Chikmagalur Gravel Fest; Vaibhav Marathi wins

ಚಿಕ್ಕಮಗಳೂರು ಗ್ರೆವೆಲ್ ಫೆಸ್ಟ್; ವೈಭವ್ ಮರಾಠಿಗೆ ಗೆಲುವು - CineNewsKannada.com

ಚಿಕ್ಕಮಗಳೂರು ಗ್ರೆವೆಲ್ ಫೆಸ್ಟ್; ವೈಭವ್ ಮರಾಠಿಗೆ ಗೆಲುವು

ಜೆಕೆ ಟೈರ್ಸ್ ಎಫ್‍ಎಂಎಸ್ಸಿಐ ಇಂಡಿಯನ್ ನ್ಯಾಷನಲ್ ಆಟೋಕ್ರಾಸ್ ಚಾಂಪಿಯನ್ಶಿಪ್ 2025 ರ ಸುತ್ತಿನ ಚಿಕ್ಕಮಗಳೂರು ಗ್ರಾವೆಲ್ ಫೆಸ್ಟ್ 2025 ರಲ್ಲಿ ಗೋವಾದ ವೈಭವ್ ಮರಾಠೆ ಮೊದಲ ಸ್ಥಾನ ಪಡೆದಿದ್ದಾರೆ. ಕುರ್ವಂಗಿ ಗ್ರಾಮದ ಸಾಂಗ್ನಿಪುರದಲ್ಲಿ ನಡೆದ ಈ ಫೆಸ್ಟ್ ನಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದರು.

ಜೆಕೆ ಟೈರ್ಸ್ ತಂಡ ಪ್ರತಿನಿಧಿಸುತ್ತಿದ್ದ ಮರಾಠೆ, ತಂಡದ ಸಹ ಆಟಗಾರರಾದ ಸಯದ್ ಸಲ್ಮಾನ್ ಅವರನ್ನು 02:57.876 ಸೆಕೆಂಡುಗಳಲ್ಲಿ ಹಿಂದಿಕ್ಕಿ ಮುನ್ನಡೆ ಸಾಧಿಸಿದರು. ಸಲ್ಮಾನ್ 02:59.687 ಸೆಕೆಂಡುಗಳಲ್ಲಿ ಮುಗಿಸಿ ದ್ವಿತೀಯ ಸ್ಥಾನ ಪಡೆದರೆ, ಏಮನ್ 03:01.786 ಸೆಕೆಂಡುಗಳಲ್ಲಿ ಓಟ ಮುಗಿಸಿ ಮೂರನೇ ಸ್ಥಾನಕ್ಕೆ ತೃಪ್ತರಾದರು.

ಸಯದ್ ಸಲ್ಮಾನ್ ಐಎನ್‍ಎಸಿ 1 – 2000 ಸಿಸಿ ವರ್ಗದಲ್ಲಿ 02:59.169 ಸೆಕೆಂಡುಗಳ ಸಮಯದಲ್ಲಿ ಓಟ ಮುಗಿಸಿ ಗೆಲುವು ಸಾಧಿಸಿದರು. ಚೇತನ್ ಶಿವರಾಮ್ ಹಾಗೂ ಏಮನ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದರೆ, ವೈಭವ್ ಮರಾಠೆ ಈ ವರ್ಗದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತರಾದರು.

ಐಎನ್‍ಎಸಿ 2 – 1650 ಸಿಸಿ ವರ್ಗದಲ್ಲಿ ಅಶದ್ ಪಾಷಾ ಮೊದಲ ಸ್ಥಾನ ಪಡೆದುಕೊಂಡರು, ಏಮನ್ ಮತ್ತು ಸಯದ್ ಸಲ್ಮಾನ್ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ಸಯದ್ ಸಲ್ಮಾನ್ ಐಎನ್‍ಎಸಿ 2 – 1450 ಸಿಸಿ ವರ್ಗದಲ್ಲಿ ಹಾಗೂ ನಂತರ ಐಎನ್‍ಎಸಿ 2 – 1100 ಸಿಸಿ ವರ್ಗದಲ್ಲಿಯೂ ಗೆಲುವು ಸಾಧಿಸಿದರು.

ಐಎನ್‍ಎಸಿ 2 – 800 ಸಿಸಿ ವರ್ಗದಲ್ಲಿ ಅಜ್ವೀರ್ ಗೆದ್ದರೆ, ಐಎನ್‍ಎಸಿ 3 ವರ್ಗದಲ್ಲಿ ಜೀಶಾನ್ ಮೊಹಮ್ಮದ್ ಪ್ರಶಸ್ತಿ ಪಡೆದರು. ಮಹಿಳಾ ವಿಭಾಗದಲ್ಲಿ ಶಮೀನಾ ಸಿ.ಪಿ 03:41.004 ಸೆಕೆಂಡುಗಳ ಸಮಯದೊಂದಿಗೆ ಪ್ರಥಮ ಸ್ಥಾನ ಪಡೆದರು.

ಈ ಸ್ಪರ್ಧೆಯನ್ನು ಲೋಕೇಶ್ ಗೌಡ ಅವರ ಆಕ್ಟೇನ್ ಪಿಟ್ಸ್ ಪ್ರಚಾರ ಮಾಡಿದ್ದು, ಚಿಕ್ಕಮಗಳೂರು ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಜೇಕೆ ಟೈರ್ ಮೋಟಾಸ್ರ್ಪೋಟ್ರ್ಸ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin