Trailer of the film "Beauty" released; Movie releases on July 7th

“ಬ್ಯೂಟಿ” ಚಿತ್ರದ ಟ್ರೈಲರ್ ಬಿಡುಗಡೆ; ಜುಲೈ 7 ರಂದು ಸಿನಿಮಾ ಬಿಡುಗಡೆ - CineNewsKannada.com

ಹೊಸಬರು ಮತ್ತು ಹಳಬರ ಸಂಗಮದಂತಿರುವ “ಬ್ಯೂಟಿ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಜುಲೈ 7ರಂದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಹೆಣ್ಣನ್ನು ಗೌರವಿಸಿ, ರಕ್ಷಿಸಿ ಎನ್ನುವ ಅಡಿ ಬರಹಹೊಂದಿದೆ. ಚಿತ್ರದ ಟ್ರೈಲರ್ ಅನ್ನು ಪತ್ರಕರ್ತ ಭಾಷಾ ಹಾಗು ಸಂಗೀತ ನಿರ್ದೇಶಕ ವಿ. ಮನೋಹರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, ನಿರ್ಮಾಪಕರು ನಿರ್ದೇಶಕರನ್ನು ನಂಬಿ ಹಣ ಹಾಕಿದ್ದಾರೆ. ರಾಜಾ ರವಿಕುಮಾರ್ ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರತಿಭಾನ್ವಿತ ಹುಡುಗ. ನಿರ್ಮಾಪಕರಿಗೆ ಹೇಳಿದ ಸಮಯ ಮತ್ತು ಬಜೆಟ್ ನಲ್ಲಿ ಸಿನಿಮಾ ಮಾಡಿದ್ದಾರೆ. ಇಂತಹ ನಿರ್ದೇಶಕರು ಕನ್ನಡ ಚಿತ್ರಕ್ಕೆ ಅಗತ್ಯವಾಗಿದೆ. ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.

ಯುವ ನಟ ಧನಂಜಯ ಮಾತನಾಡಿ ನಾಯಕಿ ಮಹಾಲಕ್ಷ್ಮಿ ಸಹೋದರಿ, ಒಂದೇ ಸೀರಿಯಲ್ ನಾನು, ಅಮ್ಮ, ತಂಗಿ ಜೊತೆಯಾಗಿ ನಟಿಸಿದ್ದೆವು. ಈಗ ಅಮ್ಮ- ತಂಗಿ “ಬ್ಯೂಟಿ” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂಗಿ ಮನೆಯಲ್ಲಿ ರಾಕ್ಷಿಸಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನಾಯಕ ರವಿಕಾಂತ್ ಮಾತನಾಡಿ ಸಿನಿಮಾ ನನಗೂ ಕನಸು.ಮೊದಲ ಕನ್ನಡ ಸಿನಿಮಾ. ಯಕ್ಷಗಾನ ಕಲಾವಿದ.ಚಿತ್ರಕ್ಕಾಗಿ ಭರತನಾಟ್ಯ ಕಲಿತಿದ್ದೇನೆ. ಸಾಮಾನ್ಯ ಹುಡುಗ, ಪ್ರೀತಿ ಪಡೆಯಲು ಪರದಾಡುತ್ತಿರುವಾಗ ನಡೆಯುವ ಸಂಘರ್ಷ, ಇತ್ತ ಪ್ರೀತಿ ಸಿಗದೆ ನ್ಯಾಯವೂ ಸಿಗದ ಪರಿಸ್ಥಿತಿ ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದರು

ನಾಯಕಿ ಮಹಾಲಕ್ಷ್ಮಿಮಾತನಾಡಿ ಸಾಮಾನ್ಯ ಹೆಣ್ಣುಮಗಳು ಕಂಡ ಕನಸು ನನಸು ಮಾಡಿಕೊಳ್ಳುವ ಸಮಯದಲ್ಲಿ ಸುತ್ತಮುತ್ತಲ ಜನರು ಬೆಂಬಲಿಸುತ್ತಾರಾ ಇಲ್ಲ ಕಾಲೆಳೆಯುತ್ತಾರಾ ಚಿತ್ರದಲ್ಲಿ ನೋಡಬೇಕು, ಇದೊಂದು ಕೌಟುಂಬಿಕ ಚಿತ್ರ ಎಂದರು.

ನಿರ್ದೇಶಕ ರಾಜಾ ರವಿಕುಮಾರ್ ಮಾತನಾಡಿ 31 ಡೇಸ್ ಚಿತ್ರದ ಬಳಿಕ ಎರಡನೇ ಚಿತ್ರ. ಬ್ಯೂಟಿ ಕಥೆ ಕೇಳಿ ನಿರ್ಮಾಪಕರು ಒಪ್ಪಿಕೊಂಡು ಸಿನಿಮಾ ಮಾಡಿದ್ದಾರೆ. ಮನೋಹರ್ ಮೇಲುಕೋಟೆ, ಕುಮಟಾ ಬೆಂಗಳೂರು ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ತಾಯಿ, ಸಹೋದರಿ ಹೆಂಡತಿಯನ್ನು ಗೌರವಿಸಿ ಎನ್ನುವುದನ್ನು ಚಿತ್ರದ ಮೂಲಕ ಹೇಳು ಪ್ರಯತ್ನ ಮಾಡಲಾಗಿದೆ ಎಂದರು

ನಿರ್ಮಾಪಕರಾದ ತನುಜಾ ಮತ್ತು ಮುರುಳಿಕೃಷ್ಣ ದಂಪತಿ ಮಾತನಾಡಿ ಸಿನಿಮಾ ಹೊಸದು. ನಿರ್ದೇಶಕರು ಸ್ನೇಹಿತರು. ಲಿಮಿಟೆಡ್ ಪಿರಿಯಡ್‍ನಲ್ಲಿ ಬಜೆಟ್ ನಲ್ಲಿ ಚಿತ್ರ ಮಾಡಿಕೊಟ್ಟಿದ್ದಾರೆ ಸಿನಿಮಾ ಚೆನ್ನಾಗಿ ಬಂದಿದೆ. ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಹೇಳಿದರು.

ವಿತರಕ ಬಾಗೂರು ಪ್ರಕಾಶ್ ಸೇರಿದಂತೆ ಹಲವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin