Shreyas Manju-Priya Warrier starrer 'Vishnupriya' to hit the screens on February 21

ಶ್ರೇಯಸ್ ಮಂಜು-ಪ್ರಿಯಾ ವಾರಿಯರ್ ನಟನೆಯ ‘ವಿಷ್ಣುಪ್ರಿಯಾ’ ಫೆಬ್ರವರಿ 21ಕ್ಕೆ ತೆರೆಗೆ - CineNewsKannada.com

ಶ್ರೇಯಸ್ ಮಂಜು-ಪ್ರಿಯಾ ವಾರಿಯರ್ ನಟನೆಯ ‘ವಿಷ್ಣುಪ್ರಿಯಾ’ ಫೆಬ್ರವರಿ 21ಕ್ಕೆ ತೆರೆಗೆ

ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು, ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ “ವಿಷ್ಣುಪ್ರಿಯಾ”ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಿರ್ಮಾಪಕ ಕೆ.ಮಂಜು ಈವರೆಗೆ ಉತ್ತರ ಕರ್ನಾಟಕದ ಲೇಖಕಿಯೊಬ್ಬರು ಕಳಿಸಿದ ಕಥೆಯೇ ಚಿತ್ರಕ್ಕೆ ಮೂಲ, ಅವರನ್ನು ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಪರಿಚಯಿಸುವುದಾಗಿಯೂ ಹೇಳ್ತಿದ್ದರು. ಅದರಂತೆ ಆ ಲೇಖಕಿ ಪರಿಚಯಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ಕೆ.ಮಂಜು ಮಾತನಾಡಿ ಮಗನ ಮೂರನೇ ಚಿತ್ರ ಕಾದಂಬರಿ ಆಧರಿಸಿ ಮಾಡಬೇಕೆಂದು ಒಳ್ಳೆ ಸ್ಟೋರಿ ಹುಡುಕುತ್ತಿದ್ದೆ. ಬಗ್ಗೆ ಪ್ರಕಟಣೆ ಕೊಟ್ಟು, ಆಹ್ವಾನಿಸಿದಾಗ 55ಕ್ಕು ಹೆಚ್ಚು ಕಥೆಗಳು ಬಂದವು. ಅದರಲ್ಲಿ ಸಿಂಧುಶ್ರೀ ಬರೆದ ಕಥೆ ತುಂಬಾ ಇಷ್ಟವಾಯ್ತು. ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಹೇಳಿದರು.

ಸಿಂಧುಶ್ರೀ ಹೃದಯಕ್ಕೆ ತಟ್ಟುವ ಕಥೆಗಳನ್ನು ಬರೆಯಬೇಕು ಎನ್ನುವುದು ಕನಸು.ಅನುಭವಿ ಕಥೆಗಾರರ ನಡುವೆ ನನ್ನಕಥೆ ಆಗಲ್ಲ ಅಂತ ಸುಮ್ಮನಾಗಿದ್ದೆ. ಒಮ್ಮೆ ನಿರ್ಮಾಪಕ ಮಂಜು ಕಾಲ್ ಮಾಡಿ ನಿನ್ನ ಕಥೆ ಸೆಲೆಕ್ಟ್ ಆಗಿದೆ ಎಂದಾಗ ನನಗೆ ನಂಬಲಾಗಲಿಲ್ಲ. ತಾತ ಹೇಳ್ತಿದ್ದ ತಮ್ಮ ಕುಟುಂಬದ ಮರ್ಯಾದೆ ಉಳಿಸಿಕೊಳ್ಳಲು ಮಾಡುತ್ತಿದ್ದ ಹತ್ಯೆ ಘಟನೆಗಳೇ ನಾನೀ ಕಥೆ ಬರೆಯಲು ಸ್ಪೂರ್ತಿ. ನಂತರ ಸಿನಿಮಾಗೆ ಏನು ಬೇಕೋ ಆರೀತಿ ಒಂದಷ್ಟು ಚೇಂಜ್ ಮಾಡಿಕೊಂಡಿದ್ದಾರೆ ಎಂದರು.

ನಾಯಕ ಶ್ರೇಯಸ್ ಮಾತನಾಡಿ ಚಿತ್ರದಲ್ಲಿ 90ರ ದಶಕದ ಫೀಲ್ ಕಟ್ಟಿಕೊಡಲು ತುಂಬಾ ಟ್ರೈ ಮಾಡಿದ್ದೇವೆ. ಶೂಟಿಂಗ್ ಸಮಯದಲ್ಲಿ ನನಗೆ ಯಾವುದೂ ಕಷ್ಟ ಎನಿಸಲಿಲ್ಲ. ಇಷ್ಟು ರಿಸ್ಕ್ ಯಾಕೆ ಎಂದಾಗ ನನ್ನ ತಂದೆ ಸಿನಿಮಾನ ಪ್ಯಾಷನ್ ಗೋಸ್ಕರ ಮಾಡ್ತಿದ್ದೇನೆ ಅಂತ ಹೇಳ್ತಿದ್ದರು ಎಂದು ಹೇಳಿದರು.

ನಿರ್ದೇಶಕ ಪ್ರಕಾಶ್ ಮಾತನಾಡಿ ಚಿತ್ರದ ಶೂಟೊಂಗ್ ಒಂದು ಬ್ಯೂಟಿಫುಲ್ ಎಕ್ಸ್ ಪೀರಿಯನ್ಸ್. ನಾಯಕ ಶ್ರೇಯಸ್ ನಾಯಕಿ ಪ್ರಿಯಾ ವಾರಿಯರ್ ಇಬ್ಬರ ಕೆಮಿಸ್ಟ್ರಿ ಚಿತ್ರ ಇಷ್ಟು ಚೆನ್ನಾಗಿ ಮೂಡಿ ಬರಲು ಸಹಕಾರಿಯಾಗಿದೆ. ಒಂದು ಸಿನಿಮಾನ ಹೇಗೆಲ್ಲ ಪ್ರೊಮೋಷನ್ ಮಾಡಬೇಕೆನ್ನುವುದು ಮಂಜು ಅವರಿಗೆ ತುಂಬಾ ಚೆನ್ನಾಗಿ ಗೊತ್ತು ಎಂದರು.

ನಾಯಕಿ ಪ್ರಿಯಾ ವಾರಿಯರ್ ಈ ಚಿತ್ರದಲ್ಲಿ ತಾನೇ ಹಾಡಿದ ಹಾಡನ್ನು ಹಾಡಿ ಮಾತನಾಡುತ್ತ ನನ್ನ ಮೊದಲ ಕನ್ನಡ ಚಿತ್ರವಿದು. ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ತೊಂಭತ್ತರ ದಶಕದಲ್ಲಿ ನಡೆದಂಥ ಇನ್ಟೆನ್ಸ್ ಲವ್ ಸ್ಟೋರಿ ಈ ಚಿತ್ರದಲ್ಲಿದೆ. ಬಿಂದ್ಯಾ ಮೂವೀಸ್ ಕೆ. ಮಂಜು ಸಿನಿಮಾಸ್ ಮೂಲಕ ಚಿತ್ರವನ್ನು ಡಾ. ಕೆ.ಮಂಜು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಮಂಜು ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ 50ನೇ ಚಿತ್ರ ಎನ್ನುವುದು ವಿಶೇಷ.(ಬೇರೆ ಭಾಷೆಯ 2 ಚಿತ್ರ ಸೇರಿ). ಫೆ 21 ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅವರಿಗೆ ವಿಷ್ಣುಪ್ರಿಯಾ ಎರಡನೇ ಚಿತ್ರ. ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಅವರಿಬ್ಬರ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. ಜೀವನದಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆ.

ತೆಲುಗಿನ ಸಂಗೀತ ನಿರ್ದೇಶಕ ಗೋಪಿಸುಂದರ್ ಸಂಗೀತ ನೀಡಿದ್ದಾರೆ,ಕೌಟಂಬಿಕ ಮೌಲ್ಯಗಳನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕನ ಜೀವನದಲ್ಲಿ ಏನೇನೆಲ್ಲ ಆಗಿಹೋಯಿತು ಎಂದು ಈ ಚಿತ್ರ ಹೇಳುತ್ತದೆ. ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin