The song and trailer of the movie "Mixing Preeti" attracted attention

ಗಮನ ಸೆಳೆದ “ಮಿಕ್ಸಿಂಗ್ ಪ್ರೀತಿ” ಚಿತ್ರದ ಹಾಡು, ಟ್ರೈಲರ್ - CineNewsKannada.com

ಗಮನ ಸೆಳೆದ “ಮಿಕ್ಸಿಂಗ್ ಪ್ರೀತಿ” ಚಿತ್ರದ ಹಾಡು, ಟ್ರೈಲರ್

ಕನ್ನಡ ಚಿತ್ರರಂಗದ ಭರವಸೆಯ ನಟಿ ಸಂಹಿತಾ ವಿನ್ಯಾ, ಪಾವನ, ದಿವ್ಯ ಹಾಗೂ ಪ್ರಿಯಾಂಕ ಸೇರಿ ನಾಲ್ವರು ನಾಯಕಿಯರು ಮತ್ತು ಸಿಂಡೊ ಜೇಕಬ್ ನಾಯಕನಾಗಿ ನಟಿಸಿರುವ : ಮಿಕ್ಸಿಂಗ್ ಪ್ರೀತಿ” ಚಿತ್ರದ ಟ್ರೈಲರ್ ಮತ್ತು ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಎನ್ ಪಿ ಇಸ್ಮಾಯಿಲ್ ನರ್ಮಿಸಿ, ನಿರ್ದೇಶಿಸಿರುವ, ಪೊಲ್ಲಾಚಿ ಮಹಾಲಿಂಗಂ ಮತ್ತು ಕಣ್ಣನ್ ಸಹ ನಿರ್ಮಾಣವಿರುವ “”ಮಿಕ್ಸಿಂಗ್ ಪ್ರೀತಿ” ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಸಿರಿ ಮ್ಯಾಸಿಕ್ ನ ಸುರೇಶ್ ಚಿಕ್ಕಣ್ಣ, ಡಿವೈಎಸ್ಪಿ ರಾಜೇಶ್, ನಿರ್ಮಾಪಕ – ನಿರ್ದೇಶಕ ಡೇವಿಡ್ ಮುಂತಾದವರು ಬಿಡುಗಡೆ ಮಾಡಿ ಶುಭ ಹಾರೈಸಿದರು

ನಿರ್ಮಾಪಕ ಹಾಗೂ ನಿರ್ದೇಶಕ ಎನ್ ಪಿ ಇಸ್ಮಾಯಿಲ್ ಮಾತನಾಡಿ “”ಮಿಕ್ಸಿಂಗ್ ಪ್ರೀತಿ” ಲವ್ ಜಾನರ್ ನ ಚಿತ್ರ. ಹಾಗಾಗಿ ಚಿತ್ರಕ್ಕೆ ಶೇಕಡಾ 100 ರಷ್ಟು ಲವ್ ಎಂಬ ಅಡಿಬರಹವಿದೆ. ಲವ್ ಜಾನರ್ ನ ಚಿತ್ರವಾದರೂ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು.

ನಾಯಕ ಸಿಂಡೊ ಮಾತನಾಡಿ ಪ್ರೀತಿಯ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದೇನೆ ಎಂದು ತಿಳಿಸಿದರು.

ನಿರ್ದೇಶಕ ಇಸ್ಮಾಯಿಲ್ ಅವರ ಕನ್ನಡ ಪ್ರೀತಿಗೆ ಧನ್ಯವಾದ ತಿಳಿಸಿದ ಕನ್ನಡದ ನಾಯಕಿಯರಾದ ಸಂಹಿತ ವಿನ್ಯಾ, ಪಾವನ, ದಿವ್ಯ ಹಾಗೂ ಪ್ರಿಯಾಂಕ ನಿರ್ದೇಶಕರಿಗೆ ವಿಶೇಷ ಉಡುಗೊರೆ ನೀಡಿದರು ಹಾಗೂ ತಮ್ಮ ಪಾತ್ರಗಳ ಬಗ್ಗೆ ವಿವರಿಸಿದರು.

ಸಂಗೀತ ನಿರ್ದೇಶಕ ರಾಜೇಶ್ ಮೋಹನ್ ಮತ್ತು ಗೋಣೇಶ್ವರನ್, ಗೀತರಚನೆಕಾರ ಹಾಗೂ ಗಾಯಕ ಸಚಿನ್, ಛಾಯಾಗ್ರಾಹಕ ಸಾದಿಕ್ ಕಬೀರ್, ನೃತ್ಯ ನಿರ್ದೇಶಕಿ ಡಯಾನ ಹಾಗೂ ಕಾರ್ಯಕಾರಿ ನಿರ್ಮಾಪಕ – ವಿತರಕ ಮರಿಸ್ವಾಮಿ “ಮಿಕ್ಸಿಂಗ್ ಪ್ರೀತಿ ‘ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin