"Karnataka Balam Ajeyam": Aim to bring the stories of the state's history to the people: C.P. Yogeshwar

“ಕರ್ನಾಟ ಬಲಂ ಅಜೇಯಂ” : ರಾಜ್ಯದ ಇತಿಹಾಸದ ಕಥೆಗಳನ್ನು ಜನರ ಮುಂದಿಡುವ ಗುರಿ : ಸಿ.ಪಿ ಯೋಗೇಶ್ವರ - CineNewsKannada.com

“ಕರ್ನಾಟ ಬಲಂ ಅಜೇಯಂ” : ರಾಜ್ಯದ ಇತಿಹಾಸದ ಕಥೆಗಳನ್ನು ಜನರ ಮುಂದಿಡುವ ಗುರಿ : ಸಿ.ಪಿ ಯೋಗೇಶ್ವರ

“ಕರ್ನಾಟ ಬಲಂ ಅಜೇಯಂ” ಚಿತ್ರಕ್ಕಾಗಿ ಪುತ್ರ ಧ್ಯಾನ್ ಅಗತ್ಯ ತಯಾರಿ,ಸಿದ್ದತೆ ಮಾಡಿಕೊಂಡಿದ್ದು ಕನ್ನಡ ಚಿತ್ರರಂಗದಲ್ಲಿ ಉತ್ತಮ ನಟನಾಗುವ ಎಲ್ಲಾ ಲಕ್ಷಣಗಳಿವೆ. ನಾಲ್ಕೈದು ಚಿತ್ರ ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. “ಕರ್ನಾಟ ಬಲಂ ಅಜೇಯಂ” ಮುಂದಿನ ವರ್ಷ ಸಕ್ರಾಂತಿಗೆ ಚಿತ್ರ ತೆರೆಗೆ ತರುವ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಆ ನಂತರ ಸೈನಿಕ -2 ಚಿತ್ರ ಕೈಗೆತ್ತಿಕೊಳ್ಳುತ್ತೇವೆ…”

ಹೀಗಂತ ಹೇಳಿಕೊಂಡರು ನಟ, ನಿರ್ಮಾಪಕ ಸಿ.ಪಿ ಯೋಗೇಶ್ವರ್.

“ಕರ್ನಾಟ ಬಲಂ ಅಜೇಯಂ” ಚಿತ್ರದ ಚಿತ್ರೀಕರಣ ಬಾಗಲಕೊಟೆಯ ಬಾದಾಮಿಯ ಐತಿಹಾಸಿಕ ಕೋಟೆಯಲ್ಲಿ ಹಾಡಿನ ಚಿತ್ರೀಕರಣ ನಡೆದಿತ್ತು. ಚಿತ್ರೀಕರಣ ಸ್ಥಳಕ್ಕೆ ಬೆಂಗಳೂರಿನಿಂದ ಸಿನಿಮಾ ಪತ್ರಕರ್ತರನ್ನು ಸಿನಿಮಾ ತಂಡ ಸ್ಥಳಕ್ಕೆ ಆಹ್ವಾನಿಸಿತ್ತು. ಈ ವೇಳೆ ಮಾಹಿತಿ ಹಂಚಿಕೊಂಡರು.

25ವರ್ಷಗಳ ನಂತರ ಮರಳಿ ಚಿತ್ರರಂಗಕ್ಕೆ ಬಂದಿದ್ದೇನೆ. ಜೊತೆಗೆ ಚಿತ್ರದ ಮೂಲಕ ಮಗ ಧ್ಯಾನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ. ನಾನು ಚಿತ್ರರಂಗಕ್ಕೆ ಬಂದ ಸಮಯದಲ್ಲಿ ನೆಲೆ ಕಂಡುಕೊಳ್ಳಲು 15- 20 ವರ್ಷ ಸೈಕಲ್ ಹೊಡೆದಿದ್ದೆ. ಸಾಧನೆ ಮಾಡುವ ಸಮಯದಲ್ಲಿ ರಾಜಕಾರಣಕ್ಕೆ ಬಂದೆ. ನಾನು ಮಾಡಲು ಸಾದ್ಯವಾಗದ ಕೆಲಸವನ್ನು ಪುತ್ರನ ಮೂಲಕ ಈಡೇರಿಸುವ ಉದ್ದೇಶ ನಮ್ಮದು.. ಹೀಗಾಗಿಯೇ “ಕರ್ನಾಟ ಬಲಂ ಅಜೇಯಂ” ಮತ್ತು ಸೈನಿಕ – 2 ಚಿತ್ರ ಕೈಗೆತ್ತಿಕೊಂಡಿದ್ದೇವೆ. ಎಂದರು.

ಪುತ್ರ ದ್ಯಾನ್ ಚಿತ್ರರಂಗಕ್ಕೆ ಬೇಕಾದ ಎಲ್ಲಾ ಸಿದ್ದತೆ ಮತ್ತು ತಯಾರಿ ಮಾಡಿಕೊಂಡಿದ್ದಾರೆ. ಪಕ್ವತೆಯಿಂದ ನಟಿಸುತ್ತಿದ್ದಾನೆ. ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಮತ್ತು ಸದಭಿರುಚಿಯ ಚಿತ್ರ ಕೊಡುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು

“ಕರ್ನಾಟ ಬಲಂ ಅಜೇಯಂ” ಚಿತ್ರಕ್ಕೆ ಜುಲೈ 5 ರಂದು ಚಿತ್ರದ ಮುಹೂರ್ತ ಆದ ನಂತರ ಸತತವಾಗಿ ಚಿತ್ರೀಕರಣ ಮಾಡಲಾಗಿದೆ. ನವಲಗುಂದದ ರೈತ ಹೋರಾಟದ ಕಥೆಯನ್ನೂ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರದಲ್ಲಿ ಪ್ಯಾಶ್ ಬ್ಯಾಕ್ ನಲ್ಲಿ ಬರುವ ಸನ್ನಿವೇಶದಲ್ಲಿ ರೈತ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದೇನೆ ಎಂದರು.

ಬಾದಾಮಿ ಚಿತ್ರೀಕರಣದ ಬಳಿಕ ಹೊಸಪೇಟೆಯಲ್ಲಿ ಚಿತ್ರೀಕರಣ ಮಾಡಿ ಆ ನಂತರ ಹಳೆಯ ಮೈಸೂರು ಭಾಗ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗುವುದು. ಸಂಕ್ರಾಂತಿಗೆ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ಉದ್ದೇಶ ಹೊಂದಲಾಗಿದೆ ಎಂದರು.

“ಕರ್ನಾಟ ಬಲಂ ಅಜೇಯಂ” ಅಜೇಯ ಸೇನೆ

200 ವರ್ಷಗಳ ಕಾಲ ಚಾಲುಕ್ಯ ಸಾಮ್ರಾಜ್ಯ ಬ್ರಿಟೀಷರು ಭಾರತಕ್ಕೆ ಬರುವುದನ್ನು ತಡೆದಿದ್ದರು. ಗುಜರಾತ್‍ನ ಕಚ್‍ನಿಂದ ದಕ್ಷಿಣ ಭಾರತದ ತನಕ ತಮ್ಮದೇ ಆದ ಸೇನೆ ಕಟ್ಟಿಕೊಂಡಿದ್ದರು. ಅದರ ಹೆಸರೇ “ಕರ್ನಾಟ ಬಲಂ ಅಜೇಯಂ”. ಅದೇ ಹೆಸರಲ್ಲಿ ಚಿತ್ರ ಮಾಡಲಾಗುತ್ತಿದೆ. ಚಿತ್ರದ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಇತಿಹಾಸ ಹೇಳಲಾಗುತ್ತಿದೆ. ಉತ್ತರ ಕರ್ನಾಟಕದಿಂದ ಮೈಸೂರು ತನಕ ಬರುವ ಕರ್ನಾಟಕದ ಇತಿಹಾಸ ಬಿಂಬಿಸುವ ಚಿತ್ರವೂ ಕೂಡ ಎಂದರು

ಉತ್ತರ ಕರ್ನಾಟಕ ಬಂದಿ ಗುಳೆ ಬರ್ತಾರೆ. ಪುಲಕೇಶಿ ನಾಡಿನ ಜನ ವಲಸೆ ಯಾಕೆ. ಈ ಭಾಗದಲ್ಲಿ ಸಮಗ್ರ ನೀರಾವರಿಯಾಗಬೇಕು. ಜೊತೆಗೆ ಕರ್ನಾಟಕದ ಸಮಗ್ರ ಚಿತ್ರಣವನ್ನು ಚಿತ್ರದ ಮೂಲಕ ನೀಡಲಾಗುತ್ತಿದೆ, ಪುಲಿಕೇಶಿ ಸೈನ್ಯದ ಹೆಸರು “ಕರ್ನಾಟಬಲಂ ಅಜೇಯಂ” ರಾಜ್ಯದ ನೈಜ ಇತಿಹಾಸವಿರುವ ಕಥೆಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಬಾದಾಮಿಯಲ್ಲಿ 7ದಿನಗಳ ಚಿತ್ರೀಕರಣ ಮಾಡಲಾಗಿದೆ. ಬಾದಾಮಿ, ಐಹೊಳೆ,ಪಟ್ಟದಕಲ್ಲು ಸೇರಿದಂತೆ ಹಲವು ಕಡೆ ಪುಲಿಕೇಶಿಯ ಕುರುಹುಗಳಲ್ಲಿ ಚಿತ್ರೀಕರಣ ಮಾಡಲಾಗುವುದು .ಜೊತೆಗೆ ಚಾಲುಕ್ಯ ಸಾಮಾಜ್ಯದ ಹಿರಿಮೆ ಗರಿಮೆ ಎತ್ತಿ ಹಿಡಿಯುವ ಕೆಲಸ ಮಾಡಲಾಗಿದೆ. ಸದ್ಯ ಶೇಕಡಾ 35 ರಷ್ಟು ಭಾಗದ ಚಿತ್ರೀಕರಣ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಚಿತ್ರದ ಕಥೆ ಮಾಡುವಾಗ ನೈಜತೆಗೆ ಒತ್ತು ನೀಡಲಾಗುತ್ತಿದೆ, ಇದಕ್ಕಾಗಿ ಸಂಶೋಧಕ ತಂಡ ಕೆಲಸ ಮಾಡುತ್ತಿದೆ. ನಮ್ಮ ನಾಡಿನ ರಾಜನ ಕಥೆಗಳನ್ನು ಜನರ ಮುಂದಿಡುವ ಪ್ರಯತ್ನ ನಮ್ಮದು ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ವಿವರ ನೀಡಿದರು ನಿರ್ಮಾಪಕ ಸಿಪಿ ಯೋಗೇಶ್ವರ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin