"Karnata Balam Ajeyam" actor Dhyan Yogeshwar is a 'one take artist': Director S, Naganna praises

“ಕರ್ನಾಟ ಬಲಂ ಅಜೇಯಂ” ಚಿತ್ರದ ನಟ ಧ್ಯಾನ್ ಯೋಗೇಶ್ವರ ‘ಒನ್ ಟೇಕ್ ಆರ್ಟಿಸ್ಟ್’ : ನಿರ್ದೇಶಕ ಎಸ್, ನಾಗಣ್ಣ ಪ್ರಶಂಸೆ - CineNewsKannada.com

“ಕರ್ನಾಟ ಬಲಂ ಅಜೇಯಂ” ಚಿತ್ರದ ನಟ ಧ್ಯಾನ್ ಯೋಗೇಶ್ವರ ‘ಒನ್ ಟೇಕ್ ಆರ್ಟಿಸ್ಟ್’ : ನಿರ್ದೇಶಕ ಎಸ್, ನಾಗಣ್ಣ ಪ್ರಶಂಸೆ

“ಕರ್ನಾಟ ಬಲಂ ಅಜೇಯಂ” ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಯುವ ನಟ ಧ್ಯಾನ್ ಯೋಗೇಶ್ವರ ಅವರ ನಟನೆ, ಹಾವ, ಭಾವ, ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ರೀತಿಗೆ ಹಿರಿಯ ನಿರ್ದೇಶಕ ಎಸ್, ನಾಗಣ್ಣ ಮೆಚ್ಚುಗೆ ವ್ಯಕ್ತಪಡಿಸಿ, ಧ್ಯಾನ್ ಒನ್ ಟೇಕ್ ಆರ್ಟಿಸ್ಟ್ ಆಗ್ತಾರೆ ಎಂದು ಗುಣಗಾನ ಮಾಡಿದ್ದಾರೆ

“ಕರ್ನಾಟ ಬಲಂ ಅಜೇಯಂ” ಚಿತ್ರದ ಹಾಡಿನ ಚಿತ್ರೀಕರಣ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಐತಿಹಾಸಿಕ ಬೆಟ್ಟದಲ್ಲಿ ನಡೆದಿತ್ತು. ಅಲ್ಲಿಗೆ ಸಿನಿಮಾ ಪತ್ರಕರ್ತರನ್ನು ಆಹ್ವಾನಿಸಿದ್ದ ಚಿತ್ರತಂಡ ಚಿತ್ರೀಕರಣದ ನಂತರ ಮಾತಿಗೆ ಸಿಕ್ಕಿತು. ಈ ವೇಳೆ ನಿರ್ದೇಶಕ ಎಸ್. ನಾಗಣ್ಣ, ಯುವ ನಟನ ಕಾರ್ಯಶೈಲಿ ಕೊಂಡಾಡಿದ್ದಾರೆ

ಈ ವೇಳೆ ಮಾತನಾಡಿದ ನಿರ್ದೇಶಕ ಎಸ್.ನಾಗಣ್ಣ ಮಾತನಾಡಿ , ನೃತ್ಯ ನಿರ್ದೇಶಕ ಮೋಹನ್ ಅವರ ಸ್ಪೀಡಿಗಿಂತ ದಬ್ಬಲ್ ಆಗಿ ನಟ ದ್ಯಾನ್ ಡ್ಯಾನ್ಸ್ ಮಾಡ್ತಾ ಇದ್ದಾರೆ. ಈ ಮೂಲಕ ಒನ್ ಟೇಕ್ ಆರ್ಟಿಸ್ಟ್ ಅನ್ನಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅವರು ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ರೀತಿ, ಹೇಳಿದನ್ನು ಅಚ್ಚುಕಟ್ಟಾಗಿ ಮಾಡ್ತಾರೆ, ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ ಎಂದರು

ಸಂಭಾಷಣೆ ,ಕಥಾ ವಿಭಾಗದಲ್ಲಿ ಎಂ.ಎಸ್ ರಮೇಶ್ ತಂಡ ದೊಡ್ಡ ಬಲವಾಗಿದೆ. ಛಾಯಾಗ್ರಾಹಕ ಶೇಖರ್ ಚಂದ್ರು ಅದ್ಬುತವಾಗಿ ಚಿತ್ರೀಕರಣ ಮಾಡುತ್ತಿದ್ಸಾರೆ. ಹೊಸಪೇಟೆಯಲ್ಲಿ ಚಿತ್ರೀಕರಣ ಮಾಡಿಕೊಂಡ ನಂತರ ಚನ್ನಪಟ್ಟಣ ನಂತರ ಬಾಗಲಕೋಟೆ, ಬೆಳಗಾವಿ ಮತ್ತು ಹುಬ್ಬಳಿಯಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ಹೇಳಿದರು

1500 ವರ್ಷದ ಹಿಂದಿನ ಪುಲಿಕೇಶಿ ಆಡಳಿತ ಮತ್ತು ಈಗಿನ ಕಾಲಘಟ್ಟಕ್ಕೆ ಹೊಂದಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಕಳೆದ 6 ದಿನಗಳಿಂದ ನಡೆಯುತ್ತಿರುವ ಹಾಡಿನ ಚಿತ್ರೀಕರಣದಲ್ಲಿ ಬರೋಬ್ಬರಿ 1 ಸಾವಿರ ಮಂದಿ ಭಾಗಿಯಾಗಿದ್ದಾರೆ. ಬೇರೆ ಭಾಷೆಯಲ್ಲಿ ಕಾಲ್ಪನಿಕ ಕಥೆಗಳ ಸನಿಮಾ ಬರುತ್ತಿವೆ, ಆದರೆ ಕನ್ನಡದಲ್ಲಿ ರಾಜ ಮಹರಾಜರ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಮತ್ತು 6ನೇ ಶತಮಾನದ ಕಾಲಘಟ್ಟದ ಕಥೆಯನ್ನು ಚಿತ್ರದ ಮೂಲಕ ಹೇಳಲಾಗುತ್ತಿದೆ , ಸಾಮಾಜಿಕ ಮತ್ತು ಐತಿಹಾಸಿಕ ಹಿನ್ನಲೆಯಲ್ಲಿ ಚಿತ್ರೀಕರಣ, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಟಿ ಮಣಿಕಾ ವಿಶ್ವಕರ್ಮ ಮಾತನಾಡಿ, ಕನ್ನಡದಲ್ಲಿ ಮೊದಲ ಸಿನಿಮಾ, ನನ್ನ ಭಾಗದ ಚಿತ್ರೀಕರಣ ಆರಂಭವಾಗಿದೆ, ಚಿತ್ರದಲ್ಲಿ ಉತ್ತಮ ಪಾತ್ರ ಸಿಕ್ಕಿದೆ. ನಿರ್ಮಾಪಕ ಸಿಪಿ ಯೋಗೇಶ್ವರ ಅವರಂತೂ ನಿರ್ಮಾಣದಲ್ಲಿ ರಾಜಿ ಇಲ್ಲದಂತೆ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ, ನಟ ಧ್ಯಾನ್ ಅವರ ಶ್ರಮ ಪ್ರಶಂಸನೀಯ, ನಿರ್ದೇಶಕ ಎಸ್. ನಾಗಣ್ಣ ಮತ್ತು ಇಡೀ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ ಎಂದರು

ಹಿರಿಯ ನಟಿ ಲಯ ಮಾತನಾಡಿ, ಚಿತ್ರದಲ್ಲಿ ನಟ ಧ್ಯಾನ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 20 ವರ್ಷಗಳ ನಂತರ ಮರಳಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇನೆ, ಒಳ್ಳೆಯ ಪಾತ್ರ ಸಿಕ್ಕಿದೆ. ಇಡೀ ತಂಡ ಉತ್ತಮ ಚಿತ್ರ ತೆರೆಗೆ ತರಲು ಸಹಕಾರ ನೀಡಿದೆ, ಅವರ ಜೊತೆ ನಾವೂ ಭಾಗಿಯಾಗಿರುವುದು ಖುಷಿ ಕೊಟ್ಟಿದೆ ಎಂದು ಹೇಳಿಕೊಂಡರು

ಸಂಭಾಷಣೆ ಬರೆದಿರುವ ಎಂ.ಎಸ್ ರಮೇಶ್ ಮಾತನಾಡಿ, ಕರ್ನಾಟ ಬಲಂ ಅಜೇಯಂ ಚಿತ್ರಕ್ಕೆ ಇತಿಹಾಸ, ಪ್ರಸ್ತುತ ದಿನಗಳನ್ನು ಬ್ಲೆಂಡ್ ಮಾಡಿ ಕಥೆ ಮಾಡಲಾಗಿದೆ, ಅದನ್ನು ಅಚ್ಚುಕಟ್ಟಾಗಿ ನಿರ್ಮಾಪಕ ಸಿಪಿ ಯೇಗೇಶ್ವರ್ ಮಾಡಿದ್ದು, ಕಥಾ ವಿಸ್ತರಣೆಯಲ್ಲಿ ತಮ್ಮ ತಂಡ ತೊಡಗಿಸಿಕೊಂಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು

