ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5ರ ಕಿರೀಟ ಮುಡಿಗೇರಿಸಿಕೊಂಡ ಡ್ಯಾನ್ಸಿಂಗ್ ಡ್ರಾಗನ್ಸ್
ಮುಂಬೈನಲ್ಲಿ ನಡೆದ ರೆಫೆಕ್ಸ್ ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5, ಬಾಂದ್ರಾದ ವಿಂಗ್ಸ್ ಅರೆನಾದಲ್ಲಿ ರೋಮಾಂಚಕಾರಿ ಅಂತಿಮ ಪಂದ್ಯದೊಂದಿಗೆ ಮುಕ್ತಾಯಗೊಂಡಿದ್ದು ಆಫ್-ಸೀಸನ್ ಅಲ್ಟಿಮೇಟ್ ಆಯೋಜಿಸಿದ ಈ ಲೀಗ್ ನಾಲ್ಕು ವಾರಾಂತ್ಯಗಳಲ್ಲಿ ತೀವ್ರ ಸ್ಪರ್ಧೆಗೆ ಸಾಕ್ಷಿಯಾಯಿತು. ಡ್ಯಾನ್ಸಿಂಗ್ ಡ್ರಾಗನ್ಸ್ ದೇಸಿ ಹಾಕ್ಸ್ ವಿರುದ್ಧ 15- 12 ಅಂತರದ ಗೆಲುವಿನೊಂದಿಗೆ ಸತತ ಎರಡನೇ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದುಕೊಂಡಿತು.
ಡ್ಯಾನ್ಸಿಂಗ್ ಡ್ರಾಗನ್ಸ್ ಮತ್ತು ದೇಸಿ ಹಾಕ್ಸ್ ನಡುವಿನ ಅಂತಿಮ ಪಂದ್ಯದಲ್ಲಿ, ಹಾಕ್ಸ್ ತಂಡ ಆರಂಭಿಕ ಹಂತದಲ್ಲಿಯೇ ಮೊದಲ ಬಾರಿಗೆ ಗೆಲುವು ಸಾಧಿಸಿತು. ಡ್ಯಾನ್ಸಿಂಗ್ ಡ್ರಾಗನ್ಸ್ ಪಂದ್ಯದ ನಂತರದ ಹಂತಗಳಲ್ಲಿ ಮುನ್ನಡೆ ಸಾಧಿಸಿತು. ರಾಹುಲ್ ಬರಿಯಾ (ಕಾಳಿ) ನಿರ್ಣಾಯಕ ಪಾಯಿಂಟ್ ನೀಡುವ ಮೂಲಕ 15- 12 ಗೆಲುವು ಸಾಧಿಸಿ ಡ್ಯಾನ್ಸಿಂಗ್ ಡ್ರಾಗನ್ಸ್ಗೆ ಸತತ ಎರಡನೇ ಪ್ರಶಸ್ತಿ ತಂದುಕೊಟ್ಟರು.
ಮೊದಲ ಕ್ವಾಲಿಫೈಯರ್ನಲ್ಲಿ ಡ್ಯಾನ್ಸಿಂಗ್ ಡ್ರಾಗನ್ಸ್ ತಂಡ ದೇಸಿ ಹಾಕ್ಸ್ ತಂಡವನ್ನು 11- 9 ಅಂತರದಿಂದ ಸೋಲಿಸಿ ಫೈನಲ್‍ಗೆ ನೇರ ಪ್ರವೇಶ ಪಡೆಯಿತು. ಫೀಲ್ಡ್ 2 ರಲ್ಲಿ, ಬುಂಬೈ ಬಂಟೈಸ್ ತಂಡ ತೀವ್ರ ಪೈಪೆÇೀಟಿಯ ಎಲಿಮಿನೇಟರ್ನಲ್ಲಿ ರಿಬಾರ್ನ್ ಫೈರ್ ತಂಡವನ್ನು 9- 8 ಅಂತರದಿಂದ ಸೋಲಿಸಿ ಕ್ವಾಲಿಫೈಯರ್ 2 ರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಕ್ವಾಲಿಫೈಯರ್ 2 ರಲ್ಲಿ ದೇಸಿ ಹಾಕ್ಸ್ ತಂಡವು ಬುಂಬೈ ಬಂಟೈಸ್ ತಂಡವನ್ನು 9- 8 ಅಂತರದಿಂದ ಸೋಲಿಸಿ ಫೈನಲ್‍ನಲ್ಲಿ ಡ್ರಾಗನ್ಸ್ ಗೆ ಪೈಪೆÇೀಟಿ ನೀಡುವಲ್ಲಿ ಯಶಸ್ವಿಯಾಗಿದೆ

