ಸಿಎಸ್ ಬಿಎಲ್ ಸೀಸನ್ 1″ ಟ್ರೋಫಿ , ಲೋಗೊ ಅನಾವರಣ
ಪಿಆರ್ ಕೆ ಆಡಿಯೋ ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ, ಅರ್ಜುನ್ ಹಾಗೂ ಪಾರಿತೋಷ್ ಆಯೋಜಿಸುತ್ತಿರುವ “ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ – ಸಿಎಸ್ ಬಿಎಲ್ ಸೀಸನ್ 1″ಲೋಗೋ ಅನಾವರಣ ಮಾಡಲಾಗಿದೆ

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ ಸಿಎಸ್ ಬಿಎಲ್ ” ಸೀಸನ್ 1 ಲೋಗೊ ಹಾಗೂ ಟ್ರೋಫಿ ಅನಾವರಣ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಟಿ.ಎ ಶರವಣ ನಟ ಅನಿರುದ್ದ್ ಜತ್ಕರ್, ನಟಿ ರಾಗಿಣಿ ದ್ವಿವೇದಿ, ಸಾ.ರಾ.ಗೋವಿಂದು, ಮುಂತಾದವರು ಉಪಸ್ಥಿತರಿದ್ದರು.

ಆಯೋಜಕರಲ್ಲಿ ಒಬ್ಬರಾದ ಚೇತನ್ ಸೂರ್ಯ ಮಾತನಾಡಿ ಎರಡು ವರ್ಷಗಳ ಕಾಲ “ಅಪ್ಪು ಕಪ್” ಎಂಬ ಹೆಸರಲ್ಲಿ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸುತ್ತಾ ಬಂದಿದ್ದೇವೆ. ಈ ಬಾರಿ ಇಂಟರ್ ಸ್ಟೇಟ್ ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಆಯೋಜಿಸಲಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕೇರಳ ನಾಲ್ಕು ರಾಜ್ಯಗಳ ಸೆಲೆಬ್ರಿಟಿಗಳು ಈ ಲೀಗ್ ನಲ್ಲಿ ಆಡಲಿದ್ದಾರೆ. ಮುಂದಿನ ಬಾರಿ ಇನ್ನೂ ಹೆಚ್ಚಿನ ರಾಜ್ಯಗಳು ಸೇರ್ಪಡೆಯಾಗಲಿದೆ ಎಂದರು.

ಕರ್ನಾಟಕ ವಾರಿಯರ್ಸ್”, “ಚೆನೈ ಸೂಪರ್ ಸ್ಟಾರ್ಸ್”, ” ಕೇರಳ ರಾಕರ್ಸ್” ಹಾಗೂ “ತೆಲುಗು ಫೈಟರ್ಸ್” ಎಂಬ ನಾಲ್ಕು ತಂಡಗಳಿದೆ. ನನ್ನ ಜೊತೆಗೆ ಅರ್ಜುನ್ ಹಾಗೂ ಪಾರಿತೋಷ್ ಅವರು ಈ ಬಾರಿ ಕೈಜೋಡಿಸಿದ್ದು, ಜೂನ್ ತಿಂಗಳಲ್ಲಿ ಅದ್ದೂರಿಯಾಗಿ “ಸಿಎಸ್ ಬಿಎಲ್ ನಡೆಯಲಿದೆ ಎಂದು ಹೇಳಿದರು.
“ಕರ್ನಾಟಕ ವಾರಿಯರ್ಸ್” ತಂಡದ ನಟರಾದ ಪ್ರಮೋದ್ ಶೆಟ್ಟಿ, ರವಿ ಚೇತನ್, ಮನೋರಂಜನ್ ರವಿಚಂದ್ರನ್ ಹಾಗೂ ವಿಕ್ರಮ್ ರವಿಚಂದ್ರನ್, “ಚೆನೈ ಸೂಪರ್ ಸ್ಟಾರ್ಸ್” ತಂಡದ ಶಿವಕುಮಾರ್, ನಟರಾದ ವಿಕ್ರಾಂತ್ ,ಭರತ್, ಹಿನ್ನೆಲೆ ಗಾಯಕ ಬಿ.ಆರ್.ಕೃಷ್ಣ “ತೆಲುಗು ಫೈಟರ್ಸ್” ತಂಡದ ಶರತ್, ನಿತೀಶ್ ಹಾಗೂ “ಕೇರಳ ರಾಕರ್ಸ್” ತಂಡದ ಮಂಜುನಾಥ್ ,ನಟರಾದ ಸಂತೋಷ್ ಹಾಗೂ ರಾಜೀವ್ ಪಿಳ್ಳೈ ಮುಂತಾದವರು ಉಪಸ್ಥಿತರಿದ್ದರು.

