Happy birthday to Jadesh K. Hampi, director of the film "Land Lord".

“ಲ್ಯಾಂಡ್ ಲಾರ್ಡ್” ಚಿತ್ರದ ನಿರ್ದೇಶಕ ಜಡೇಶ ಕೆ ಹಂಪಿಗೆ ಹುಟ್ಟುಹಬ್ಬದ ಸಂಭ್ರಮ - CineNewsKannada.com

“ಲ್ಯಾಂಡ್ ಲಾರ್ಡ್” ಚಿತ್ರದ ನಿರ್ದೇಶಕ ಜಡೇಶ ಕೆ ಹಂಪಿಗೆ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್‍ವುಡ್ ಸಲಗ ವಿಜಯ್ ಕುಮಾರ್ ನಾಯಕರಾಗಿ ನಟಿಸುತ್ತಿರುವ “ಲ್ಯಾಂಡ್ ಲಾರ್ಡ್” ಚಿತ್ರದ ನಿರ್ದೇಶಕ ಜಡೇಶ ಕೆ ಹಂಪಿಗೆ ಹುಟ್ಟುಹಬ್ಬದ ಸಂಭ್ರಮ . ಈ ಹಿನ್ನೆಲೆಯಲ್ಲಿ ಚಿತ್ರತಂಡ ಪೆÇೀಸ್ಟರ್ ಬಿಡುಗಡೆ ಮಾಡಿ ನೆಚ್ಚಿನ ನಿರ್ದೇಶಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿದ್ದ “ಸಾರಥಿ” ಚಿತ್ರ ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ ಹಾಗೂ ಪುತ್ರ ಸೂರಜ್ ಗೌಡ “ಸಾರಥಿ ಫಿಲಂಸ್” ಮೂಲಕ ನಿರ್ಮಾಣ ಮಾಡುತ್ತಿರುವ ಹಾಗೂ ದುನಿಯಾ ವಿಜಯ್, ರಚಿತಾ ರಾಮ್, ರಿತನ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ.

“ಜಂಟಲ್ ಮ್ಯಾನ್”, “ಗುರುಶಿಷ್ಯರು” ಚಿತ್ರಗಳ ನಿರ್ದೇಶಕ, “ಕಾಟೇರ” ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಇದೇ ವರ್ಷದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.

ವಿಜಯ್ ಕುಮಾರ್(ದುನಿಯಾ ವಿಜಯ್) ನಾಯಕರಾಗಿ ನಟಿಸುತ್ತಿರುವ ಚಿತ್ರದ ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ದುನಿಯಾ ವಿಜಯ್ ಅವರ ಪುತ್ರಿ ರಿತನ್ಯ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin