Bayake beruridaga" movie to release on February 6th

ಫೆಬ್ರವರಿ 6 ರಂದು “ಬಯಕೆಗಳು ಬೇರೂರಿದಾಗ ” ಚಿತ್ರ ಬಿಡುಗಡೆ - CineNewsKannada.com

ಫೆಬ್ರವರಿ 6 ರಂದು “ಬಯಕೆಗಳು ಬೇರೂರಿದಾಗ ” ಚಿತ್ರ ಬಿಡುಗಡೆ

“ಮದುವೆ ಸ್ವರ್ಗದಲ್ಲಿ ನಿಶ್ಚಯ” ಎನ್ನುವ ನಂಬಿಕೆಗೆ ಇದೆ. ಆದರೆ ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 1.7 ಲಕ್ಷ ವಿಚ್ಛೇದನ ದಾವೆಗಳು ಸವಾಲಾಗಿಸಿವೆ. ಇಂತಹದೊಂದು ಕಥೆಯನ್ನು ಮುಂದಿಟ್ಟುಕೊಂಡು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಫೆಬ್ರವರಿ 6 ರಂದು ಸಿನಿಮಾ ತೆರೆಗೆ ಬರುತ್ತಿದೆ

ಸ್ವರ್ಗ ಬಂಧನಕ್ಕೆ ಮುದ್ರೆ ಹಾಕಬಹುದು, ಆದರೆ ಆ ಬಂಧನವನ್ನು ಪೋಷಿಸುವುದು ನಮ್ಮ ಕೈಯಲ್ಲಿದೆ. ವಿಶಾಲ ಸಂಸ್ಕಾರ, ಸಾಮಾಜಿಕ ಒತ್ತಡಗಳ ನಡುವೆ ಸಂವಾದ, ತಾಳ್ಮೆ, ಹೊಂದಾಣಿಕೆಯ ಮೌಲ್ಯಗಳು ಹಿಂದೆ ಸರಿಯುತ್ತಿವೆ.

ಸಂಬಂಧಗಳ ಗಾಂಭೀರ್ಯ ಮತ್ತು ಕುಟುಂಬದ ಮೌಲ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸಿರುವ ‘ಬಯಕೆಗಳು ಬೇರೂರಿದಾಗ’ ಚಲನಚಿತ್ರ ಒಂದು ಪ್ರಕಾಶಪುಂಜವಾಗಿದೆ.ಸಂಬಂಧಗಳನ್ನು ಬಲಪಡಿಸಲು ಸಹಾಯಕವಾದ ಅಂಶಗಳನ್ನು ಹೊಂದಿದೆ. ಬಿಡುಗಡೆಗೆ ಮುನ್ನವೇ 25 ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಈ ಕನ್ನಡ ಚಿತ್ರವನ್ನು ಫೆಬ್ರವರಿ 6 ರಂದು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ

ಇಂತಹ ಸಂದರ್ಭದಲ್ಲಿ, ಆಕರ್ಷ್ ಆದಿತ್ಯ ಅವರ ‘ಬಯಕೆಗಳು ಬೇರೂರಿದಾಗ’ ಕಾದಂಬರಿ ಮತ್ತು ಎನ್. ಜ್ಯೋತಿಲಕ್ಷ್ಮಿ ಅವರ ನಿರ್ದೇಶನದ ಸದ್ಯಕ್ಕೇ 25 ಪ್ರಶಸ್ತಿ ಪಡೆದ ಚಲನಚಿತ್ರ ಪ್ರಸ್ತುತವಾಗಿದೆ.ಕುಟುಂಬ ಮೌಲ್ಯಗಳು ಮತ್ತು ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಚಿತ್ರಿಸುವ ಈ ಕಥೆ, ಸಮಸ್ಯೆಗಳಿಗೆ ದಾರಿ ಹುಡುಕುವಾಗ ಮಹತ್ವದ ಸಂದೇಶವಾಗಿದೆ

ಸಮಾಜದಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದು ಚಿಂತನೀಯ ವಿಷಯವಾಗಿದೆ. ಇದರ ಹಿಂದೆ ಅನೇಕ ಸಾಮಾಜಿಕ-ಆರ್ಥಿಕ ಕಾರಣಗಳಿರಬಹುದು. ಕೆಲಸದ ಒತ್ತಡ, ಪತಿ-ಪತ್ನಿಯರು ಒಬ್ಬರಿಗೊಬ್ಬರು ಸಮರ್ಪಿಸುವ ಸಮಯದ ಕೊರತೆ, ಸಂವಾದದ ಇಲ್ಲವಾಗುವಿಕೆ ಮತ್ತು ದೀರ್ಘಕಾಲೀನ ವಿವಾಹದಲ್ಲಿ ಭಾವನಾತ್ಮಕ ಅಂತರ ಬೆಳೆಯುವುದು ಇವುಗಳಲ್ಲಿ ಮುಖ್ಯವಾದವು. ನಿಜ, ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಕಳೆಯುವ ಸಮಯ ಕುಟುಂಬದೊಂದಿಗೆ ಕಳೆಯುವ ಸಮಯಕ್ಕಿಂತ ಹೆಚ್ಚಾಗುತ್ತಿರುವುದು ಒಂದು ಪ್ರಮುಖ ಅಂಶವಾಗಿದೆ. ಆದರೆ, ಮೂಲ ಸಮಸ್ಯೆ ಸಮಯದ ಕೊರತೆ ಮಾತ್ರವಲ್ಲ, ಗುಣಮಟ್ಟದ ಸಮಯ ಮತ್ತು ಆತ್ಮೀಯ ಸಂವಾದದ ಕೊರತೆಯೂ ಹೌದು.

ಪ್ರೀತಿ ಕುರುಡು, ಆದರೆ ಪ್ರೀತಿ ಮಾಡುವವರು ಕುರುಡರಾಗಬಾರದು. ನಿಮ್ಮ ಆಯ್ಕೆಗಳ ಬಗ್ಗೆ ಸ್ಪಷ್ಟವಾಗಿರಿ, ನಿಮ್ಮ ಸಂಬಂಧದಲ್ಲಿ ಪ್ರಾಮಾಣಿಕರಾಗಿರಿ ಇದೇ ಮಂತ್ರವನ್ನು ‘ಬಯಕೆಗಳು ಬೇರೂರಿದಾಗ’ ಎನ್ನುವ ಈ ಬಹು-ಪುರಸ್ಕೃತ ಚಲನಚಿತ್ರ ತಂಡ ಪ್ರಪಂಚಕ್ಕೇ ಹರಡಲು ಶ್ರಮಿಸುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin