕೆ. ಮಂಜು ಯಾವುದರಲ್ಲಿಯೂ ಕಡಿಮೆ ಮಾಡಿಲ್ಲ,. ಚಿತ್ರ ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದರು.
ನಟ ಶ್ರೇಯಸ್ ಮಂಜು ಮಾತನಾಡಿ, ನನಗೆ ಹಣ ಮುಖ್ಯವಲ್ಲ, ಸರಸ್ವತಿ ಮುಖ್ಯ. ಹಣ ಮುಖ್ಯವಾಗಿದ್ದರೆ ಪಬ್ ಮಾಡಿಕೊಂಡು ಹಣ ಮಾಡುತ್ತಿದ್ದೆ, ಕಷ್ಟಪಟ್ಟು ಬೆಳೆದು ಬರಬೇಕು ಎನ್ನುವ ಛಲ ನನ್ನದು., ಮನೆಯಲ್ಲಿ ನಾನು ನಿರ್ಮಾಪಕ ಕೆ. ಮಂಜು ಅಪ್ಪ ಮಗ,. ಆದರೆ ಮನೆಯಾಚೆ ಅವರೊಬ್ಬ ಪಕ್ಕಾ ವ್ಯವಹಾರಸ್ಥ, ಈ ಕಾರಣಕ್ಕಾಗಿಯೇ ಚಿತ್ರ ವಿಳಂಬವಾಯಿತು ಎಂದು ಹೇಳಿದರು

ನಟಿ ಪ್ರಿಯಾ ವಾರಿಯರ್ ಮಾತನಾಡಿ ಕನ್ನಡದಲ್ಲಿ ಮೊದಲ ಚಿತ್ರ, ಆರಂಭದಲ್ಲಿ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದೆ. ಒಂದಷ್ಟು ವರ್ಷ ಗ್ಯಾಪ್ ಆದ ನಂತರ ಕನ್ನಡದ ಟಚ್ ಹೋಗಿದೆ. ಮುಂದಿನ ದಿನಗಳಲ್ಲಿ ಕಂಡಿತಾ ಕನ್ನಡದಲ್ಲಿ ಮಾತನಾಡುತ್ತೇನೆ. ವಿಷ್ಣು ಪ್ರಿಯಾದಲ್ಲಿ ಒಳ್ಳೆಯ ಕತೆ ಸಿಕ್ಕಿದೆ,. ನಟ ಶ್ರೇಯಸ್ ಜೊತೆ ಕಲಿತಿದ್ದೇನೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಮಾಪಕ ಕೆ, ಮಂಜು ಮಾತನಾಡಿ, ಪೆಬ್ರವರಿ 21 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು

ಧಾರವಾಡ ಮೂಲದ ಸಿಂಧುಶ್ರೀ ಈ ಚಿತ್ರದ ಮೂಲ ಕಥೆಗಾರರು. ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ತೆಲುಗಿನ ಸಂಗೀತ ನಿರ್ದೇಶಕ ಗೋಪಿಸುಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೆÇೀಜ್ ಮಾಡಿದ್ದಾರೆ.