ಹಿರಿಯ ಕಲಾವಿದರಾದ ಸಂಪತ್ ಮೈತ್ರೈಯಾ ಮಾತನಾಡಿ ಚಿತ್ರದಲ್ಲಿ ಮಾನಸಿ ಗಂಡನ ಪಾತ್ರ. ಒಳ್ಳೆಯ ಪಾತ್ರ ಸಿಕ್ಕಿದೆ. ಯುವ ನಟ ಧ್ಯಾನ್ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಬೆಳೆಯುವ ಎಲ್ಲಾ ಸಾಮಥ್ರ್ಯವಿದೆ . ಒನ್ ಟೇಕ್ ಕಲಾವಿದನಾಗಬೇಕು ಎನ್ನುವ ಉದ್ದೇಶದಿಂದ ಧ್ಯಾನ್ ಸವಾಲು ಸ್ವೀಕಾರ ಮಾಡಿರುವುದು ಒಳ್ಳೆಯ ಬೆಳವಣಿಗೆ. ಚಿತ್ರೀಕರಣದ ಸಮಯದಲ್ಲಿ ಮತ್ತೊಬ್ಬ ನಿರ್ಮಾಪಕಿಯಾದ ಶೀಲಾ ಯೋಗೇಶ್ವರ ಅವರು ನಾಯಕ ಹೇಗೆ ನಟಿಸುತ್ತಿದ್ದಾನೆ ಎಂದು ಸಾರ್ವಜನಿಕರ ಅಭಿಪ್ರಾಯ ಪಡೆದು ಅದನ್ನು ಚಿತ್ರಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ ಎಂದರು

ಮತ್ತೊಬ್ಬ ಕಲಾವಿದ ಬಲರಾಜವಾಡಿ ಮಾತನಾಡಿ, ಚಿತ್ರದಲ್ಲಿ ಎರಡೂ ಕಾಲಘಟ್ಟದಲ್ಲಿ ಬರುವ ಕಾಕನ ಪಾತ್ರ. ನಾಯಕ ಧ್ಯಾನ್ ಮತ್ತು ನಿರ್ಮಾಪಕ ಸಿಪಿ ಯೋಗೇಶ್ವರ ಅವರು ನಿಭಾಯಿಸಿರುವ ರೈತನ ಪಾತ್ರದ ಜೊತೆಗೆ ಬರುವ ಪಾತ್ರ. ಉತ್ತಮ ಚಿತ್ರವಾಗುವ ವಿಶ್ವಾಸವಿದೆ ಎಂದು ಹೇಳಿಕೊಂಡರು

ಹಿರಿಯ ನಟಿ ಮಾನಸಿ ಸುಧೀರ್, ಇದುವರೆಗೂ ದೊಡ್ಡ ದೊಡ್ಡವರಿಗೆ ಅಮ್ಮನಾಗುತ್ತಿದ್ದೆ. ಈಗ ಚಿಕ್ಕ ಮಗುವಿಗೆ ತಾಯಿಯಾಗಿದ್ದೇನೆ. ಪಾತ್ರ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಮಾಹಿತಿ ಹಂಚಿಕೊಂಡರು

ಛಾಯಾಗ್ರಾಹಕ ಶೇಖರ್ ಚಂದ್ರು ಮಾತನಾಡಿ, ಏಕಕಾಲಕ್ಕೆ ಎರಡು ಮೂರು ಕ್ಯಾಮರ ಬಳಸಿಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ, ನಿರ್ಮಾಪಕರು ಕೇಳಿದಕ್ಕೆ ಯಾವುದೂ ಕೊರತೆ ಮಾಡಿಲ್ಲ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ
ನೃತ್ಯ ನಿರ್ದೇಶಕ ಭಜರಂಗ ಮೋಹನ್, ಮಜಾ ಟಾಕೀಸ್ ಪವನ್ ಸೇರಿದಂತೆ ಕಲಾವಿದರು ದಂಡು ಭಾಗಿಯಾಗಿತ್ತು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin