Khelo BSNDP Cricket League logo unveiled

ಖೇಲೋ ಬಿಎಸ್‍ಎನ್‍ಡಿಪಿ ಕ್ರಿಕೆಟ್ ಲೀಗ್ ಲೋಗೋ ಅನಾವರಣ - CineNewsKannada.com

ಖೇಲೋ ಬಿಎಸ್‍ಎನ್‍ಡಿಪಿ ಕ್ರಿಕೆಟ್ ಲೀಗ್ ಲೋಗೋ ಅನಾವರಣ

ಗ್ರಾಮೀಣ ಯುವಕರಿಗೆ ಅನುಕೂಲ ಆಗುವಂತೆ ದೊಡ್ಡ ಉದ್ದೇಶದಿಂದ ಕೂಡಿದ ರಾಜ್ಯ ಮಟ್ಟದ ಕ್ರಿಕೆಟ್ ಲೀಗ್ ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ

ಕೇರಳಂ ನ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ಖೇಲೋ ಬಿಎಸ್‍ಎನ್‍ಡಿಪಿ ಕ್ರಿಕೆಟ್ ಲೀಗ್ ಕರ್ನಾಟಕದಲ್ಲಿ ನಡೆಯಲಿದೆ.ಪರಮಪೂಜ್ಯ ಶ್ರೀ ದೇವಿಕಾನಂದ ಶ್ರೀಗಳು, ಮಾಜಿ ಸಚಿವ ಅರವಿಂದ ಲಿಂಬಾವಳಿ ಲೀಗ್ ಲೋಗೋ ಅನಾವರಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

224 ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ತಂಡ ಇರಲಿದ್ದು 31 ಜಿಲ್ಲೆಗಳಲ್ಲಿ ಆಯಾ ಪ್ರದೇಶದ ಮಹನೀಯರ ಹೆಸರಿನಲ್ಲಿ ಕ್ರೀಡಾ ಜ್ಯೋತಿ ಯಾತ್ರೆ ನಡೆಯಲಿದೆ.ಲೀಗ್ ನಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 25 ಲಕ್ಷ, 5 ಲಕ್ಷ ದ್ವಿತೀಯ ಬಹುಮಾನ, 2.5 ಲಕ್ಷ ತೃತೀಯ ಬಹುಮಾನ ಇರಲಿದೆ.

ಮ್ಯಾನ್ ಆಫ್ ದಿ ಸೀರೀಸ್ ಗೆ ಇವಿ ಬೈಕ್ ಬಹುಮಾನ ಆಗಿ ದೊರೆಯಲಿ ಎಂದು ಘೋಷಿಸಲಾಗಿದೆ.

ಈ ವೇಳೆ ಕ್ರಿಕೆಟಿಗ ದೊಡ್ಡ ಗಣೇಶ್, ನಿರ್ಮಾಪಕರಾದ ಡಾ. ಸಂಜಯ್ ಗೌಡ, ಗಣ್ಯರಾದ ಮೋಹನ್ ಬಾಬು, ಟಿವಿ ಬಾಬು, ಬಿ. ಸೋಮಶೇಖರ್, ಸೈದಪ್ಪ ಕೆ. ಗುತ್ತೇದಾರ್ ಮೊದಲಾದವರು ಉಪಸ್ಥಿತರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin