ನಟ ಜಯರಾಮ್ ಕಾರ್ತಿಕ್ ಅಭಿನಯದ “ಕಾಡ” ಚಿತ್ರ ಬರಲು ಸಜ್ಜು
ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಛಾಪು ಮೂಡಿಸಿರುವ ಜಯರಾಮ್ ಕಾರ್ತಿಕ್ ನಾಯಕನಾಗಿ ನಟಿಸಿರುವ, ಅಮಿತ್ ಕುಮಾರ್ ಸಕ್ಸೇನ ನಿರ್ಮಾಣದ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಟ ವಿಶೃತ್ ನಾಯಕ್ ನಿರ್ದೇಶಿಸಿರುವ ಸೈಕೊ ಥ್ರಿಲ್ಲರ್ ಜಾನರ್ ನ “ಕಾಡ” ಚಿತ್ರ ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ನಿರ್ದೇಶಕ ವಿಶೃತ್ ನಾಯಕ್ ಮಾತನಾಡಿ ಕಾಡ, ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಕಥೆ ಸ್ವಲ್ಪ ವಿಭಿನ್ನವಾಗಿದೆ. ಇದೊಂದು ಸೈಕೋ ಪಾತ್ಗಳ ಕುರಿತಾದ ಸಿನಿಮಾ..ಅಧ್ಯಯನದ ಪ್ರಕಾರ ಶೇಕಡಾ 2ರಷ್ಟು ಜನರು ಯಾವುದೊ ಕಾರಣಕ್ಕಾಗಿ ಸೈಕೋಗಳಾಗುವುದಿಲ್ಲ. ಹುಟ್ಟತ್ತಲೇ ಸೈಕೋಪಾತ್ಗಳಾಗಿರುತ್ತಾರೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಕಥೆ ಬರೆದಿದ್ದೇನೆ ಎಂದರು
ಎರಡು ಕಥೆಯಿಂದ ಶುರುವಾಗುವ ಚಿತ್ರ ಹೋಗುತ್ತಾ ಹೋಗುತ್ತಾ ಒಂದೇ ಕಥೆ ಆಗುತ್ತದೆ. ಜೆ.ಕೆ ಅವರಂತೂ ಬಹಳ ಅದ್ಭುತವಾಗಿ ನಟಿಸಿದ್ದಾರೆ.ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾವ್ಯಶೆಟ್ಟಿ, ಅಚ್ಯುತಕುಮಾರ್, ಉಗ್ರಂ ಮಂಜು, ಶ್ರೀರಾಮ್ ಮುಂತಾದ ಕಲಾವಿದರ ಅಭಿನಯ ಉತ್ತಮವಾಗಿದೆ. ಸತೀಶ್ ಬಾಬು ಸಂಗೀತ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ, ವಿಕಾಸ್ ಚಂದ್ರ ಸಂಕಲನವಿರುವ ಚಿತ್ರಕ್ಕೆ ರಮೇಶ್ ಸಾಹಸ ನಿರ್ದೇಶನವಿದೆ. ಅಮೇರಿಕಾದಲ್ಲಿರುವ ನಿರ್ಮಾಪಕರಾದ ಅಮಿತ್ ಕುಮಾರ್ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದರು.

ನಟ ಜೆಕೆ ಮಾತನಾಡಿ ಕಾಡ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ಹಾಗೂ ಚಿತ್ರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ. ಸಕಲೇಶಪುರದಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ತಂತ್ರಜ್ಞರ ಕಾರ್ಯ ವೈಖರಿ ಹಾಗೂ ಸಹ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಹೇಳಿದರು.
ಸಂಕಲನಕಾರ ವಿಕಾಸ್ ಚಂದ್ರ ಹಾಗೂ ನಟ ಶ್ರೀರಾಮ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

