Blink team releases teaser of new movie “Video”: Curiosity increases

ಬ್ಲಿಂಕ್ ತಂಡದಿಂದ ಹೊಸ ಸಿನಿಮಾ “ವಿಡಿಯೋ” ಚಿತ್ರದ ಟೀಸರ್ ಬಿಡುಗಡೆ: ಕುತೂಹಲ ಹೆಚ್ಚಳ - CineNewsKannada.com

ಬ್ಲಿಂಕ್ ತಂಡದಿಂದ ಹೊಸ ಸಿನಿಮಾ “ವಿಡಿಯೋ” ಚಿತ್ರದ ಟೀಸರ್ ಬಿಡುಗಡೆ: ಕುತೂಹಲ ಹೆಚ್ಚಳ

ನಟ ದೀಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಚಿತ್ರ “ವಿಡಿಯೋ”ದ ಮೊದಲ ಟೀಸರ್ ಹಾಗೂ ಥೀಮ್ ಮ್ಯೂಸಿಕ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಹೊಸ ತಲೆಮಾರಿನ ನಿರ್ದೇಶಕರು ಹಾಗೂ ನಟಿಯರಿಂದ ಟೀಸರ್ ಬಿಡುಗಡೆ ಮಾಡಿದ್ದು ವಿಶೇಷ.ದೆವ್ವದ ಹಾಡು ಹಾಡುವ ಮೂಲಕ ವಿಡಿಯೋ ಟೀಸರ್ ಬಿಡುಗಡೆ ಮಾಡುವ ಮೂಲಕ ವಿಡಿಯೋ ಚಿತ್ರತಂಡ ಹೊಸ ಪ್ರಯತ್ನ ಮಾಡಿದೆ

ಧೀ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಚೊಚ್ಚಲ ನಿರ್ಮಾಣ ವಿಡಿಯೋ ಚಿತ್ರವನ್ನು ಬ್ಲಿಂಕ್ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶಿಸುತ್ತಿದ್ದಾರೆ.“ಬ್ಲಿಂಕ್” ಚಿತ್ರದ ಯಶಸ್ಸಿನ ಬಳಿಕ ದೀಕ್ಷಿತ್ ಶೆಟ್ಟಿ ಮತ್ತು ನಿಧಿ ಬೆಂಗಳೂರು ಜೊತೆಯಾಗಿ ಮಾಡುತ್ತಿರುವ ಎರಡನೇ ಸಿನಿಮಾ, ಚಿತ್ರೀಕರಣ ಆರಂಭವಾಗಿದ್ದು ಇದೇ ವರ್ಷ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹೊಂದಿದೆ

ಭರತ,ಜೀವನ್ ಶಿವಕುಮಾರ್,ತೇಜೇಶ್,ಪ್ರಿಯಾ ಜೆ ಆಚಾರ್, ನಲ್ಮೇ ನಾಚಿಯಾರ್ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.ಪ್ರಸನ್ನ ಕುಮಾರ್ ಸಂಗೀತ, ಅವಿನಾಶ್ ಶಾಸ್ತ್ರಿ ಛಾಯಾಗ್ರಣವಿರೋ ಚಿತ್ರಕ್ಕೆ ಖ್ಯಾತ ವಸ್ತ್ರವಿನ್ಯಾಸಕ ಭರತ್ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin