ಜನವರಿ 16 ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ : ಈ ಬಾರಿ ಬೆಂಗಳೂರಿನಲ್ಲಿ ಪಂದ್ಯ ಇಲ್ಲ .ಅಭಿಮಾನಿಗಳಿಗೆ ನಿರಾಸೆ
ಭಾರತೀಯ ಚಿತ್ರರಂಗದ ನಟ- ನಟಿಯರು ಮತ್ತು ಕಲಾವಿದರನ್ನು ಒಂದೆಡೆ ಸೇರಿಸುವ ಕ್ರಿಕೆಟ್ ಪಂದ್ಯ “ಸೆಲೆಬ್ರಿಟಿ ಕ್ರಿಕೆಟ್ ಲೀಗ್ ” ಈ ಬಾರಿ ಜನವರಿ 16 ರಿಂದ ಆರಂಭವಾಗಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲಿ ಸಿಸಿಎಲ್ ಪಂದ್ಯಗಳು ನಡೆಯುತ್ತಿಲ್ಲ. ಅಭಿಮಾನಿಗಳು ಮಾತ್ರವಲ್ಲದೆ ನಟ.ನಟಿ ಕಲಾವಿದರು ಮತ್ತು ಸಿಸಿಎಲ್ ಅನೇಕ ಆಟಗಾರರಲ್ಲಿ ನಿರಾಸೆ ಮತ್ತು ಬೇಸರ ತರಿಸಿದೆ.
ಕರ್ನಾಟಕ ಬುಲ್ಡೋಜರ್ಸ್ ಹೊಸ ಶಕ್ತಿಯುತ ತಂಡವಾಗಿ ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಈಗಾಗಲೇ ಕಿಚ್ಚ ಸುದೀಪ್ ಸೇರಿದಂತೆ ಸಿಸಿಎಲ್ ಆಟಗಾರರು ಮೈದಾನದಲ್ಲಿ ಅಬ್ಯಾಸ ಪಂದ್ಯದಲ್ಲಿ ಭಾಗಿಯಾಗುವ ಮೂಲಕ ಪ್ರಶಸ್ರಿ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ
ಜನವರಿ 16 ರಿಂದ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಲಿವೆ. ಕಳೆದ ಋತುವಿನಲ್ಲಿ ಎರಡು ಇನ್ನಿಂಗ್ಸ್‍ಗಳಲ್ಲಿ ತಲಾ 10 ಓವರ್‍ಗಳ ಮಾದರಿ ಅಳವಡಿಸಿಕೊಳ್ಳಲಾಗಿತ್ತು ಆದರೆ ಈ ಆವೃತ್ತಿಯು ಸಾಂಪ್ರದಾಯಿಕ 20-ಓವರ್‍ಗಳ ಆಟಕ್ಕೆ ಮರಳಿದೆ, ಹೆಚ್ಚು ತಂತ್ರದ ಮತ್ತು ಸ್ಪರ್ಧಾತ್ಮಕ ಆಟದ ಸಮಯಕ್ಕೆ ಆಟಗಾರರಲ್ಲಿ ಹುಮ್ಮಸ್ಸು ಮೂಡಿಸಿದೆ.
ಕಿಚ್ಚ ಸುದೀಪ್ ನಾಯಕತ್ವ
ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ನಟ ಕಿಚ್ಚ ಸುದೀಪ ಮುನ್ನಡೆಸಲಿದ್ದಾರೆ. ಈ ಋತುವಿನ ತಂಡದಲ್ಲಿ ಕಿಚ್ಚ ಸುದೀಪ (ನಾಯಕ), ಪ್ರದೀಪ್, ಡಾರ್ಲಿಂಗ್ ಕೃಷ್ಣ, ಜೆಕೆ, ರಾಜೀವ್, ಸುನಿಲ್ ರಾವ್ ಇದ್ದಾರೆ. ಚಂದನ್, ಅರುಣ್ ಬಚ್ಚನ್, ಸಚಿನ್ ಚಲವರಾಯ ಸ್ವಾಮಿ. ಕರಣ್ ಆರ್ಯನ್, ವಿದ್ಯಾಸಾಗರ್, ನಿರೂಪ್ ಬಂಡಾರಿ, ಪ್ರತಾಪ್ ಮತ್ತು ಅರ್ಜುನ್ ಯೋಗಿ ಸೇರಿದಂತೆ ಅನೇಕ ಆಟಗಾರರು ಕಣಕ್ಕಿಳಿಯಲಿದ್ದಾರೆ.
ಈ ಬಾರಿ ಯಾವೆಲ್ಲಾ ತಂಡ
ಈ ಸಿಸಿಎಲ್ ಆವೃತ್ತಿಯಲ್ಲಿ ಎಂಟು ತಂಡಗಳು ಸ್ಪರ್ಧಿಸಲಿವೆ – ಕರ್ನಾಟಕ ಬುಲ್ಡೋಜರ್ಸ್, ಪಂಜಾಬ್ ಡಿ ಶೇರ್, ತೆಲುಗು ವಾರಿಯರ್ಸ್, ಭೋಜ್‍ಪುರಿ ದಬಾಂಗ್ಸ್, ಮುಂಬೈ ಹೀರೋಸ್, ಬೆಂಗಾಲ್ ಟೈಗರ್ಸ್, ಚೆನ್ನೈ ಕಿಂಗ್ಸ್ ಮತ್ತು ಕೇರಳ ಸ್ಟ್ರೈಕರ್ಸ್ ಸೇರಿದಂತೆ 8 ತಂಡಗಳು ಭಾಗವಹಿಸಲಿವೆ

ಕ್ರೀಡಾ ಮನೋಭಾವನೆಗೆ ಒತ್ತು
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಯಾವಾಗಲೂ ಕ್ರೀಡಾ ಮನೋಭಾವ, ಸಿನಿಮಾ ಮತ್ತು ಪರದೆಗಳನ್ನು ಮೀರಿ ಅಭಿಮಾನಿಗಳನ್ನು ಒಗ್ಗೂಡಿಸಲು ಒತ್ತು ನೀಡಿದೆ. ತಂಡ ಸಂಪೂರ್ಣ ತಯಾರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ ಎಂದು ಎಕೆಕೆ ಎಂಟರ್‍ಟೈನ್‍ಮೆಂಟ್‍ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಹೇಳಿದ್ದಾರೆ
ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ, ನಟ ಕಿಚ್ಚ ಸುದೀಪ ಮಾತನಾಡಿ, “ಬುಲ್ಡೋಜರ್ಸ್ ತಂಡವನ್ನು ಮತ್ತೊಮ್ಮೆ ಮುನ್ನಡೆಸುವುದು ಒಂದು ಸೌಭಾಗ್ಯ. ಆಟವನ್ನು ಆನಂದಿಸುತ್ತೇವೆ, ಆದರೆ ನಾವು ಗೆಲ್ಲಲು ಸಹ ಆಡುತ್ತೇವೆ. ಪ್ರತಿ ವರ್ಷ ಲೀಗ್ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ ಮತ್ತು ಅದನ್ನು ಬದ್ಧತೆ ಮತ್ತು ಸ್ಥಿರತೆಯೊಂದಿಗೆ ಹೊಂದಿಸಲು ನಾವು ಉದ್ದೇಶಿಸಿದ್ದೇವೆ” ಎಂದು ಹೇಳಿದರು.
ಸ್ಥಳಗಳು ಮತ್ತು ಪಂದ್ಯಾವಳಿಗಳು
ಈ ಪಂದ್ಯಾವಳಿಯು ಮೂರು ಲೀಗ್ ಪಂದ್ಯಗಳನ್ನು ಒಳಗೊಂಡಿರುತ್ತದೆ, ನಂತರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಪಂದ್ಯಗಳು ವೈಜಾಗ್. ಕೊಯಮತ್ತೂರು ಮತ್ತು ಹೈದರಾಬಾದ್‍ನಲ್ಲಿ ನಡೆಯಲಿದ್ದು, ಪ್ರದೇಶಗಳಾದ್ಯಂತದ ಅಭಿಮಾನಿಗಳಿಗೆ ಲೀಗ್ ಅನ್ನು ಅನುಭವಿಸಲು ಅವಕಾಶ ನೀಡುತ್ತದೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಗಳು:
- ಜನವರಿ 16-ವಿಜಾಗ್:
ಕರ್ನಾಟಕ ಬುಲ್ಡೋಜರ್ಸ್ – ಪಂಜಾಬ್ ಡಿ ಶೇರ್ - ಜನವರಿ 23- ಕೊಯಮತ್ತೂರು:
ಕರ್ನಾಟಕ ಬುಲ್ಡೋಜರ್ಸ್- ತೆಲುಗು ವಾರಿಯರ್ಸ್ - ಜನವರಿ 25- ಕೊಯಮತ್ತೂರು:
ಕರ್ನಾಟಕ ಬುಲ್ಡೋಜರ್ಸ್- ಭೋಜ್‍ಪುರಿ ದಬಾಂಗ್ಸ್ - ಜನವರಿ 31-ಹೈದರಾಬಾದ್: ಸೆಮಿಫೈನಲ್
- ಫೆಬ್ರವರಿ 1- ಹೈದರಾಬಾದ್: ಫೈನಲ್ಸ್

