"My Hero" on Amazon Prime from May 30th

ಮೇ 30 ರಿಂದ ಅಮೇಜಾನ್ ಪ್ರೈಮ್ ನಲ್ಲಿ “ಮೈ ಹೀರೋ” - CineNewsKannada.com

ಮೇ 30 ರಿಂದ ಅಮೇಜಾನ್ ಪ್ರೈಮ್ ನಲ್ಲಿ “ಮೈ ಹೀರೋ”

ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ “ಮೈ ಹೀರೊ” ಚಿತ್ರ ಕಳೆದವರ್ಷ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲದೇ ಪ್ರಪಂಚದ ಪ್ರಸಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ “ಮೈ ಹೀರೋ” ಪ್ರದರ್ಶನಗೊಂಡು ಪ್ರಶಸ್ತಿಯನ್ನು ಪಡೆದುಕೊಂಡಿರುವ ಈ ಚಿತ್ರ ಇದೇ ಮೇ 30 ರಿಂದ ಅಮೇಜಾನ್ ಪ್ರೈಮ್ ನಲ್ಲಿ ಪ್ರದರ್ಶನವಾಗಲಿದೆ..

ಇಡೀ ಪ್ರಪಂಚವೇ ಎದುರಿಸುತ್ತಿರುವ ಸೂಕ್ಷ್ಮ ಸಮಸ್ಯೆಯನ್ನು ಸಿನಿಮಾ ಮೂಲಕ ತೆರೆಯ ಮೇಲೆ ತರುವಲ್ಲಿ ನಿರ್ದೇಶಕ ಅವಿನಾಶ್ ವಿಜಯ್ ಕುಮಾರ್ ಗೆದ್ದಿದ್ದಾರೆ. ಹಲವು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಜನಮನ ಗೆದ್ದಿದೆ.

ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದತ್ತಣ್ಣ, ಪ್ರಕಾಶ್ ಬೆಳವಾಡಿ, ಎರಿಕ್ ರಾಬರ್ಟ್, ನಿರಂಜನ್ ದೇಶಪಾಂಡೆ, ಅಂಕಿತ ಅಮರ್, ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣ “ಮೈ ಹೀರೊ” ಚತ್ರಕ್ಕಿದ್ದು, ಅವಿನಾಶ್ ವಿಜಯಕುಮಾರ್ ಅವರೆ ಸಂಭಾಷಣೆ ಬರೆದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin