ಏಪ್ರಿಲ್ 10 ರಂದು “ಗ್ಯಾಂಗ್ಸ್ ಆಫ್ ಯುಕೆ” ಚಿತ್ರ ತೆರೆಗೆ
ಡೆಡ್ಲಿ ಆರ್ಟ್ಸ್ ಬ್ಯಾನರ್ ಮೂಲಕ ಮಾದೇಶ ಖ್ಯಾತಿಯ ರವಿ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ‘ಗ್ಯಾಂಗ್ಸ್ ಆಫ್ ಯುಕೆ’ ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಂಗನಾಥ್ ರವೀಂದ್ರ ಚಿತ್ರದ ನಿರ್ಮಾಪಕರು.

ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ರಣರೋಚಕ ಘಟನೆ ಇಟ್ಟುಕೊಂಡು ನಿರ್ದೇಶಕ ರವಿ ಶ್ರೀವತ್ಸ ರಕ್ತ ತನ್ನ ಕುರುಹನ್ನು ಬಿಟ್ಟು ಹೋಗುತ್ತೆ, ಜಿದ್ದು ಒಬ್ಬರಿಂದ ಒಬ್ಬರಿಗೆ ಟ್ರಾವೆಲ್ ಆಗುತ್ತೆ ಅನ್ನೋ ಕಾನ್ಸೆಪ್ಟ್ ಮೇಲೆ ಈ ಚಿತ್ರವನ್ನು ನಿರೂಪಿಸಿದ್ದಾರೆ. ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದೆ.
ಒರಟ ಪ್ರಶಾಂತ್, ಸೋನು ಉಪಾಧ್ಯ, ಶ್ರೀನಗರ ಮುನಿ, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಪ್ರವೀಣ್, ಉಗ್ರಂ ರೆಡ್ಡಿ ಅಲ್ಲದೆ ಕೆವಿ. ರಾಜು À ಪುತ್ರ ಅಮೋಘ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಹಿರಿಯನಟ ಬಾಲಕೃಷ್ಣ ರೀತಿ ಕಾಣುವ ಟಂಕಸಾಲೆ ಉಮೇಶ್, ಮಹಂತೇಶ್ ಹುಲ್ಲೂರು ಸೇರಿ ಒಂದಷ್ಡು ಸ್ಥಳೀಯ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪತ್ರಕರ್ತ ನವೀನ್ ಬಂಗಾರಪ್ಪ ಭೋಸರಾಜ ಎಂಬ ರಾಜಕಾರಣಿಯಾಗಿ ನಟಿಸಿದ್ದಾರೆ.

ಶಿಶುನಾಳ ಷರೀಫರ ಕೆಲ ಗೀತೆಗಳನ್ನು ಬಳಸಿಕೊಳ್ಳಲಾಗಿದ್ದು. ಒಟ್ಟು 9 ಹಾಡುಗಳು ಚಿತ್ರದಲ್ಲಿವೆ. ವಿ.ಸುಕುಮಾರ್ ಸಂಗೀತ, ಆರ್.ಗಿರಿ ಛಾಯಾಗ್ರಹಣ, ಎಲ್.ಎನ್.ರೆಡ್ಡಿ ಸಂಕಲನವಿದೆ.

