ಮಸ್ತ್ ಮಲೈಕಾ ಹಾಡಿನ ಬಳಿಕ ಅರಗಿಣಿಯೇ ಗೀತೆಗೆ ಧ್ವನಿಯಾದ ಸಾನ್ವಿ ಸುದೀಪ್ - CineNewsKannada.com

ಮಸ್ತ್ ಮಲೈಕಾ ಹಾಡಿನ ಬಳಿಕ ಅರಗಿಣಿಯೇ ಗೀತೆಗೆ ಧ್ವನಿಯಾದ ಸಾನ್ವಿ ಸುದೀಪ್

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್, ಅಪ್ಪನ ಹಾದಿಯಲ್ಲಿ ಚಿತ್ರರಂಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರದಲ್ಲಿ ಮಸ್ತ್ ಮಲೈಕಾ ಹಾಡಿಗೆ ಧ್ವನಿಯಾಗಿದ್ದ ಸಾನ್ವಿ ಸುದೀಪ್ ಇದೀಗ ಅತ್ತೆಯ ಮಗ ಸಂಚಿತ್ ಸಂಜೀವ್ ಅಭಿನಯದ “ಮ್ಯಾಂಗೋ ಪಚ್ಚ” ಚಿತ್ರದ ಅರಗಿಣಿಯೇ ಗೀತೆಗೆ ತಮ್ಮ ಮಧುರ ಕಂಠ ನೀಡಿದ್ದಾರೆ.

ಸಂಚಿತ್ ಸಂಜೀವ್ ಮ್ಯಾಂಗೋ ಪಚ್ಚ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈ ಸಿನಿಮಾದ ಅರಗಿಣಿಯೇ ಹಾಡು ಬಿಡುಗಡೆ ಆಗಿದೆ. ಚರಣ್ ರಾಜ್ ಸಂಗೀತ ನೀಡಿರುವ ಈ ಹಾಡನ್ನ ಸುದೀಪ್ ಪುತ್ರಿ ಸಾನ್ವಿ ಹಾಗೂ ಕಪಿಲ್ ಕಪಿಲನ್ ಹಾಡಿದ್ದಾರೆ ಧನಂಜಯ ರಂಜನ್ ಈ ಗೀತೆಗೆ ಸಾಹಿತ್ಯ ರಚಿಸಿದ್ದಾರೆ

ಕೆ ಆರ್ ಜಿ ಸಂಸ್ಥೆ ಮತ್ತು ಸುಪ್ರಿಯಾನ್ವಿ ಸಂಸ್ಥೆಯ ಮೂಲಕ ಪ್ರಿಯಾ ಸುದೀಪ್, ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ “ ಮ್ಯಾಂಗೋ ಪಚ್ಚ” ಚಿತ್ರಕ್ಕೆ ಬಂಡವಾಳ ಹಾಕಿದ್ದು ಚಿತ್ರದಲ್ಲಿ ಸಂಚಿತ್ ಸಂಜೀವ್‍ಗೆ ನಾಯಕಿಯಾಗಿ ಕಾಜಲ್ ಕುಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಚಿತ್ರಕ್ಕೆ ವಿವೇಕ ಆಕ್ಷನ್ ಕಟ್ ಹೇಳಿದ್ದಾರೆ

ಚಿತ್ರದಲ್ಲಿ ಮಯೂರ್ ಪಟೇಲ್,ಹಂಸ ಪ್ರತಾಪ್, ಜೈ ಗೋಪಿನಾಥ್ ಮತ್ತಿತರ ಕಲಾವಿದರು ನಟಿಸಿದ್ದಾರೆ. ಚಿತ್ರ ಶೀಘ್ರದಲ್ಲಿ ತೆರೆಗೆ ಬರಲು ಸಜ್ಜಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin